ಕಾಣಿಯೂರು: ಗ್ರಾಮೀಣ ಭಾಗದ ಮಹಿಳೆಯರಿಂದ ತಯಾರಿಸಲಾಗುವ ಉತ್ತನ್ನಗಳ ಮಾರಟಕ್ಕೆ ಸಂಜೀವಿನಿ ಮಾಸಿಕ ಸಂತೆ ಪೂರಕವಾಗಿದ್ದು, ಇದರಿಂದ ಮಹಿಳೆಯರು ಆರ್ಥಿಕವಾಗಿ ಪ್ರಬಲರಾಗಲು ಸಾಧ್ಯ. ತಾವು ಬೆಳೆಸಿದ ಉತ್ತನ್ನಗಳಿಗೆ ಮಾರುಕಟ್ಟೆ ದೊರಕಿಸಿ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ಮಾಸಿಕ ಸಂತೆಯನ್ನು ಆರಂಭಿಸಲಾಗುತ್ತಿದೆ ಎಂದು ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ ಹೇಳಿದರು.
ಅವರು ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ದ.ಕ ಜಿಲ್ಲಾ ಪಂಚಾಯತ್, ಬೆಳಂದೂರು ಗ್ರಾಮ ಪಂಚಾಯತ್ ವತಿಯಿಂದ ನ 24 ರಂದು ಬೆಳಂದೂರು ಗ್ರಾ.ಪಂ ಕಚೇರಿ ಮುಂಭಾಗದಲ್ಲಿ ನಡೆದ ಗ್ರಾಮೀಣ ಸಂಜೀವಿನಿ ರೈತ ಸಂತೆ ಮತ್ತು ಮಾಸಿಕ ಸಂತೆಯನ್ನು ಉದ್ಘಾಟಿಸಿ ಮಾತನಾಡಿದರು.
ಬೆಳಂದೂರು ಪ್ರಗತಿ ಸಂಜಿವೀನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಅಧ್ಯಕ್ಷೆ ಕಾವ್ಯ ಕಂಡೂರು ಅಧ್ಯಕ್ಷತೆ ವಹಿಸಿದ್ದರು. ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ತಾರಾನಾಥ ಕಾಯರ್ಗ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ಬೆಳಂದೂರು ಗ್ರಾ.ಪಂ.ಉಪಾಧ್ಯಕ್ಷೆ ತೇಜಾಕ್ಷಿ ಕೊಡಂಗೆ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ಮಾಹಿತಿ ನೀಡಿದರು.
ಉದ್ಯಮ ಶೀಲತೆ ಉತ್ತೇಜನ ವಲಯ ಸಂಪನ್ಮೂಲ ವ್ಯಕ್ತಿ ಲೂಸಿ ವಿಕ್ಟರ್, ಗ್ರಾ.ಪಂ.ಸದಸ್ಯರಾದ ಉಮೇಶ್ವರಿ ಅಗಳಿ, ಮೋಹನ್ ಅಗಳಿ, ವಿಠಲ ಗೌಡ ಅಗಳಿ, ಪ್ರವೀಣ್ ಕೆರೆನಾರ್, ಜಯಂತ ಅಬೀರ, ಪಾರ್ವತಿ ಮರಕ್ಕಡ, ತಾರಾ ಅನ್ಯಾಡಿ, ಹರಿಣಾಕ್ಷಿ ಬನಾರಿ, ಗೀತಾ ಕುವೆತ್ತೋಡಿ, ಗೌರಿ ಮಾದೋಡಿ, ಕುಸುಮಾ ಅಂಕಜಾಲು, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ತಿಮ್ಮಪ್ಪ ಗೌಡ ಮುಂಡಾಳ, ತಾ.ಪಂ.ಮಾಜಿ ಸದಸ್ಯೆ ಲಲಿತಾ ಈಶ್ವರ್, ಬೆಳಂದೂರು ಗ್ರಾ.ಪಂ.ಮಾಜಿ ಅಧ್ಯಕ್ಷ ನಝೀರ್ ದೇವಸ್ಯ, ಬೆಳಂದೂರು ಸ.ಹಿ.ಪ್ರಾ.ಶಾಲಾ ಮುಖ್ಯಶಿಕ್ಷಕಿ ಜಾನಕಿ, ಗ್ರಾ.ಪಂ.ಲೆಕ್ಕ ಸಹಾಯಕಿ ಸುನಂದ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಸಂಜಿವೀನಿ ಒಕ್ಕೂಟದ ಗೌರಿ ಕಾರ್ಲಾಡಿ ಸ್ವಾಗತಿಸಿ, ಪಾರ್ವತಿ ದಾಮೋದರ ಬೊಮ್ಮೊಡಿ ವಂದಿಸಿದರು. ಬೆಳಂದೂರು ಗ್ರಾ.ಪಂ.ಪ್ರಭಾರ ಅಭಿವೃದ್ಧಿ ಅಧಿಕಾರಿ ನಾರಾಯಣ್ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಮಮತಾ, ಗೀತಾ, ಹರ್ಷಿತ್, ಸಂತೋಷ್ ಸಹಕರಿಸಿದರು.