ನೆಲ್ಯಾಡಿ: ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಮಸ್ಥರಿಗೆ 3ನೇ ವರ್ಷದ ’ಪರ್ಬದ ಗೊಬ್ಬು-2022’ ಅ.30ರಂದು ಬಜತ್ತೂರು ಗ್ರಾಮದ ಬಾರಿಕೆಯಲ್ಲಿ ನಡೆಯಿತು.
ಪಂಜಳ ಶಾಲಿವಾಹನ ಪ್ಯೂಯೆಲ್ಸ್‌ನ ಚಂದ್ರಶೇಖರ ತಾಳ್ತಜೆ ಅವರು ಕ್ರೀಡಾಕೂಟ ಉದ್ಘಾಟಿಸಿದರು. ಸಂತೋಷ್ ಜೈನ್, ಮುಕುಂದ ಬಜತ್ತೂರು, ಗೋಪಾಲ ದಡ್ಡು, ಸೋಮಸುಂದರ, ಪೂವಪ್ಪ ಪೂಜಾರಿ, ಧನಂಜಯ ಬಾರಿಕೆ, ಶಕುಂತಳಾ ಕಲ್ಲುಗುಡ್ಡೆ, ಕೊಮಲಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಕಾರ್ಯಕ್ರಮದಲ್ಲಿ ಖ್ಯಾತ ದೈವ ನರ್ತಕ, ಗಡಿನಾಡ ರಾಜ್ಯ ಪ್ರಶಸ್ತಿ ಪುರಸ್ಕೃತ ಸುಬ್ಬ ನಲಿಕೆ, ದೈವ ಪರಿಚಾರಕ ಲಿಂಗಪ್ಪ ಗೌಡ ಬಾರಿಕೆ, ಕಲಾಪ್ರಶಸ್ತಿ ಪುರಸ್ಕೃತ ಜಗದೀಶ್ ಬಾರಿಕೆ ಅವರನ್ನು ಸನ್ಮಾನಿಸಲಾಯಿತು. ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಲೋಹಿತ್, ನಿತ್ಯಶ್ರೀ ಅವರನ್ನು ಗೌರವಿಸಲಾಯಿತು. ಉಮೇಶ್ ಬಾರಿಕೆ ಸನ್ಮಾನ ಪತ್ರ ವಾಚಿಸಿದರು. ಸೋಮಸುಂದರ ಕೊಡಿಪಾನ ಸ್ವಾಗತಿಸಿ, ಧನಂಜಯ ಬಾರಿಕೆ ವಂದಿಸಿದರು. ಜಗದೀಶ್ ಬಾರಿಕೆ ಕಾರ್ಯಕ್ರಮ ನಿರೂಪಿಸಿದರು. ಚೈತನ್ಯ ಬಾರಿಕೆ ಪ್ರಾರ್ಥಿಸಿದರು. ಲವಕುಮಾರ್ ಶಿವಾನಿ ಅನ್ನದಾನ ಮಾಡಿದರು.