ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ಪೇಟೆಯು ದಿನದಿಂದ ದಿನಕ್ಕೆ ಬೆಳೆಯುತ್ತಿರುವುದು ಉತ್ತಮ ಬೆಳೆವಣಿಗೆಯಾಗಿದೆ. ಗ್ರಾಹಕರಿಗೆ ಒಳ್ಳೆಯ ರೀತಿಯಲ್ಲಿ ಸೇವೆ ನೀಡುವ ಸಲುವಾಗಿ ಎಲ್ಲಾ ವಿಧದ ಗ್ರಾಹಕ ಮಳಿಗೆಗಳು ಇಲ್ಲಿ ತೆರೆದುಕೊಳ್ಳುತ್ತಿದ್ದು ಇದೀಗ `ಗೋಕುಲ’ ಎಂಬ ವಾಣಿಜ್ಯ ಮಳಿಗೆಯು ಆರಂಭಗೊಂಡಿದ್ದು ಕುಂಬ್ರ ಪೇಟೆಯ ಹಿರಿಮೆಗೆ ಮತ್ತೊಂದು ಗರಿಮೆಯಾಗಿದೆ. ಈ ವಾಣಿಜ್ಯ ಮಳಿಗೆಯಲ್ಲಿ ವ್ಯವಹಾರ ನಡೆಸುವ ಉದ್ಯಮದಾರರಿಗೆ ಹಾಗೂ ವಾಣಿಜ್ಯ ಮಳಿಗೆಯ ಮಾಲಕರಿಗೆ ಯಶಸ್ಸು ಸಿಗಲಿ ಎಂದು ಶಾಸಕ ಸಂಜೀವ ಮಠಂದೂರುರವರು ಹೇಳಿ ಶುಭ ಹಾರೈಸಿದರು.
ಅವರು ಕುಂಬ್ರದಲ್ಲಿ `ಗೋಕುಲ’ವಾಣಿಜ್ಯ ಮಳಿಗೆಯನ್ನು ನ.5 ರಂದು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಇಬ್ಬರು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಸನ್ಮಾನ ಕಾರ್ಯಕ್ರಮ ನೆರವೇರಿಸಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ ಕಡಮಜಲು ಸುಭಾಷ್ ರೈಯವರು ಸಂದರ್ಭೋಚಿತವಾಗಿ ಮಾತನಾಡಿ, ವಾಣಿಜ್ಯ ಮಳಿಗೆಯ ಉದ್ಘಾಟನೆ ಸಂದರ್ಭದಲ್ಲಿ ಸಾಧಕರಿಬ್ಬರಿಗೆ ಸನ್ಮಾನ ಕಾರ್ಯಕ್ರಮ ಮಾಡಿರುವುದು ಒಳ್ಳೆಯ ಸಂಗತಿಯಾಗಿದೆ ಎಂದು ಹೇಳಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ತಾಪಂ ಮಾಜಿ ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ಚನಿಲ ತಿಮ್ಮಪ್ಪ ಶೆಟ್ಟಿ, ಉದ್ಯಮಿ ಬೂಡಿಯಾರ್ ರಾಧಾಕೃಷ್ಣ ರೈ, ಉದ್ಯಮಿ ಮೋಹನ್ದಾಸ ರೈ ಕುಂಬ್ರ, ಟಿಎಪಿಸಿಎಂಸಿ ಅಧ್ಯಕ್ಷ ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು, ಕುಂಬ್ರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ನಾರಾಯಣ ಪೂಜಾರಿ ಕುರಿಕ್ಕಾರ, ಒಳಮೊಗ್ರು ಗ್ರಾಪಂ ಮಾಜಿ ಅಧ್ಯಕ್ಷ ಅಬ್ದುಲ್ ರಹೀಮಾನ ಅರಿಯಡ್ಕ, ಸುಧಾಕರ ಮಾಸ್ಟರ್, ಶೀನಪ್ಪ ರೈ ಕೊಡಂಕಿರಿ, ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ಎಸ್.