





ಪುತ್ತೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಬಲ್ನಾಡು ವಲಯ ಮತ್ತು ವಿಶ್ವಯುವಕ ಮ೦ಡಲ ಕುಂಜೂರು ಹಾಗೂ ಸ್ಥಳೀಯರ ಸಹಕಾರದೊ೦ದಿಗೆ ಶ್ರಮದಾನ ನಡೆಸಿ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಮಚ್ಚಿಮಲೆ ಅಂಬಲಗುತ್ತು ಎಂಬಲ್ಲಿ ಗುಡಿಸಲಿನಲ್ಲಿ ವಾಸವಾಗಿರುವ ಬಡ ಒಂಟಿ ಮಹಿಳೆಯ ಮನೆ ಪರಿಸರ ಸ್ವಚ್ಚಗೊಳಿಸುವ ಕಾರ್ಯ ಅ.30ರಂದು ನಡೆಸಲಾಯಿತು.
ಇಲ್ಲಿನ ದಿ.ಚನಿಯಪ್ಪ ನಾಯ್ಕ ಅವರ ಪತ್ನಿ ಅಕ್ಕಮ್ಮ ಎಂಬ ವಯೋವೃದ್ಧ ಮಹಿಳೆ ಕಳೆದ ಹಲವಾರು ವರ್ಷಗಳಿಂದ ಈ ಗುಡಿಸಲಿನಂತಹ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದಾರೆ. ಮನೆಯ ಪರಿಸರ ಮತ್ತು ಮನೆಗೆತೆರಳುವ ದಾರಿ ಗಿಡ ಗಂಟಿಗಳಿಂದ ತುಂಬಿ ಹೋಗಿತ್ತು. ಇದನ್ಮು ಮನಗಂಡ ಸಂಘಟನೆಯ ಸದಸ್ಯರು ಶ್ರಮದಾನದ ಮೂಲಕ ಮನೆಗೆ ತೆರಳುವ ಸ್ಥಳದ ಗಿಡಗಂಟಿಗಳನ್ನು ತೆರವುಗೊಳಿಸಿ ಸಮರ್ಪಕ ದಾರಿ ನಿರ್ಮಿಸಿದರು. ಅಲ್ಲದೆ ಮನೆಯ ಒಳಭಾಗದಲ್ಲಿಯೂ ಗುಡಿಸಿ ಸ್ವಚ್ಚಗೊಳಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಹರೀಶ್ ಕುಲಾಲ್, ಸಂಯೋಜಕಿ ಆಶಾಲತಾ, ಕು೦ಜೂರು ಪ೦ಜ ಒಕ್ಕೂಟದ ಅಧ್ಯಕ್ಷ ಮಹಾಲಿ೦ಗ ನಾಯ್ಕ ಮಚ್ಚಿಮಲೆ, ಈಶ್ವರ ಎ೦.ಎಸ್. ಮಚ್ಚಿಮಲೆ, ತಂಡದ ನಾಯಕ ವಿನಯ ನಾಯ್ಕ್, ಸದಸ್ಯರಾದ ರೋಷನ್, ಜಗದೀಶ ಗೌಡ, ಲೋಕೇಶ್ ನಾಯ್ಕ್, ಸುನೀಲ್, ಬಾಲಕೃಷ್ಣ ನಾಯ್ಕ ಮುರು೦ಗಿ,ಶಂಭು ಪೂಜಾರಿ ಸಾಜ, ಹರಿಪ್ರಸಾದ್, ಚಂದ್ರಶೇಖರ, ಗಿರೀಶ್ ಎಮ್ ಎಸ್,ವಿಶ್ವನಾಥ ನಾಯ್ಕ ಮತ್ತಿತರರು ಶ್ರಮದಾನದಲ್ಲಿ ಪಾಲ್ಗೊಂಡರು.











