ಎಸ್.ಕೆ.ಎಸ್.ಎಸ್.ಎಫ್ ಮುಕ್ವೆ ಕ್ಲಸ್ಟರ್ ಜನ ಸಂಚಲನ

0

ಪುತ್ತೂರು: ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಎಸ್.ಕೆ.ಎಸ್.ಎಸ್.ಎಫ್ ಮುಕ್ವೆ ಕ್ಲಸ್ಟರ್ ನೇತೃತ್ವದಲ್ಲಿ “ಆರೋಗ್ಯ ಕರ್ನಾಟಕಕ್ಕೆ ಯುವಜನ ಜಾಗೃತಿ” ಎಂಬ ಪ್ರಮೇಯದಲ್ಲಿ ಮಾದಕ ವ್ಯಸನದ ವಿರುದ್ಧ ಜನಜಾಗೃತಿ ಮೂಡಿಸುವ “ಜನ ಸಂಚಲನ” ಕಾರ್ಯಕ್ರಮ ಮುಕ್ವೆ ಜಂಕ್ಷನ್ ನಲ್ಲಿ ನಡೆಯಿತು.

ಕ್ಲಸ್ಟರ್ ಅಧ್ಯಕ್ಷ ಅಶ್ರಫ್ ಮುಕ್ವೆ ಅಧ್ಯಕ್ಷತೆ ವಹಿಸಿದರು. ಕೂರ್ನಡ್ಕ ಮುದರ್ರಿಸ್ ಉನೈಸ್ ಫೈಝಿ ಉದ್ಘಾಟಿಸಿ ಮಾದಕ ವ್ಯಸನದ ಕುರಿತು ಪವಿತ್ರ ಕುರ್ ಆನ್ ಹಾಗೂ ಪ್ರವಾದಿ ವಚನಗಳು ನಮಗೆ ಜಾಗೃತಿ ಮೂಡಿಸುತ್ತಿದೆ ಮತ್ತು ಅದರ ದುಷ್ಪರಿಣಾಮಗಳು ಬಹಳ ಅಪಾಯವಾಗಿದೆ. ಯುವ ಸಮಾಜ ಅದರಿಂದ ದೂರವಿರುವಂತೆ ಕರೆ ನೀಡಿದರು.

ಶುಭ ಹಾರೈಸಿ ಮಾತನಾಡಿದ ಎಸ್.ಕೆ.ಎಸ್.ಎಸ್.ಎಫ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಾಬಿರ್ ಫೈಝಿ ಬನಾರಿರವರು, ಡ್ರಗ್ಸ್ ಬಗ್ಗೆ ಇಂದಿನ ಯುವ ಸಮೂಹಕ್ಕೆ ಅರಿವು ಮೂಡಿಸುವ ಸಲುವಾಗಿ ಸುಮಾರು 35 ಕೇಂದ್ರಗಳಲ್ಲಿ ಎಸ್.ಕೆ.ಎಸ್.ಎಸ್.ಎಫ್ ಜನ ಸಂಚಲನ ಕಾರ್ಯಕ್ರಮ ನಡೆಸುತ್ತಿರುವುದು ಸಮಾಜದಲ್ಲಿ ಸಣ್ಣ ಮಟ್ಟಿಗಾದರು ಪರಿಣಾಮ ಬೀರುವಂತಾಗಲಿ ಎಂಬ ಆಶಯದಿಂದಾಗಿದೆ ಎಂದರು.

ಸಂದೇಶ ಭಾಷಣ ಮಾಡಿದ ಚಾಪಲ್ಲ ದರ್ಸ್ ವಿಧ್ಯಾರ್ಥಿ ಹನೀಫ್ ಸವಣೂರು ಮಾತನಾಡಿ, ಮಾದಕ ದ್ರವ್ಯ ನಮ್ಮ ಶರೀರವನ್ನು ನಾಶದತ್ತ ಕೊಂಡೊಯ್ಯುತ್ತದೆ ಅದರಿಂದ ಯುವ ಸಮೂಹ ಹಾಗೂ ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಬಲಿಯಾಗದೆ ಎಚ್ಚರವಹಿಸಿ ತಮ್ಮಲ್ಲಿ ತಮ್ಮ ಪೋಷಕರಿಗೆ ಇರುವ ಭರವಸೆಯನ್ನು ಈಡೇರಿಸಲು ಪ್ರಯತ್ನಿಸಿ ಉತ್ತಮ ನಾಗರಿಕರಾಗುವುದರೊಂದಿಗೆ ತಮ್ಮ ಗೆಳೆಯರನ್ನು ಸಹ ಇಂತಹ ದುಶ್ಚಟಗಳಿಂದ ದೂರವಿರುವಂತೆ ಸಲಹೆ ನೀಡಿರಿ ಎಂದರು,

ಜನಜಾಗೃತಿ ಮೂಡಿಸುವ ಕರಪತ್ರವನ್ನು ಕ್ಯಾಂಪಸ್ ಹಾಗೂ ಎಸ್ ಕೆ ಎಸ್ ಬಿ ವಿ ನೇತಾರರಿಗೆ ನೀಡುವ ಮೂಲಕ ಮುಕ್ವೆ ಜಮಾಅತ್ ಅಧ್ಯಕ್ಷ ಇಬ್ರಾಹಿಂ ಮುಲಾರ್ ರವರು ಬಿಡುಗಡೆ ಗೊಳಿಸಿದರು. ಕ್ಲಸ್ಟರ್ ಸದಸ್ಯ ಉಮರ್ ಯಮಾನಿ ಪಾಪೆತ್ತಡ್ಕ ಪ್ರತಿಜ್ಞಾ ಭೋದಿಸಿದರು. ಕ್ಲಸ್ಟರ್ ಉಪಾಧ್ಯಕ್ಷರಾದ ಶರೀಫ್ ಯು.ಪಿ, ವಿಖಾಯ ಕಾರ್ಯದರ್ಶಿ ಹನೀಫ್ ಪುರುಷರಕಟ್ಟೆ, ಟ್ರೆಂಡ್ ಕಾರ್ಯದರ್ಶಿ ಫಾರೂಕ್ ವೀರಮಂಗಲ, ಕಾರ್ಯಕಾರಿ ಸಮಿತಿ ಸದಸ್ಯರಾದ ಯೂಸುಫ್ ಹಾಜಿ ಅಳಕ್ಕೆ, ರಫೀಕ್ ಸಿಬಾರ, ಕೂರ್ನಡ್ಕ ಶಾಖೆ ಅಧ್ಯಕ್ಷ ಫಾರೂಕ್ ಕೂರ್ನಡ್ಕ ಮುಕ್ವೆ ಶಾಖೆ ಕಾರ್ಯದರ್ಶಿ ಝುಬೈರ್ ಮುಕ್ವೆ ಉಪಸ್ಥಿತರಿದ್ದರು.

ಕ್ಲಸ್ಟರ್ ಕಾರ್ಯದರ್ಶಿ ಅಶ್ರಫ್ ರಹ್ಮಾನಿ ವೀರಮಂಗಿಲ ಸ್ವಾಗತಿಸಿ ಮುಕ್ವೆ ಶಾಖೆ ಅಧ್ಯಕ್ಷ ರಫೀಕ್ ಮಣಿಯ ಧನ್ಯವಾದಗೈದರು.

LEAVE A REPLY

Please enter your comment!
Please enter your name here