ಪುತ್ತೂರು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರಗಳ ಸ್ಥಾಪನೆ

  •  2023ರ ಫೆ.28ರವರೆಗೆ ಕೃಷಿಕರಿಗೆ ಅವಕಾಶ
  • ಎಕ್ರೆಗೆ 16 ಕ್ವಿಂಟಾಲ್‌ನಂತೆ  ಪ್ರತಿ ರೈತರಿಂದ ಗರಿಷ್ಠ 40 ಕ್ವಿಂಟಾಲ್ ಖರೀದಿ

ಮಂಗಳೂರು:ಮುಂಗಾರು ಋತುನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಕೇಂದ್ರಗಳನ್ನು ಪುತ್ತೂರು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ತೆರೆಯಲಾಗಿದೆ. ಡಿಸೆಂಬರ್ 21ರವರೆಗೆ ಕೃಷಿಕರ ಹೆಸರು ನೋಂದಾಯಿಸಲು ನೀಡಲಾಗಿದ್ದ ಕಾಲಾವಕಾಶವನ್ನು 2023ರ ಫೆಬ್ರವರಿ 28ರವರೆಗೆ ವಿಸ್ತರಿಸಲಾಗಿದ್ದು ಅಲ್ಲಿಯವರೆಗೆ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಗೆ ಅವಕಾಶ ನೀಡಲಾಗಿದೆ. ಭತ್ತ ಬೆಳೆದಿರುವ ರೈತರು ಹತ್ತಿರದಲ್ಲಿರುವ ಮಾರುಕಟ್ಟೆ ಮಹಾಮಂಡಳಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

ಪುತ್ತೂರು ತಾಲೂಕು ಸಂಬಂಧಿಸಿದಂತೆ ಪುತ್ತೂರು ಎಪಿಎಂಸಿಯಲ್ಲಿ ವ್ಯವಸ್ಥೆ ಮಾಡಲಾಗಿದ್ದು ಸಂಪರ್ಕಿಬಹುದಾದ ಅಧಿಕಾರಿಗಳು- ಚಂದ್ರಹಾಸ ಮಣಿಯಾಣಿ (ಮೊ.9019956589), ಅಕ್ಷತಾ (ಮೊ. 9902957809), ಅನುಪಮಾ (ಮೊ.9980092713). 

ಉಳಿದಂತೆ ವಿಟ್ಲ ಸೇರಿದಂತೆ ಬಂಟ್ವಾಳ ತಾಲೂಕುಗೆ ಟಿಎಪಿಸಿಎಂಎಸ್ ಬಂಟ್ವಾಳ. ಸಂಪರ್ಕಿಬಹುದಾದ ಅಧಿಕಾರಿಗಳು-ವಿಜಯ(ಮೊ.ಸಂ:9380435485), ಸೌಮ್ಯಾ (ಮೊ.9743857388).

ಸುಳ್ಯ ತಾಲೂಕು-ಎಪಿಎಂಸಿ ಸುಳ್ಯ.ಸಂಪರ್ಕಿಬಹುದಾದ ಅಧಿಕಾರಿಗಳು-ಚಂದ್ರಹಾಸ ಮಣಿಯಾಣಿ(ಮೊ.9019956589),ಅಕ್ಷತಾ (ಮೊ.9902957809),ಅನುಪಮಾ (ಮೊ.9980092713).

ಮಂಗಳೂರು ತಾಲೂಕಿನ ಖರೀದಿ ಕೇಂದ್ರ-ವಿಶ್ವನಾಥ್ ಸುಬ್ರಾಯ ಕಾಮತ್ ಆ್ಯಂಡ್ ಸನ್ಸ್ ಕ್ಯಾಶ್ಯೂ -ಫ್ಯಾಕ್ಟರಿ, ಪದವು, ಶಕ್ತಿನಗರ. ಸಂಪರ್ಕಿಬಹುದಾದ ಅಧಿಕಾರಿಗಳು-(ಪುಟ್ಟಲಿಂಗಯ್ಯ ಮೊ.9448723139), ಸುಜಾತಾ, (ಮೊ.9886778396), ಜಿತೇಂದ್ರಿ ಶೆಟ್ಟಿ (ಮೊ.9108755069). ಮೂಡಿಬಿದಿರೆ ತಾಲೂಕು-ದಯಾನಂದ ಮಲ್ಯ ಕಾಂಪೌಂಡ್, ಮೂಡುಬಿದಿರೆ. ಸಂಪರ್ಕಿಬಹುದಾದ ಅಽಕಾರಿಗಳು -ಪುಟ್ಟಲಿಂಗಯ್ಯ (ಮೊ.9448723139), ಶ್ರೇಯಾಂಶ್ ಜೈನ್ (ಮೊ.9449333732), ಗೌತಮಿ (ಮೊ.9108609067). ಬೆಳ್ತಂಗಡಿ ತಾಲೂಕು-ಎಪಿಎಂಸಿ ಬೆಳ್ತಂಗಡಿ. ಸಂಪರ್ಕಿಬಹುದಾದ ಅಧಿಕಾರಿಗಳು-ರವೀಂದ್ರ ಸಾಲಿಯಾನ್ (ಮೊ.8861520995), ಶಾಂತಿ (ಮೊ.7338601072).

