ಪುತ್ತೂರು: ಸರ್ವೆ ಗ್ರಾಮದ ಕೂಡುರಸ್ತೆ ಬಾಲಾಯ ನಿವಾಸಿ ಯೂಸುಫ್ ಹಾಜಿ (65ವ) ಅವರು ಅಲ್ಪಕಾಲದ ಅಸೌಖ್ಯದಿಂದ ನ.11ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಕೂಡುರಸ್ತೆ ರಿಫಾಯಿಯ್ಯ ಜುಮಾ ಮಸೀದಿಯಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ಆಸ್ಯಮ್ಮ, ಪುತ್ರರಾದ ಅಬ್ದುಲ್ ಮಜೀದ್, ಅಬ್ದುಲ್ ರಶೀದ್, ಅಬ್ದುಲ್ ರಝಾಕ್, ಪುತ್ರಿಯರಾದ ಹಾಜಿರಾ, ಝೊಹಾರಾ, ಅಳಿಯಂದಿರಾದ ಯೂಸುಫ್ ಹಾಜಿ ಕೈಕಾರ, ಹಂಝ ಬಲ್ಕಾಡ್, ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.