ಹೊಸ ಕಾರುಗಳ ಪರಿಚಯ, ವಿನಿಮಯ, ಮಾಹಿತಿ ಕಾರ್ಯಕ್ರಮ
ಉತ್ತಮ ಸೇವೆಯಿಂದ ಜನಾಕರ್ಷಿತರಾಗುತ್ತಾರೆ; ಮಾಧವ ರೈ ಕುಂಬ್ರ
ಪುತ್ತೂರು; ಉತ್ತಮ ಸೇವೆಯನ್ನು ನೀಡಿದಲ್ಲಿ ಯಾವುದೇ ಸಂಸ್ಥೆಯು ಜನಾಕರ್ಷಿತವಾಗುತ್ತದೆ ಎಂಬುದಕ್ಕೆ ಮಾಂಡೋವಿ ಮೋಟಾರ‍್ಸ್ ಸಂಸ್ಥೆಯೇ ಸ್ಪಷ್ಟ ಉದಾಹರಣೆಯಾಗುತ್ತಿದ್ದು , ಗ್ರಾಮೀಣ ಭಾಗದಲ್ಲಿ ಕಂಪೆನಿಯು ತನ್ನ ಕಾರುಗಳನ್ನು ಪರಿಚಯ ಮಾಡುವ ಮೂಲಕ ಹಳ್ಳಿ ಜನರಿಗೂ ಕಂಪೆನಿ ಹತ್ತರವಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ಮಾಧವ ರೈ ಕುಂಬ್ರ ಹೇಳಿದರು.
ಅವರು ಮಾಂಡೋವಿ ಮೋಟಾರ‍್ಸ್ ಉಪ್ಪಿನಂಗಡಿ ಶಾಖೆಯ ವತಿಯಿಂದ ಕುಂಬ್ರ ಜಂಕ್ಷನ್‌ನಲ್ಲಿ ನ.11 ಮತ್ತು 12 ರಂದು ನಡೆಯಲಿರುವ ಮಾಂಡೋವಿ ಗ್ರಾಮೀಣ ಮಹೋತ್ಸವ ಕಾರ್ಯಕ್ರಮವನ್ನು ನ. 11 ರಂದು ಉದ್ಘಾಟಿಸಿ ಮತನಾಡಿದರು.
ಕೆಲವು ವರ್ಷಗಳ ಹಿಂದೆ ಕಾರುಗಳನ್ನು ಕೊಂಡುಕೊಳ್ಳಬೇಕಾದರೆ ದೂರದ ಊರುಗಳಿಗೆ ತೆರಳಬೇಕಾದ ಪರಿಸ್ಥಿತಿ ಇತ್ತು. ಆದರೆ ಇಂದು ಕಾಲ ಬದಲಾಗಿದೆ. ಪ್ರಸಿದ್ದ ಕಂಪೆನಿಯಾದ ಮಾಂಡೋವಿ ಮೋಟಾರ‍್ಸ್ ಇಂದು ಗ್ರಾಮೀಣ ಜನತೆಗೂ ತನ್ನ ಕಾರನ್ನು ಪರಿಚಯಿಸಿ, ಹಳೆ ಕಾರುಗಳ ವಿನಿಮಯವನ್ನು ಮಾಡುವ ಮೂಲಕ ಗ್ರಾಹಕರಿಗೆ ಸುಲಭ ರೀತಿಯಲ್ಲಿ ಮಾಹಿತಿ ಪಡೆದುಕೊಳ್ಳುವ ಅವಕಾಶವನ್ನು ಒದಗಿಸುತ್ತಿದೆ ಎಂದು ಹೇಳಿ ಮಹೋತ್ಸವಕ್ಕೆ ಶುಭ ಹಾರೈಸಿದರು.
