233 ಕೋಟಿ ವ್ಯವಹಾರ, 1 ಕೋಟಿ 10 ಲಕ್ಷ ಲಾಭ
ಉಪ್ಪಿನಂಗಡಿ: ತಣ್ಣೀರುಪಂಥ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ 2021-22ನೇ ಸಾಲಿನಲ್ಲಿ 233.66 ಕೋಟಿ ರೂಪಾಯಿ ವ್ಯವಹಾರ ನಡೆಸಿದ್ದು, 1 ಕೋಟಿ 9 ಲಕ್ಷದ 1 ಸಾವಿರದ 983 ರೂಪಾಯಿ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಿ. ನಿರಂಜನ್ ತಿಳಿಸಿದರು.
ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಸಂಘವು ಲೆಕ್ಕ ಪರಿಶೋಧನೆಯಲ್ಲಿ “ಎ” ತರಗತಿಯಲ್ಲಿ ವರ್ಗೀಕರಿಸಲಾಗಿದೆ. ಸತತ 21 ವರ್ಷಗಳಿಂದ “ಎ” ಗ್ರೇಡ್ ಹೊಂದಿದ್ದು, ಸತತ 22 ವರ್ಷಗಳಿಂದ ಲಾಭ ಗಳಿಸುತ್ತಾ ಬಂದಿದೆ. 6 ವರ್ಷಗಳಿಂದ ಶೇಕಡಾ 100 ಸಾಲ ಮರು ಪಾವತಿ ಆಗುತ್ತಿದ್ದು, ಸದಸ್ಯರುಗಳಿಗೆ 12 ಶೇಕಡಾ ಡೆವಿಡೆಂಟ್ ನೀಡಲಾಗಿದೆ ಎಂದರು.
ಸಂಘದ ಕಾರ್ಯ ವ್ಯಾಪ್ತಿಯು ಕರಾಯ, ತಣ್ಣೀರುಪಂಥ ಹಾಗೂ ಉರುವಾಲು ಹೀಗೆ 3 ಗ್ರಾಮವನ್ನು ಒಳಗೊಂಡಂತೆ ಒಟ್ಟು 2392 ಸದಸ್ಯರಿದ್ದು, ಒಟ್ಟು 3,64,25,8055 ರೂಪಾಯಿ ಪಾಲು ಬಂಡವಾಳವನ್ನು ಹೊಂದಿರುತ್ತದೆ ಎಂದು ತಿಳಿಸಿದರು.
2015-16ರಿಂದ ಕೃಷಿಕ ಸದಸ್ಯರಿಗೆ ಬೆಳಿ ವಿಮೆ ಮಾಡಿಸಲಾಗಿದ್ದು, ಪ್ರತಿ ವರ್ಷ ಬೆಕೋಟಿ ವಿಮೆ ಸದಸ್ಯರ ಖಾತೆಗಳಿಗೆ ಜಮೆ ಬಂದಿರುತ್ತದೆ. 2019ರಿಂದ 425 ಜನರಿಗೆ 2 ಕೋಟಿಯಷ್ಟು, 2020ರಲ್ಲಿ 525 ಮಂದಿಗೆ ಸುಮಾರು 2.50 ಕೋಟಿ, 2021ರಲ್ಲಿ 625 ಜನರಿಗೆ ಸುಮಾರು 3 ಕೋಟಿಯಷ್ಟು ಬೆಳಿ ಪರಿಹಾರ ಬಂದಿರುತ್ತದೆ. 2022ನೇ ಸಾಲಿನಲ್ಲಿ 845 ಜನರಿಗೆ ವಿಮೆ ಮಾಡಿಸಲಾಗಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಉಪಾಧ್ಯಕ್ಷ ತಾಜುದ್ದೀನ್, ಪಿ. ಜಯರಾಜ್ ಹೆಗ್ಡೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಂದ್ರ ಪ್ರಸಾದ್ ಇದ್ದರು.