ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಮಂಗಳೂರು ಪುತ್ತೂರು ಶಾಖೆಯ ಗ್ರಾಹಕ ಸಂಪರ್ಕ ಸಭೆ

0

2025 ಇಸವಿಗೆ ರೂ. 1000/-ಕೋಟಿ ಒಟ್ಟು ವ್ಯವಹಾರ ದಾಖಲಿಸುವ ಗುರಿ:- ಶ್ರೀ ಕೆ. ಜೈರಾಜ್ ಬಿ. ರೈ

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ ಪುತ್ತೂರು ಶಾಖೆಯ ಗ್ರಾಹಕ ಸಂಪರ್ಕ ಸಭೆಯು ರೋಟರಿ ಚಾರಿಟೇಬಲ್ ಟ್ರಸ್ಟ್ ಸಭಾಭವನ ಪುತ್ತೂರಿನಲ್ಲಿ ಜರುಗಿತು.

ಮುಖ್ಯ ಅತಿಥಿಯಾಗಿ ಶ್ ರಾಮಕೃಷ್ಣ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈರವರು ಮಾತನಾಡಿ ಗ್ರಾಹಕರ ಸಂಘದ ಮೇಲಿನ ವಿಶ್ವಾಸ ಹಾಗೂ ಭರವಸೆಯಿಂದ ಸಂಘವು ಅದ್ಭುತವಾದ ಪ್ರಗತಿಯನ್ನು ಸಾಧಿಸಿದೆ. ಆಡಳಿತ ಮಂಡಳಿಯು ಬಹಳ ಪಾರದರ್ಶಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಂಘದ ಸಿಬ್ಬಂಧಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಅವರ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಹಲವಾರು ತರಭೇತಿಗಳನ್ನು ಸಂಘದ ವತಿಯಿಂದ ನೀಡುತ್ತಿದ್ದೇವೆ.

ಈಗಾಗಲೇ ನಮ್ಮ ಸಂಸ್ಥೆಯು ಸತತ 3 ವರ್ಷಗಳಿಂದ 25% ಡಿವಿಡೆಂಟ್ ನೀಡುತ್ತಿದ್ದು, ಮುಂದೆಯೂ ಇದೇ ರೀತಿ ನೀಡಲಿದೆ. ಸಂಘವು ಸಪ್ಟೆಂಬರ್ ಅರ್ಧವಾರ್ಷಿಕ ಅವಧಿಗೆ ರೂ.720/-ಕೋಟಿ ಒಟ್ಟು ವ್ಯವಹಾರ ದಾಖಲಿಸಿದ್ದು, 2025ರ ವೇಳೆಗೆ ತಮ್ಮೆಲ್ಲರ ಸಹಕಾರದಿಂದ ಒಟ್ಟು ವ್ಯವಹಾರ ರೂ.1000/-ಕೋಟಿ ದಾಖಲಿಸುವ ಗುರಿ ಹೊಂದಿದೆ ಎಂದು ತಿಳಿಸಿದರು.

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನಿರ್ದೇಶಕರು ಹಾಗೂ ಪುತ್ತೂರು ಶಾಖಾ ಉಸ್ತುವಾರಿ ನಿರ್ದೇಶಕ ಕೆ. ಸೀತಾರಾಮ ರೈ ಸವಣೂರು ಗ್ರಾಹಕ ಸಂಪರ್ಕ ಸಭೆಯ ಪ್ರಾಮುಖ್ಯತೆ ಹಾಗೂ ಪುತ್ತೂರು ಶಾಖೆಯು ಗ್ರಾಹಕರ ಸಹಕಾರದಿಂದ ಹಾಗೂ ಸಿಬ್ಬಂಧಿಗಳ ಪರಿಶ್ರಮದಿಂದ ಉತ್ತಮವಾಗಿ ಪ್ರಗತಿ ಸಾಧಿಸಿದೆ ಎಂದು ಶ್ಲಾಘಿಸಿದರು.

ನಿರ್ದೇಶಕ ಹಾಗೂ ಪುತ್ತೂರು ಶಾಖಾ ಸಲಹಾ ಸಮಿತಿಯ ಅಧ್ಯಕ್ಷ  ಎ. ಚಿಕ್ಕಪ್ಪ ನಾಕ್ ಪುತ್ತೂರು ಶಾಖೆಯು ಗ್ರಾಹಕರ ಸಹಕಾರದಿಂದ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು. ನಿರ್ದೇಶಕ  ಪಿ.ಬಿ. ದಿವಾಕರ ರೈ,  ಪ್ರಸಾದ್‌ಕೌಶಲ್ ರೈ ಹಾಗೂ  ದಯಾಕರ ಆಳ್ವ ಸಮಯೋಚಿತವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ 5 ಮಂದಿ ಉತ್ತಮ ಗ್ರಾಹಕನ್ನು ಗೌರವಿಸಲಾಯಿತು. ಮಾಸ್‌ನ ಉಪಾಧ್ಯಕ್ಷರಾಗಿ ಆಯ್ಕೆಯಾದಕೆ. ಸೀತಾರಾಮ ರೈ ಸವಣೂರುರವರನ್ನು ಸಂಘದ ಅಧ್ಯಕ್ಷರು ಶಾಲು ಹೊದಿಸಿ ಅಭಿನಂದಿಸಿದರು. ಶಾಖಾ ವ್ಯವಸ್ಥಾಪಕರಾದ ಚಂದ್ರಹಾಸ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ ಶಾಖಾ ವರದಿ ಮಂಡಿಸಿದರು. ಮಹಾ ಪ್ರಬಂಧಕ ಗಣೇಶ್ ಜಿ.ಕೆ.ಯವರು ಧನ್ಯವಾದ ಸಮರ್ಪಿಸಿದರು. ಶಾಖಾ ಸಿಬ್ಬಂದಿಗಳಾದ ಬಾಲಕೃಷ್ಣ ನಾಯ್ಕ್ ಕೆ.ಸಿ. ಪ್ರಾರ್ಥಿಸಿದರು, ಮತ್ತು ಸಪ್ತಮಿ ಎಸ್ ರೈಯವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here