ಕೃಷಿಕರಿಗೂ ತುಂಬಾ ಪ್ರಯೋಜನವಾಗುತ್ತದೆ; ನಾರಾಯಣ ಪೂಜಾರಿ
ವರ್ತಕರ ಸಂಘದ ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ ಮಾತನಾಡಿ ಗ್ರಾಮೀಣ ಮಹೋತ್ಸವ ನಡೆಸುವುದರಿಂದ ಗ್ರಾಮೀಣ ಭಾಗದ ಜನತೆಗೆ ಹೊಸ ಕಾರುಗಳ ಪರಿಚಯದ ಜೊತೆಗೆ ಕೃಷಿಕರಿಗೂ ಕಾರು ಕೊಂಡುಕೊಳ್ಳುವಲ್ಲಿ ಪ್ರಯೋಜನವಾಗುತ್ತದೆ. ಕೃಷಿಕನೂ ಬಂದು ಕಾರುಗಳ ಪರಿಚಯವನ್ನು ಮಾಡಿಕೊಳ್ಳಲು ಸುಲಭವಾಗುತ್ತದೆ. ಹಿಂದೆ ಕಾರು ಖರೀದಿ ಮಾಡಲು ಕಷ್ಟಕರವಾದ ಪರಿಸ್ಥಿತಿ ಇತ್ತು. ಆದರೆ ಇಂದು ಕಾರು ಬೇಕಾದಲ್ಲಿ ಕಂಪೆನಿಯು ನೇರವಾಗಿ ಖರೀದಿದಾರ ಇರುವ ಪ್ರದೇಶಕ್ಕೆ ಬರುತ್ತಿರುವುದು ಉತ್ತಮ ಕಾರ್ಯವಾಗಿದೆ. ಕಾರು ಖರೀದಿಗೆ ಲೊನ್ ವ್ಯವಸ್ಥೆ ಮತ್ತು ಇತರೆ ಎಲ್ಲಾ ಮಾಹಿತಿಗಳೂ ಸ್ಥಳದಲ್ಲೇ ಲಭ್ಯವಾಗುತ್ತಿದೆ. ಕರ್ನಾಟಕದ ಶ್ರೇಷ್ಟ ಕಾರು ಮಾರಾಟ ಸಂಸ್ಥೆಯಾಗಿರುವ ಮಾಂಡೋವಿ ಮೋಟಾರ‍್ಸ್ ಗ್ರಾಹಕರ ಬೇಡಿಕೆಯನ್ನು ಈಡೇರಿಸುವಲ್ಲಿ ಸಫಲವಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವರ್ತಕರ ಸಂಘದ ಮಾಜಿ ಅಧ್ಯಕ್ಷರಾದ ದಿವಾಕರಶೆಟ್ಟಿ ಕುಂಬ್ರ, ಮೆಲ್ವಿನ್ ಮೊಂತೆರೋ ಕುಂಬ್ರ, ಉದಯ ಆಚಾರ್ಯ ಕುಂಬ್ರ, ಪತ್ರಕರ್ತ ಸಿದ್ದಿಕ್ ಕುಂಬ್ರ ಉಪಸ್ಥಿತರಿದ್ದು ಗ್ರಾಮೀಣ ಮಹೋತ್ಸವಕ್ಕೆ ಶುಭ ಹಾರೈಸಿದರು.
ಮಾಂಡೋವಿ ಸಂಸ್ಥೆಯ ಸೇಲ್ಸ್ ಆಫೀಸರ್ ಹರಿಕಿರಣ್ ರೈ ಸ್ವಾಗತಿಸಿದರು. ರಾಜೇಶ್ ವಂದಿಸಿದರು. ಮಾಂಡೋವಿ ಮೋಟಾರ‍್ಸ್ ಉಪ್ಪಿನಂಗಡಿ ಶಾಖೆಯ ಸೀನಿಯರ್ ರಿಲೇಶನ್‌ಶಿಪ್ ಮೆನೇಜರ್ ಶ್ರೀ ಹರ್ಷ ರೈ ಕಾರ್ಯಕ್ರಮ ನಿರೂಪಿಸಿದರು. ಸೇಲ್ಸ್ ಆಫೀಸರ್ ಸುಮಿತ್ ಅತಿಥಿಗಳಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು. ಗ್ರಾಹಕರಾದ ಅಶ್ಲೇಶ್ ಸಹಕರಿಸಿದರು.
ಹೊಸ ಕಾರುಗಳ ಪರಿಚಯ
ಮಾಂಡೋವಿ ಸಂಸ್ಥೆಯಿಂದ ಬಿಡುಗಡೆಯಾಗಿರುವ ಹೊಸ ಕಾರುಗಳಾದ ಆಲ್ಟೋ ಕೆ 10, ಸೆಲೆರಿಯೋ ಮತ್ತು ವ್ಯಾಗ್ನರ್ ಕಾರುಗಳ ಬಗ್ಗೆ ಸೇಲ್ಸ್ ಆಫೀಸರ್ ಸುಮಿತ್ ಎನ್ ಗ್ರಾಹಕರಿಗೆ ಮಾಹಿತಿ ನೀಡಿದರು.
