ವಿಟ್ಲಪಡ್ನೂರು‌ ಗ್ರಾಮ ಪಂಚಾಯತ್ ನಲ್ಲಿ ಮಕ್ಕಳ ಗ್ರಾಮ ಸಭೆ

0

ಮಕ್ಕಳ ಬೇಡಿಕೆಗಳನ್ನು ಕೂಡಲೇ ಪರಿಹರಿಸಲು ಪ್ರಯತ್ನಿಸಲಾಗುವುದು: ರೇಷ್ಮಾ ಶಂಕರಿ

ವಿಟ್ಲ: ವಿಟ್ಲ‌ಪಡ್ನೂರು ಗ್ರಾಮ ಪಂಚಾಯತ್ ನಲ್ಲಿ ಮಕ್ಕಳ ಗ್ರಾಮ ಸಭೆ ನಡೆಯಿತು.
ಕಡಂಬು ಶಾಲಾ ವಿದ್ಯಾರ್ಥಿ ನಾಯಕಿ ಸನಾ ಕಾರ್ಯಕ್ರಮದ ಅಧ್ಯಕ್ಷತೆ‌ ವಹಿಸಿದ್ದರು. ಕೊಡುಂಗಾಯಿ ಶಾಲಾ ವಿದ್ಯಾರ್ಥಿಗಳು ದೀಪ ಬೆಳಗಿಸಿ ಸಭೆಯನ್ನು ಉದ್ಘಾಟಿಸಿದರು.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇಷ್ಮಾ ಶಂಕರಿ ರವರು ಮಾತನಾಡಿ ಮಕ್ಕಳು ದೇಶದ ಮುಂದಿನ ಭವಿಷ್ಯ ಅವರನ್ನು ತಂದೆ ತಾಯಿಗಳು ಸರಿಯಾದ ಮಾರ್ಗದರ್ಶನ ನೀಡಿ ಒಳ್ಳೆಯ ಸಂಸ್ಕಾರದೊಂದಿಗೆ ಬೆಳೆಸಬೇಕು ಮಕ್ಕಳಿಗೆ ಕುಂದು ಕೊರತೆಗಳು ಇದ್ದಲ್ಲಿ ಬೇಡಿಕೆಗಳು ಇದ್ದಲ್ಲಿ ಗ್ರಾಮ ಪಂಚಾಯತ್ ಮೂಲಕ ಪರಿಹರಿಸಲು ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀಶೈಲ ಡೋಣುರ ರವರು ಪ್ರಾಸ್ತವಿಕ ಮಾತುಗಳನ್ನಾಡಿದರು.


ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕರಾಟೆಯಲ್ಲಿ ಸಾಧನೆಗೈದ ಸಂಜಯ ಶರ್ಮ, ಭರತನಾಟ್ಯದಲ್ಲಿ ಸಾಧನೆಗೈದ ನಿರೀಕ್ಷಾ ಶೆಟ್ಟಿ, ಕ್ಲೇ ಮಾಡೆಲಿಂಗ್ ನಲ್ಲಿ ಸಾಧನೆಗೈದ ಕಡಂಬು ಶಾಲಾ ವಿದ್ಯಾರ್ಥಿ ಮಹಮ್ಮದ್ ಮುಸ್ತಾಪ ರವರನ್ನು ಗ್ರಾಮ ಪಂಚಾಯತ್ ವತಿಯಿಂದ ಗೌರವಿಸಲಾಯಿತು. ಬಳಿಕ ಮಕ್ಕಳ ಹೆಲ್ಪ್ ಲೈನ್ ವತಿಯಿಂದ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ರೇಣುಕಾ, ಜನಸೇವಾ ಟ್ರಸ್ಟ್ ವತಿಯಿಂದ ಚೇತನ್ ಕುಮಾರ್, ಶಿಕ್ಷಣ ಇಲಾಖೆಯಿಂದ ಸಿಆರ್ಪಿ ಯವರು ಭಾಗವಹಿಸಿ ಇಲಾಖೆಯ ಮಾಹಿತಿ ನೀಡಿದರು. ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ನಾಗೇಶ್ ಕುಮಾರ್ ಶೆಟ್ಟಿ ಸದಸ್ಯರಾದ ರವೀಶ್ ಶೆಟ್ಟಿ ಕರ್ಕಳ, ಪ್ರೇಮಲತಾ, ಜಯಲಕ್ಷ್ಮೀ, ರೇಖಾ,ಹರ್ಷದ್, ಅಮಿತ, ಸಂದೇಶ್ ಶೆಟ್ಟಿ, ನೆಬಿಸ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಸುಜಯ ಮೊದಲಾದವರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.

ಕೊಡಪದವು ಶಾಲಾ ವಿದ್ಯಾರ್ಥಿ ನಾಜಿಯಾ ಕಾರ್ಯಕ್ರಮವನ್ನು ನಿರೂಪಿಸಿದರು. ಕಡಂಬು ಶಾಲಾ ವಿದ್ಯಾರ್ಥಿ ತನುಷಾ ಬಿ. ಎಂ. ಸ್ವಾಗತಿಸಿದರು. ಕಡಂಬು ಶಾಲಾ ವಿದ್ಯಾರ್ಥಿ ಮೊಹಮ್ಮದ್‌ ವಂದಿಸಿದರು.

LEAVE A REPLY

Please enter your comment!
Please enter your name here