ಪುತ್ತೂರು: ಕಲಕ್ಕತ್ತೆಯ ಎಮಿಟಿ ವಿಶ್ವವಿದ್ಯಾಲಯದ ಎಂಜಿನಿಯರಿ೦ಗ್ ವಿದ್ಯಾಥಿ೯ಗಳಿಗಾಗಿ ಸ್ವದೇಶಿಯವಾಗಿ ಅಭಿವೃದ್ಧಿ ಸಾಧಿಸಿರುವ ತಂತ್ರಜ್ಞಾನ ಹಾಗೂ ಡಾ.ಕಲಾಂ ಅವರ ಕನಸಿನ ಭಾರತ ಎಂಬ ವಿಚಾರದ ಬಗ್ಗೆ ಮೈಸೂರಿನ ನಿವಾಸಿ ಕೇಂದ್ರ ಆರ್ಡಿಓ ಸಂಸ್ಥೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ. ಜಯಪ್ರಕಾಶ್ ರಾವ್ ವಿಶೇಷ ಉಪನ್ಯಾಸ ನಡೆಸಿಕೊಟ್ಟರು. ಉಪಕುಲಪತಿ ಡಾ.ಸಂಜಯ ಕುಮಾರ ಸ್ವಾಗತಿಸಿದರು. ಕಾಯ೯ಕ್ರಮ ನಿಯೋಜಕ ಡಾ. ದಿಪಶಿಶ ಮುಖಜಿ೯ ವಂದಿಸಿದರು. ಪುತ್ತೂರು ನಿವಾಸಿಯಾಗಿರುವ ಜಯಪ್ರಕಾಶ ರಾವ್ರವರು ಕೇಂದ್ರಕಛೇರಿಗೆ ಹೋಗುವ ಮುನ್ನ ದೇಶದ ಹೆಮ್ಮೆಯ ಸ್ವದೇಶಿ ಲಘು ಯುದ್ಧ ವಿಮಾನ ವಿನ್ಯಾಸ ಕೇಂದ್ರ ಬೆಂಗಳೂರಿನಲ್ಲಿ ಸೇವೆ ಆರಂಭಿಸಿದ ರಾವ್ರವರು ಡಾ.ಕಲಾಂ ಅವರ ಸಮನ್ವಯ ಅಧಿಕಾರಿಯಾಗಿಯೂ ಕಾರ್ಯನಿವ೯ಹಿಸಿದ್ದರು. ಇವರು ಕನ್ನಡ ಲೇಖಕರೂ ಆಗಿದ್ದಾರೆ.