ಕಾಣಿಯೂರು: ಮಾನಭಂಗ ಯತ್ನ ಪ್ರಕರಣ ಹಿನ್ನಲೆ- ಸಂತ್ರಸ್ತೆ ಮನೆಗೆ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಭೇಟಿ

0

* ಘಟನೆ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದು,ಧರ್ಮವನ್ನೂ ಎಳೆದು ತರುವ ಕೆಲಸವಾಗುತ್ತಿದೆ- ಶೋಭಾ ಕರಂದ್ಲಾಜೆ

ಕಾಣಿಯೂರು: ಕಾಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದೋಳ್ಪಾಡಿಯಲ್ಲಿ ದಲಿತ ಮಹಿಳೆಯ ಮಾನಭಂಗ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಮನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಸುದ್ದಿಯೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ ಅವರು, ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ಒಂಟಿ ಮನೆಗಳೇ ಹೆಚ್ಚು ಇದ್ದು,ಮಹಿಳೆಯರು ಮನೆಯಲ್ಲಿ ಇರುತ್ತಿದ್ದು,ಮೊನ್ನೆಯ ಅತ್ಯಾಚಾರ ಯತ್ನ ಪ್ರಕರಣ ಮಹಿಳೆಯರಲ್ಲಿ ಭಯ ಹುಟ್ಟಿಸುವಂತಿದೆ ಎಂದು ಮಹಿಳೆಯರು ಆತಂಕ ವ್ಯಕ್ತಪಡಿಸಿದ್ದು, ಬೆಡ್ ಶೀಟ್ ಮಾರಾಟದ ನೆಪದಲ್ಲಿ ಮನೆಯೊಳಕ್ಕೆ ನುಗ್ಗಿ ಮಹಿಳೆಯ ಕೈ ಹಿಡಿದು ಎಳೆದು ಮಾನಭಂಗ ಯತ್ನ ನಡೆಸಿರುವುದು ಭಯ ಹುಟ್ಟಿಸುವಂತಿದೆ ಎಂದರು.

ಈ ಘಟನೆ ತಿಳಿದವರು ಆಕ್ರೋಶಗೊಂಡು ಆರೋಪಿಗಳಿಗೆ ಹಲ್ಲೆ ನಡೆಸಿದ ಘಟನೆ ಈಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದು,ಧರ್ಮವನ್ನೂ ಎಳೆದು ತರುವ ಕೆಲಸವಾಗುತ್ತಿದೆ. ದಲಿತೆಯ ಮೇಲಿನ ಮಾನಭಂಗ ಯತ್ನ ಪ್ರಮಾಣವನ್ನೂ ಧರ್ಮದ ಕನ್ನಡಕದ ಮೂಲಕ ನೋಡುತ್ತಿರುವುದು ಸರಿಯಲ್ಲ. ಮಹಿಳೆಯ ಮೇಲಿನ ಮಾನಭಂಗ ಯತ್ನ ಪ್ರಕರಣವನ್ನೂ ಎಲ್ಲಾ ಧರ್ಮದವರೂ ಖಂಡಿಸಬೇಕು.ಕಠಿಣ ಶಿಕ್ಷೆಗೆ ಒತ್ತಾಯಿಸಬೇಕಿದೆ. ಅದೆಲ್ಲವನ್ನೂ ಬಿಟ್ಟು ಆರೋಪಿಗಳ ಪರವಾಗಿ ನಿಂತು ಧರ್ಮದ ಹೆಸರಿನಲ್ಲಿ ಬೆಂಬಲಿಸುವವರು ಮಾನಸಿಕತೆ ಏನಿರಬಹುದು.ಆರೋಪಿಗಳ ಪರ ಮಾತನಾಡುವವರೇ ಆರೋಪಿಗಳನ್ನು ಕಳುಹಿಸಿದರೇ ಎಂಬ ಸಂಶಯ ಮೂಡುತ್ತಿದೆ.
ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು.ಸಂತ್ರಸ್ತೆ ಹಾಗೂ ಮಹಿಳೆಯ ಪರವಾಗಿ ಸರಕಾರ ಇದೆ.ಮುಂದಕ್ಕೆ ಇಂತಹ ಘಟನೆ ಮರುಕಳಿಸದಂತೆ ಆರೋಪಿಗಳಿಗೆ ಅತೀ ಕಠಿಣ ಶಿಕ್ಷೆಯಾಗಬೇಕಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಈ ಸಂದರ್ಭದಲ್ಲಿ ಕಾಣಿಯೂರು ಗ್ರಾ.ಪಂ. ಅಧ್ಯಕ್ಷೆ ಲಲಿತಾ ದರ್ಖಾಸು, ಉಪಾಧ್ಯಕ್ಷ ಗಣೇಶ್ ಉದನಡ್ಕ, ಚಾರ್ವಾಕ ಸಿ.ಎ ಬ್ಯಾಂಕ್ ಅಧ್ಯಕ್ಷ ಆನಂದ ಗೌಡ ಮೇಲ್ಮನೆ, ದೋಳ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಆನಂದ ಬನೇರಿ, ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ, ಬಿಜೆಪಿ ಬೂತ್ ಅಧ್ಯಕ್ಷ ಬಾಲಕೃಷ್ಣ ಇಡ್ಯಡ್ಕ ,ಗ್ರಾ.ಪಂ.ಸದಸ್ಯರಾದ ದೇವಿಪ್ರಸಾದ್ ದೋಳ್ಪಾಡಿ,ಲೋಕಯ್ಯ ಪರವ,ತಾರಾನಾಥ ಇಡ್ಯಡ್ಕ, ಅಂಬಾಕ್ಷಿ ಕೂರೇಲು,ರಾಮಣ್ಣ ಗೌಡ ಮುಗರಂಜ, ತೇಜಕುಮಾರಿ ಉದ್ಲಡ್ಕ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here