ಗರಿಷ್ಠ 40 ಕ್ವಿಂಟಾಲ್ ಖರೀದಿ

ಸರಕಾರದಿಂದ ನೇಮಿಸಲ್ಪಟ್ಟ ಖರೀದಿ ಏಜೆನ್ಸಿಯು ಭತ್ತ ಖರೀದಿ ಹಂತದಲ್ಲಿ ಕೇಂದ್ರ ಸರಕಾರವು ನಿಗದಿಪಡಿಸಿದ ಮಾನ ದಂಡಗಳ ಅನ್ವಯ ಎಫ್.ಎ.ಕ್ಯೂ. ಗುಣಮಟ್ಟಗಳನ್ನು ದೃಢೀಕರಿಸಲು ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ 16 ಕ್ವಿಂಟಾಲ್‌ನತೆ ಗರಿಷ್ಟ 40 ಕ್ವಿಂಟಾಲ್ ಮೀರದಂತೆ ಭತ್ತ ಖರೀದಿ ಮಾಡಬಹುದು. ಸರಕಾರದಿಂದ ಭತ್ತ ಖರೀದಿಸಲು ರಾಜ್ಯ ಸರಕಾರ ಮಾರುಕಟ್ಟೆ ಮಹಾಮಂಡಳಿಯನ್ನು ಏಜೆನ್ಸಿಯಾಗಿ ನೇಮಿಸಿದ್ದು, ಸಾಮಾನ್ಯ ಭತ್ತ ಪ್ರತಿ ಕ್ವಿಂಟಾಲ್‌ಗೆ 2,040 ರೂ.ಗಳು ಹಾಗೂ ಗ್ರೇಡ್ ಎ ಭತ್ತಕ್ಕೆ 2,060ರೂ.ಗಳನ್ನು ನಿಗದಿಪಡಿಸಲಾಗಿದೆ.

ಸ್ಥಳೀಯವಾಗಿ ಬೆಳೆಯುವ ಭತ್ತದ ತಳಿಗಳಾದ ಜಯ, ಕಜೆ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ, ಉಮಾ, ಅಭಿಲಾಷ ಮತ್ತು ಎಂ.ಒ4 ಭತ್ತದ ತಳಿಗಳನ್ನು ರೈತರಿಂದ ಖರೀದಿಸಲಾಗುವುದು. ಭತ್ತವನ್ನು ಮಾರಾಟ ಮಾಡಿದ ರೈತರಿಗೆ 15 ದಿನಗಳೊಳಗೆ ಬ್ಯಾಂಕ್ ಖಾತೆಗಳಿಗೆ ಹಣವನ್ನು ನೇರ ನಗದು ವರ್ಗಾವಣೆ ಮಾಡಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕರ ಪ್ರಕಟನೆ ತಿಳಿಸಿದೆ. ದ.ಕ.ಜಿಲ್ಲೆಯಲ್ಲಿ ಪಡಿತರದಲ್ಲಿ ಕುಚಲಕ್ಕಿಯನ್ನು ನೀಡುವುದಾಗಿ ಸರಕಾರ ಈಗಾಗಲೇ ಪ್ರಕಟಿಸಿದ್ದು ಈ ಉದ್ದೇಶಕ್ಕಾಗಿಯೇ ಸ್ಥಳೀಯವಾಗಿ ಗುಣಮಟ್ಟದ ಭತ್ತವನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.