ಮಾಧವ ರೈ ಕುಂಬ್ರ, ಕೋಚಣ್ಣ ರೈ, ಪದ್ಮನಾಭ ರೈ, ಕರುಣಾಕರ ರೈ ಅತ್ರೆಜಾಲು,ತಿಮ್ಮಪ್ಪ ಗೌಡ, ಸದಾಶಿವ ನಾಯ್ಕ್, ನಟ ಸುಂದರ ರೈ ಮಂದಾರ, ಕೆದಂಬಾಡಿ ಗ್ರಾಪಂ ಸದಸ್ಯರುಗಳಾದ ವಿಠಲ ರೈ ಮಿತ್ತೋಡಿ, ಜಯಲಕ್ಷ್ಮೀ ಬಲ್ಲಾಳ್, ರೇವತಿ ಬೋಳೋಡಿ, ಒಳಮೊಗ್ರು ಗ್ರಾಪಂ ಸದಸ್ಯ ಮಹೇಶ್ ಕೇರಿ, ಸುಜಾತ ಕೃಷ್ಣ ಕುಮಾರ್, ನಿಶ್ಮಿತಾ ಕಾಂಪ್ಲೆಕ್ಸ್ ಮಾಲಕ ಪುರಂದರ ರೈ ಕೋರಿಕ್ಕಾರು, ಮೆಲ್ವಿನ್ ಮೊಂತೆರೋ, ಪುರಂದರ ಶೆಟ್ಟಿ ಮುಡಾಲ, ವಾರಿಜಾ ರೈ ಮುಡಾಲ, ವಿದ್ಯಾಲತ ರೈ, ಮಲ್ಲಿಕಾ ರೈ, ಶಿಲ್ಪಾ ರೈ, ಸುನೀತಾ ರೈ, ಶ್ರೀನಿವಾಸ ರೈ, ಗಣೇಶ್ ರೈ ಮಿತ್ರಂಪಾಡಿ ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಶುಭ ಹಾರೈಸಿದರು.
ಗೋಕುಲದ ಮಾಲಕರಾದ ಕೆದಂಬಾಡಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರ ಅತಿಥಿಗಳನ್ನು ಸ್ವಾಗತಿಸಿ, ವಂದಿಸಿದರು. ರತನ್ ರೈಯವರ ತಂದೆ ಬಾಲಕೃಷ್ಣ ರೈ, ತಾಯಿ ಜಯಂತಿ, ಪತ್ನಿ ತೃಪ್ತಿರವರುಗಳು ಅತಿಥಿಗಳಿಗೆ ಶಾಲು ಹಾಕಿ ಸ್ವಾಗತಿಸಿ ಸತ್ಕರಿಸಿದರು. ರತನ್ ರೈಯವರ ಪುತ್ರ ಗಾಯನ್, ಪುತ್ರಿ ಗಮ್ಯ, ಮಾವ ಶೀನಪ್ಪ ರೈ ಮುಡಾಲ, ಅತ್ತೆ ವಸಂತಿ ಶೆಟ್ಟಿ ಉಪಸ್ಥಿತರಿದ್ದರು. `ಗೋಕುಲ’ ವಾಣಿಜ್ಯ ಮಳಿಗೆಯು ಕುಂಬ್ರ ಬೆಳ್ಳಾರೆ ರಸ್ತೆಯಲ್ಲಿ ಕುಂಬ್ರದಿಂದ ನೂರು ಮೀಟರ್ ದೂರದಲ್ಲಿದೆ.
ಸಾಧಕರಿಗೆ ಸನ್ಮಾನ
ಸಮಾಜ ಸೇವೆಗಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಿತ್ರಂಪಾಡಿ ಜಯರಾಮ ರೈ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಸ್ತಾ ಶೆಟ್ಟಿ ಮುಡಾಲರವರಿಗೆ ಈ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಜಯರಾಮ ರೈಯವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಡಮಜಲು ಸುಭಾಷ್ ರೈಯವರು ಸನ್ಮಾನ ನೆರವೇರಿಸಿದರೆ, ಹಸ್ತಾ ಶೆಟ್ಟಿ ಮುಡಾಲರವರಿಗೆ ಶಾಸಕ ಸಂಜೀವ ಮಠಂದೂರುರವರು ಸನ್ಮಾನ ನೆರವೇರಿಸಿದರು.