ಪುತ್ತೂರು ಸೆಲ್ ಝೋನ್‌ನಲ್ಲಿ ಬಿಗ್ ದೀಪಾವಳಿ ಸೇಲ್

0

ಬಂಪರ್ ಬಹುಮಾನ ಗೋವಾ ಟೂರ್, ಪ್ರಥಮ ಬಹುಮಾನ ಕೂರ್ಗ್ ಟೂರ್ ಪ್ಯಾಕೇಜ್ ಗೆಲ್ಲುವ ಅವಕಾಶ

ಪುತ್ತೂರು: ಪ್ರತಿಷ್ಠಿತ ಮೊಬೈಲ್ ಮಳಿಗೆಗಳಲ್ಲಿ ಒಂದಾದ ಇಲ್ಲಿನ ವೆಂಕಟ್ರಮಣ ದೇವಸ್ಥಾನದ ಬಳಿ ಮತ್ತು ದೇವಣ್ಣ ಕಿಣಿ ಕಟ್ಟಡದಲ್ಲಿರುವ ಸೆಲ್ ಝೋನ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಟೂರ್ ಪ್ಯಾಕೇಜ್’ ಆಫರ್ ಎಕ್ಸ್ಚೇಂಜ್ ಮೇಳ, ಲೋನ್ ಮೇಳ ಮತ್ತು ವಿಶೇಷ ಉಡುಗೊರೆಯೊಂದಿಗೆ ಹಬ್ಬದ ಸಂಭ್ರಮವನ್ನು ಸವಿಯಲು ಮುಂದಾಗಿದೆ.

ಸಂಭ್ರಮಕ್ಕೆ ಹೊಸ ಸಂತೋಷ ಸೇರ್ಪಡಿಸಿ ನಗು ಮುಖದ ಸೇವೆಯೊಂದಿಗೆ, ಗ್ರಾಹಕರು ವಿಶೇಷ ಉಡುಗೊರೆಗಳನ್ನು ತಮ್ಮದಾಗಿಸಿಕೊಳ್ಳಲು ಈ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಸ್ಮಾರ್ಟ್ಫೋನ್ ಖರೀದಿಸಿ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳನ್ನು ಪ್ರತಿ ನಿತ್ಯ ಗೆಲ್ಲುವ ಅವಕಾಶವಿದೆ. ಬಂಪರ್ ಬಹುಮಾನವಾಗಿ ಗೋವಾ ಟೂರ್ ಪ್ಯಾಕೇಜ್ ಮತ್ತು ಪ್ರಥಮ ಬಹುಮಾನವಾಗಿ ಕೂರ್ಗ್ ಟೂರ್ ಪ್ಯಾಕೇಜ್‌ನೊಂದಿಗೆ 4 ಟಿವಿಎಸ್ ಸ್ಕೂಟರ್‌ಗಳು, 20 ಎಲ್‌ಇಡಿ ಟಿವಿಗಳನ್ನು ತಮ್ಮದಾಗಿಸಿಕೊಳ್ಳುವ ಅವಕಾಶವಿದೆ. ಮೊಬೈಲ್ ಪೋನ್‌ನಲ್ಲಿ ರೂ.10ಸಾವಿರದ ತನಕ ಕ್ಯಾಶ್‌ಬ್ಯಾಕ್, ರೂ. 7,999ರ ಸ್ಮಾರ್ಟ್ವಾಚ್ ಕೇವಲ ರೂ. 1,699ಕ್ಕೆ, ರೂ. 6,999ರ ಇಯರ್ ಬಡ್ ಕೇವಲ ರೂ. 999ಕ್ಕೆ ಖರೀದಿಸುವ ಅವಕಾಶ, ಇದರ ಜೊತೆಗೆ ಸ್ಮಾರ್ಟ್ ವಾಚ್‌ಗಳ ಮೇಲೆ ಶೇ.70 ರಿಯಾಯಿತಿ ನೀಡಲಾಗಿದೆ. ಶೂನ್ಯ ಬಡ್ಡಿದರದಲ್ಲಿ ಸುಲಭ ಕಂತಿನ ಮೂಲಕ ಬಜಾಜ್ ಫೈನಾನ್ಸ್, ಟಿ.ವಿ.ಎಸ್ ಕ್ರೆಡಿಟ್, ಹೆಚ್.ಡಿ.ಬಿ ಫೈನಾನ್ಸ್ ಮತ್ತು ಹೆಚ್.ಡಿ.ಎಫ್.ಸಿ ಬ್ಯಾಂಕ್, ಕೋಟಕ್, ಸ್ಯಾಮ್‌ಸಂಗ್ ಪೈನಾನ್ಸ್, ಮುಖಾಂತರ ಪಾವತಿ ಮಾಡುವ ಸುವರ್ಣಾವಕಾಶವಿದೆ. ಅಲ್ಲದೇ ಪ್ರತಿ ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಲಕ್ಕಿ ಗ್ರಾಹಕರಿಗೆ ವಿಶೇಷವಾದ ಉಡುಗೊರೆಯನ್ನು ನಿಮ್ಮದಾಗಿಸುವ ಸುಸಂದರ್ಭಕ್ಕೆ ಅವಕಾಶ ನೀಡಿದೆ. ಒಟ್ಟು ಆಫ್‌ರ್‌ನ ಮೂಲಕ ವಿವೋ, ಸ್ಯಾಮ್‌ಸಾಂಗ್, ಒಪ್ಪೋ ಮೋಟೋ, ಐಫೋನ್, ನೋಕಿಯಾ, ಐಟೆಲ್ ಮೀ ಕಂಪೆನಿಗಳ ಫೋನ್‌ಗಳು ನಿಮಗೆ ಬೇಕಾಗುವ ಸುವ್ಯವಸ್ಥಿತ ಹೊಚ್ಚ ಹೊಸ ಮೊಬೈಲ್‌ನ್ನು ನಿಮ್ಮದಾಗಿಸಿ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here