ಹೂವಿನ ಮೂಟೆಗಳ ಕಳವು

0

ಉಪ್ಪಿನಂಗಡಿ: ಬಲಿಪಾಡ್ಯದ ಅಂಗವಾಗಿ ನಡೆಯುವ ಪೂಜಾ ಕಾರ್ಯಗಳಿಗೆ ಹೂವಿನ ಬೇಡಿಕೆ ಹೆಚ್ಚಳವಿರುವ ಹಿನ್ನೆಲೆಯಲ್ಲಿ ತರಿಸಲಾದ ಹೂವು ತುಂಬಿದ ಚೀಲಗಳನ್ನೇ ಕಳ್ಳರು ಕದ್ದೊಯ್ದ ಘಟನೆ ಉಪ್ಪಿನಂಗಡಿಯಲ್ಲಿ ಬುಧವಾರ ನಸುಕಿನ ವೇಳೆ ನಡೆದಿದೆ.

ರಮೇಶ್ ಸಪಲ್ಯ ಮಾಲಕತ್ವದ ಶ್ರೀ ಕಟಿಲೇಶ್ವರಿ ಫ್ಲವರ್ ಸ್ಟಾಲ್‌ಗೆಂದು ಮೈಸೂರಿನಿಂದ ಭಾರತಿ ಎಂಬ ಬಸ್ಸಿನಲ್ಲಿ ತಂದು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಇರಿಸಲಾಗಿದ್ದ 15 ಸಾವಿರ ರೂ. ಮೌಲ್ಯದ ಎರಡು ಹೂವಿನ ಮೂಟೆಯನ್ನೇ ಕಳ್ಳರು ಕದ್ದೊಯ್ದಿದ್ದಾರೆ. ಅಲ್ಲದೇ, ಉಪ್ಪಿನಂಗಡಿ ಬಸ್ ನಿಲ್ದಾಣದ ಪರಿಸರದಲ್ಲಿ ಹೂವಿನ ವ್ಯಾಪಾರಿ ದಾಮೋದರ ಎಂಬವರಿಗೆ ಕಳುಹಿಸಲಾಗಿದ್ದ ಸುಮಾರು 16 ಸಾವಿರ ರೂ. ಮೌಲ್ಯದ ಹೂವುಗಳ ಮೂಟೆಯನ್ನು ಕೂಡಾ ಕಳ್ಳರು ಎಗರಿಸಿದ್ದಾರೆ. ಕೆಲ ದಿನಗಳ ಹಿಂದೆ ಸತತ ಕಳವು ಪ್ರಕರಣಗಳಿಂದ ಗಮನ ಸೆಳೆದಿದ್ದ ಉಪ್ಪಿನಂಗಡಿಯಲ್ಲಿ ಹೂವುಗಳ ಕಳವು ಪ್ರಕರಣದಿಂದಾಗಿ ಹೂವಿನ ವ್ಯಾಪಾರಿಗಳೂ ಕಂಗೆಡುವಂತಾಗಿದೆ. ಪ್ರಕರಣದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ .

LEAVE A REPLY

Please enter your comment!
Please enter your name here