ಸಪ್ತಗಿರಿ ವಠಾರದ ರಸ್ತೆಯುದ್ದಕ್ಕೂ ಚಪ್ಪರ, ತಳಿರುತೋರಣ
ರಕ್ತೇಶ್ವರಿ ನೇಮೋತ್ಸವ ಜೀವನದ ಏಳ್ಗೆಗೆ ದಾರಿ-ರಾಘವೇಂದ್ರ ಅಸ್ರಣ್ಣ
ಪುತ್ತೂರು:ಕೇಪುಳು ಸಪ್ತಗಿರಿಯಲ್ಲಿನ `ತುಳಸಿ ಗೃಹ’ದಲ್ಲಿ ರಕ್ತೇಶ್ವರಿ ದೈವದ ನೇಮೋತ್ಸವ ನ.೧೨ರಂದು ನಡೆಯಿತು.ಸಪ್ತಗಿರಿ ವಠಾರದಲ್ಲಿ ರಸ್ತೆಯುದ್ದಕ್ಕೂ ಚಪ್ಪರ, ತಳಿರುತೋರಣದ ಶೃಂಗಾರ ಸರ್ವಧರ್ಮದ ಬಾಂಧವ್ಯಕ್ಕೆ ಮಾದರಿಯಾಗಿತ್ತು.
ದೇವೇಚ್ಚೆ, ದೇವಿ ಪ್ರೇರಣೆಯಂತೆ ಕೇಪುಳು ಪರಿಸರದಲ್ಲಿ ಹರೀಶ್ ರಾವ್ ಮನೆಯವರಿಗೆ ಮನಸ್ಸಿನಲ್ಲಿ ನೆನೆಸಿಕೊಂಡಂತೆ ಈ ವರ್ಷ ರಕ್ತೇಶ್ವರಿ ಕೋಲ ಕೊಡಬೇಕೆಂಬ ಅಭೀಷ್ಟೆಯಾಗಿ ದೇವಿಯ ಕಾರ್ಯಕ್ಕೆ ಮುಂದಾದ ಸಂದರ್ಭ ಪರಿಸರದ ಸರ್ವಧರ್ಮದವರು ಪೂರ್ಣ ಸಹಕಾರ ನೀಡಿದ್ದು ಪರಿಸರದ ವಠಾರದಲ್ಲೇ ನೇಮೋತ್ಸವ ನಡೆದಿರುವುದು ಮಾದರಿಯಾಗಿದೆ.
ರಕ್ತೇಶ್ವರಿ ನೇಮೋತ್ಸವ ಜೀವನದ ಏಳ್ಗೆಗೆ ದಾರಿ: ದೈವದ ಮಧ್ಯಸ್ಥರಾಗಿ ಆಗಮಿಸಿದ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಅಸ್ರಣ್ಣ ನಾಳ ಅವರು ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.ರಕ್ತೇಶ್ವರಿ ನೇಮ ಕಟ್ಟುಕಟ್ಟಲೆ ಇತರ ದೈವದ ನೇಮಕ್ಕಿಂತ ಭಿನ್ನವಾಗಿರುತ್ತದೆ.ಇಲ್ಲಿ ಪ್ರಧಾನವಾಗಿ ರಕ್ತೇಶ್ವರಿ ದೈವ ಭೂಮಿಯ ದೈವ.ಇದಕ್ಕೆ 1001 ಗಂಡಗಣಗಳಿವೆ.ಅದರಲ್ಲಿ ಪ್ರಧಾನ ಗಂಡಗಣ ಭಾವನ ರಕ್ತೇಶ್ವರಿ ದೈವದ ಜೊತೆ ಇರುತ್ತದೆ.ಈ ಸತ್ಯದ ಅನುಗ್ರಹ ಇದ್ದರೆ ಜೀವನದಲ್ಲಿ ಯಶಸ್ಸು ಸಾಧ್ಯ.ಅದೇ ರೀತಿ ರಕ್ತೇಶ್ವರಿ ನೇಮ ನೋಡಿದರೆ ಪಾಪಪರಿಹಾರ ಆದಂತೆ ಮತ್ತು ಜೀವನದ ಏಳ್ಗೆಗೆ ದಾರಿಯಾಗಿದೆ ಎಂದರು.
ಸಾವಿರಾರು ಮಂದಿಗೆ ಅನ್ನಪ್ರಸಾದ ವಿತರಣೆ: ರಕ್ತೇಶ್ವರಿ ದೈವದ ನೇಮೋತ್ಸವ ಸಂದರ್ಭದಲ್ಲಿ ಪರಿಸರದ ವಠಾರದಲ್ಲಿ ಅನ್ನಪ್ರಸಾದ ವಿತರಣೆ ನಡೆಯಿತು.ಸಾವಿರಾರು ಮಂದಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿ,ದೈವದ ಪ್ರಸಾದ ಪಡೆದರು. ಮೂಡಬಿದ್ರೆಯ ಇರುವೈಲು ಸತೀಶ್ ಇರುವೈಲು ರಕ್ತೇಶ್ವರಿ ದೈವದ ನರ್ತಕರಾಗಿ ಸೇವೆ ಸಲ್ಲಿಸಿದರೆ ಶ್ರೀನಿವಾಸ ಅವರು ರಕ್ತೇಶ್ವರಿ ದೇವದ ಗಂಡಗಣ ಭಾವನ ನರ್ತಕರಾಗಿದ್ದರು.ಶ್ರೀಕಾಂತ್ ಅವರು ವಿವಿಧ ಸಹಕಾರ ನೀಡಿದರು. ತುಳಸಿ ಗ್ರೂಪ್ನ ಶ್ರೀಮತಿ ಸುಗಂಧಿ ಮತ್ತು ಹರೀಶ್ ರಾವ್ ಹಾಗೂ ಮಕ್ಕಳು ಅತಿಥಿಗಳನ್ನು ಸ್ವಾಗತಿಸಿದರು.