ಪುತ್ತೂರು: ರಾಜ್ಯ ಬಿಜೆಪಿ ಅಧ್ಯಕ್ಷರಾದ ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಅವರು ಆರೋಗ್ಯ ಸಮಸ್ಯೆಯ ಹಿನ್ನಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದಿರುವ ನಳಿನ್ ಅವರು ‘ಸಂಕಲ್ಪ ಯಾತ್ರೆಯು ರಾಜ್ಯ ಪ್ರವಾಸ ಸಹಿತ ಪಕ್ಷದ ವಿವಿಧ ಚಟುವಟಿಕೆಗಳು ಮುಖಂಡರ ಮಾರ್ಗದರ್ಶನಲ್ಲಿ ಯಶಸ್ವಿಯಾಗಿ ಸಾಗುತ್ತಿದೆ. ವೈದ್ಯರ ಸಲಹೆಯ ಮೇರೆಗೆ ಆರೋಗ್ಯ ಚಿಕಿತ್ಸೆಯ ಕಾರಣ 10 ದಿನಗಳ ತನಕ ಯಾವುದೇ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಆದಷ್ಟು ಶೀಘ್ರದಲ್ಲಿ ಮತ್ತೆ ಪಕ್ಷ ಹಾಗೂ ಕ್ಷೇತ್ರದ ಸೇವೆಗೆ ಮರಳುತ್ತೇನೆ ಎಂದು ತಿಳಿಸಿದ್ದಾರೆ.