ನದಿ ದಡದಲ್ಲಿ ಮಣ್ಣು ಸವಕಳಿ ತಡೆಗಟ್ಟಲು ಸಿದ್ಧಪಡಿಸಿದ್ದ ಬಿದಿರು ಗಿಡ ಎಸೆಯಲ್ಪಟ್ಟು ಪತ್ತೆ

0

 ಉಪ್ಪಿನಂಗಡಿ ಅರಣ್ಯ ಇಲಾಖಾ ನಿಷ್ಟ್ರೀಯತೆ?

ಉಪ್ಪಿನಂಗಡಿ: ನದಿ ದಡದಲ್ಲಿ ಮಣ್ಣು ಸವಕಳಿ ತಡೆಗಟ್ಟುವ ಸಲುವಾಗಿ ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆ ವತಿಯಿಂದ ನದಿ ದಡದಲ್ಲಿ ಬಿದಿರು ನಾಟಿ ಸಲುವಾಗಿ ಸಿದ್ಧ ಪಡಿಸಲಾಗಿರುವ ಬಿದಿರು ಗಿಡಗಳನ್ನು ನಾಟಿ ಮಾಡದೆ ಸ್ಥಳೀಯ ಗುಡ್ಡವೊಂದರಲ್ಲಿ ಎಸೆಯಲ್ಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದು, ಅರಣ್ಯ ಇಲಾಖೆ ಕಾರ್‍ಯವೈಖರಿ ಬಗ್ಗೆ ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತವಾಗಿದೆ.


ಅ. 11 ರಂದು ಉಪ್ಪಿನಂಗಡಿ ನೇತ್ರಾವತಿ ಸೇತುವೆ ಬಳಿಯಿಂದ ಬಿದಿರು ಗಿಡಗಳ ನಾಟಿಗೆ ಚಾಲನೆ ನೀಡಲಾಗಿತ್ತು. ನೇತ್ರಾವತಿ ಸೇತುವೆಯ ಬಳಿ ಇಳಂತಿಲ ಭಾಗದಿಂದ ಬಂದಾರು ತನಕ ಮತ್ತು ಉಪ್ಪಿನಂಗಡಿ ಭಾಗದಲ್ಲಿ ನೀರಕಟ್ಟೆ ತನಕ ಹೀಗೆ ನದಿಯ ಇಕ್ಕಡೆಯಲ್ಲಿ ತಲಾ ಸುಮಾರು 2 ಕಿ.ಮೀ. ದೂರದ ತನಕ 2 ಸಾವಿರ ಗಿಡ ನೆಡುವ ಯೋಜನೆ ರೂಪಿತವಾಗಿದ್ದು, ಆದರೆ ಅರಣ್ಯ ಇಲಾಖಾ ಸಿಬ್ಬಂದಿಗಳು ಅದನ್ನು ನಾಟಿ ಮಾಡದೆ ಗುಡ್ಡವೊಂದರಲ್ಲಿ ಎಸೆದು ಬಿಟ್ಟಿದ್ದಾರೆ ಎಂಬ ದೂರು ವ್ಯಕ್ತವಾಗಿದೆ.
ನದಿ ದಡದಲ್ಲಿ ಮಣ್ಣು ಸವಕಳಿ ತಡೆಗಟ್ಟಲು ಸಲುವಾಗಿ ಬಿದಿರು ಗಿಡ ನೆಡುವ ಯೋಜನೆ ಕೇವಲ ಉದ್ಘಾಟನೆಗಷ್ಟೇ ಸೀಮೀತವಾಗಿ ಉದ್ದೇಶಿತ ಯೋಜನೆ ನಿಷ್ಪ್ರಯೋಜಕವಾಗಿರುವುದು ಕಂಡು ಬಂದಿದೆ. ಸರ್ಕಾರ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಯೋಜನೆ ರೂಪಿಸುತ್ತದೆ, ಆದರೆ ಅದು ಎಷ್ಟರ ಮಟ್ಟಿಗೆ ಫಲಪ್ರದವಾಗುತ್ತದೆ
ಎನ್ನುವುದಕ್ಕೆ ಇದೊಂದು ಜೀವಂತ ನಿದರ್ಶನವಾಗಿದ್ದು. ನದಿ ದಡದ ಮಣ್ಣು ಕೊಚ್ಚಿ ಹೋಗುವುದನ್ನು ತಡೆಗಟ್ಟುವ ಸಲುವಾಗಿ ಎಸೆಯಲ್ಪಟ್ಟಿರುವ ಬಿದಿರು ಗಿಡಗಳನ್ನು ನಾಟಿ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳುವಂತೆ ಆಗ್ರಹ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here