ಕಾರು ಖರೀದಿಮಾಡುವಲ್ಲಿ ಬೇಕಾದ ದಾಖಲೆಗಳು, ಲೋನ್ ಬಗ್ಗೆ ಮಾಹಿತಿ ಮತ್ತು ವಿವಿಧ ಬ್ಯಾಂಕುಗಳ ಬಡ್ಡಿದರ, ಕಂತುಗಳ ಪಾವತಿ ಕ್ರಮ , ಹಳೆ ಕಾರುಗಳ ಜೊತೆ ಹೊಸ ಕಾರುಗಳ ವಿನಿಮಯ. ಕಾರು ವಿನಿಯಮ ಮಾಡುವಲ್ಲಿ ಕಾರುಗಳ ಮೌಲ್ಯ ಮಾಪನ, ಹೊಸ ಕಾರುಗಳನ್ನು ಖರೀದಿ ಮಾಡುವಲ್ಲಿ ವಿವಿಧ ಬ್ಯಾಂಕುಗಳಿಂದ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಲಾಯಿತು.
ಕರ್ನಾಟಕ ಮೊಟ್ಟ ಮೊದಲ ಮಾರಾಟ ಸಂಸ್ಥೆ
ಮಾಂಡೋವಿ ಮೋಟಾರ‍್ಸ್ ಕಳೆದ 38 ವರ್ಷಗಳ ಹಿಂದೆ ಕರ್ನಾಟದಲ್ಲಿ ತನ್ನ ಸೇವೆಯನ್ನು ಪ್ರಾರಂಭ ಮಾಡಿದ್ದು ಕರ್ನಾಟಕದ ಮೊಟ್ಟ ಮೊದಲ ಕಾರು ಮಾರಾಟ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡಿದೆ. ಗ್ರಾಹಕರ ಅನುಕೂಲತೆಗೆ ತಕ್ಕಂತೆ ಮತ್ತು ಆಧುನಿಕ ಮಾಡೆಲ್ ಯುವ ಜನಾಂಗಕ್ಕೆ ತಕ್ಕಂತೆ ವಿವಿಧ ವಿನ್ಯಾಸಗಳ ಕಾರುಗಳನ್ನು ಮಾರುಕಟ್ಟೆಗೆ ಪರಿಚಯ ಮಾಡುವ ಮೂಲಕ ಕರ್ನಾಟಕ ವಿಶ್ವಾಸಾರ್ಹ ಸಂಸ್ಥೆ ಎಂಬ ಗೌರವವನ್ನು ಉಳಿಸಿಕೊಂಡಿದೆ. ಉಪ್ಪಿನಂಗಡಿಯಲ್ಲಿ ಕಳೆದ 11 ವರ್ಷಗಳಿಂದ ಸಂಸ್ಥೆಯನ್ನು ಆರಂಭಿಸಿರುವ ಮಾಂಡೋವಿ ಕಾರು ಮಾರಾಟ ಸಂಸ್ಥೆಯು ಪುತ್ತೂರು ತಾಲೂಕಿನ ಎಲ್ಲಾ ಗ್ರಾಮೀಣ ಭಾಗಗಳಿಗೆ ತನ್ನ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ.
ಕಾರುಗಳ ಖರೀದಿ ಮಾಡಲಿಚ್ಚಿಸುವ ಗ್ರಾಹಕರು ಸಂಸ್ಥೆಯ ಮೆನೇಜರ್ ಶ್ರೀ ಹರ್ಷ ರೈ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಬಹುದಾಗಿದೆ. ಮೊಬೈಲ್ 9845506596
ವಿಶೇಷ ಕೊಡುಗೆ…!
ಗ್ರಾಮೀಣ ಮಹೋತ್ಸವದ ಪ್ರಯುಕ್ತ ಕೃಷಿಕರಿಗೆ, ಶಿಕ್ಷಕರಿಗೆ, ಗ್ರಾಮೀಣ ಸಹಕಾರಿ ಸೊಸೈಟಿ ಸದಸ್ಯರಿಗೆ, ಸರಕಾರಿ ಹಾಗೂ ಇನ್ನಿತರ ಕಾರ್ಪೋರೇಟ್ ನೌಕರರಿಗೆ ಆಕರ್ಷಕ ಬಡ್ಡಿದರದಲ್ಲಿ ಮತ್ತು ಕಡಿಮೆ ಮುಂಗಡ ಪಾವತಿಯಲ್ಲಿ ಸಾಲ ಸೌಲಭ್ಯವನ್ನು ಸಂಸ್ಥೆಯು ಒದಗಿಸುತ್ತಿದೆ ಎಂದು ಸಂಸ್ಥೆಯು ತಿಳಿಸಿದೆ.