ಪುತ್ತೂರು: ವಾಣಿಜ್ಯ ತೆರಿಗೆ ಇಲಾಖೆ, ಮಕ್ಕಳ ಶಿಶು ಅಭಿವೃದ್ಧಿ ಕಲ್ಯಾಣ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಸಹಿತ ಬ್ರಹ್ಮಕುಮಾರಿ ಆಶ್ರಮ ಹಾಗೂ ದರ್ಬೆಯ ಪ್ರಮುಖ ಜನ ವಸತಿ ಪ್ರದೇಶವನ್ನು ಸಂಪರ್ಕಿಸುವ ದರ್ಬೆ ಸಿಟಿಒ ರಸ್ತೆಯನ್ನು ದುರಸ್ಥಿಗೊಳಿಸುವಂತೆ ಸಾಮಾಜಿಕ ಕಾರ್ಯಕರ್ತರೊಬ್ಬರು ಆಗ್ರಹಿಸಿದ್ದಾರೆ.
ಈ ಭಾಗದಲ್ಲಿ ನಿತ್ಯವೂ ಸಾವಿರಾರು ಜನ ಓಡಾಡುತ್ತಿದ್ದು, ಹಲವು ವರ್ಷಗಳಿಂದ ಯಾವುದೇ ದುರಸ್ತಿ ಕಾರ್ಯ ಕಂಡಿಲ್ಲ. ರಸ್ತೆಯ ಪರಿಸ್ಥಿತಿಯು ತೀರಾ ಹದಗೆಟ್ಟಿದೆ. ರಸ್ತೆಯ ಆರಂಭದಲ್ಲಿ ಒಂದು ಧಾರ್ಮಿಕ ಕೇಂದ್ರ ಇದ್ದು ಅಲ್ಲಿನ ಭಕ್ತರ ವಾಹನಗಳ ಅಡ್ಡಾದಿಡ್ಡಿ ನಿಲುಗಡೆಯಿಂದ ಜನಸಾಮಾನ್ಯರಿಗೆ ಓಡಾಡಲು ತುಂಬ ಅನಾನುಕೂಲ ಆಗುತ್ತಿದೆ. ಆದಷ್ಟು ಶೀಘ್ರ ಈ ರಸ್ತೆಯನ್ನು ದುರಸ್ತಿ ಗೊಳಿಸಿ ಜನ ಸಾಮಾನ್ಯರಿಗೆ ಅನುಕೂಲ ಮಾಡಿ ಕೊಡಬೇಕಾಗಿ ಸಾಮಾಜಿಕ ಕಾರ್ಯಕರ್ತರೊಬ್ಬರು ಆಗ್ರಹಿಸಿದ್ದಾರೆ.