ಪುತ್ತೂರು: ಅ.19 ರಂದು ರೋಟರಿ ಕ್ಲಬ್ ಪುತ್ತೂರು ಸಿಟಿ ಪ್ರಾಯೋಜಕತ್ವದಲ್ಲಿ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ಇಂಟರ್ಯಾಕ್ಟ್ ಕ್ಲಬ್ನ ವತಿಯಿಂದ ಶಾಲಾ ಸಭಾಂಗಣದಲ್ಲಿ ವೃತ್ತಿ ಮಾರ್ಗದರ್ಶನ ಶಿಬಿರ ನಡೆಯಿತು.
ಮೇಜರ್ ಜನರಲ್ ಎಂ ವಿ ಭಟ್ಟ್, ಅಸಿಸ್ಟೆಂಟ್ ಗವರ್ನರ್ ಝೋನ್ 4 ಇವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಸಾಮರ್ಥ್ಯವನ್ನು ಬಳಸಿ ಗುರಿಯನ್ನು ಸಾಧಿಸಬೇಕು. ಅಭಿರುಚಿ, ವ್ಯಕ್ತಿತ್ವ, ಸಮಯದ ಸದುಪಯೋಗ, ಸಕಾರಾತ್ಮಕ ಚಿಂತನೆ ನಮ್ಮದಾಗಬೇಕು ಎಂದು ಹೇಳಿದರು. ಎಸ್.ಎಸ್.ಎಲ್.ಸಿ ಬಳಿಕ ವಿದ್ಯಾರ್ಥಿಗಳು ತೆಗೆದುಕೊಳ್ಳಬಹುದಾದ ವಿವಿಧ ಕೋರ್ಸ್ಗಳ ಬಗ್ಗೆ ಮಾಹಿತಿ ನೀಡಿದರು.
ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಎಂ.ಪಿ.ಹೆಚ್.ಎಫ್.ರೊಟೆರಿಯನ್ ಪ್ರಶಾಂತ್ ಶೆಣೈ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ರೋಸಲಿನ್ ಲೋಬೊರವರು ಸಂಪನ್ಮೂಲ ವ್ಯಕ್ತಿಗಳನ್ನು ಸಭೆಗೆ ಪರಿಚಯಿಸಿದರು. ಇಂಟಾರ್ಯಾಕ್ಟ್ ಅಧ್ಯಕ್ಷೆ ಸದಿದಾ ವಂದಿಸಿದರು. ಶಿಕ್ಷಕಿ ರೀನಾ ರೆಬೆಲ್ಲೊರವರು ಕಾರ್ಯಕ್ರಮ ನಿರೂಪಿಸಿದರು.
ರೊಟೆರಿಯನ್ ಜ್ಯೊ ಡಿಸೋಜ, ಝೋನಲ್ ಲೆಫ್ಟಿನೆಂಟ್ ಪ್ರಮೋದ್ ಮಲ್ಲಾರ್ ಝೋನ್ 4 ಹಾಗೂ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.