ಪುತ್ತೂರು:ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ವರ್ಷಂಪ್ರತಿ ಜರುಗುವ ವೈಭವದ ಕುರಿಂದು ಉತ್ಸವ ನ.10ರಂದು ರಾತ್ರಿ ದರ್ಬೆ ವೃತ್ತದಲ್ಲಿ ನಡೆಯಿತು.ಅದರ ಮೊದಲು ದೇವಳದಿಂದ ದರ್ಬೆಯ ತನಕ ಪೇಟೆ ಸವಾರಿ ಉತ್ಸವ ನಡೆಯಿತು.ರಾತ್ರಿ ದೀಪ ನಮಸ್ಕಾರ, ರಾತ್ರಿ ಪೂಜೆ, ಶ್ರೀ ದೇವರ ಪೇಟೆ ಸವಾರಿ ಉತ್ಸವ ನಡೆಯಿತು.ಬಳಿಕ ದರ್ಬೆ ವೃತ್ತದಲ್ಲಿ ಶ್ರೀ ದೇವರಿಗೆ ಕುರಿಂದು ಉತ್ಸವ ಜರುಗಿತು.ನ.9ರಂದು ತಡ ರಾತ್ರಿ ಮೃಗಬೇಟೆ ಉತ್ಸವಗಳು ನಡೆದವು.