ಪುತ್ತೂರು :ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘ ರಚನೆ ಸೆ.13 ರಂದು ನಡೆಯಿತು
ಅಧ್ಯಕ್ಷರಾಗಿ ರಚನಾ ರೈ ಚಾವಡಿ,ಉಪಾಧ್ಯಕ್ಷರಾಗಿ ಸೋನಾಲ್, ಕಾರ್ಯದರ್ಶಿ ಯಾಗಿ ದಿವ್ಯ, ಜೊತೆ ಕಾರ್ಯದರ್ಶಿಯಾಗಿ ಶ್ರದ್ಧಾ, ಕೋಶಾಧಿಕಾರಿಯಾಗಿ ಶ್ರಾವ್ಯ ಆಯ್ಕೆಯಾದರು.ಉಳಿದಂತೆ 15 ಜನರ ಸದಸ್ಯತ್ವದಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘ ರಚನೆಗೊಂಡಿತು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ವೇದ ಶ್ರೀ ನಿಡ್ಯ , ನಿವೃತ್ತ ಪ್ರಾಂಶುಪಾಲ ಶ್ರೀಧರ್, ಉಪನ್ಯಾಸಕರಾದ ಸ್ಟೀವನ್ ಕ್ವಾಡ್ರೆಸ್, ಡಾ|ಸುಕೇಶ್, ಐವನ್ ಲೋಬೋ, ನಂದ ಕಿಶೋರ್ ಉಪಸ್ಥಿತರಿದ್ದರು.
ವರ್ಷ. ಎನ್ ಸ್ವಾಗತಿಸಿ, ಮೇಘ ಕೆ .ಜಿ ವಂದಿಸಿ, ಜಿ ಅತೀಫ ನಿರೂಪಿಸಿದರು.