ಗೌರವಾಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ; ಅಧ್ಯಕ್ಷರಾಗಿ ಗಂಗಾಧರ ಸುವರ್ಣ; ಕಾರ್ಯಾಧ್ಯಕ್ಷರಾಗಿ ಶರತ್ಚಂದ್ರ ಬೈಪಡಿತ್ತಾಯ; ಪ್ರಕಾರ್ಯದರ್ಶಿ: ಪ್ರವೀಣ್ ನಾಯಕ್
ಪುತ್ತೂರು: ನರಿಮೊಗರು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಸಭೆ ಅರುಣೋದಯ ಆಡಿಟೋರಿಯಂನಲ್ಲಿ ನಡೆಯಿತು. ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಂಗಾಧರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ರಂಗಮಂದಿರದ ಕಾಮಗಾರಿಯನ್ನು ಹಿರಿಯ ವಿದ್ಯಾರ್ಥಿ ಸಂಘದಿಂದಲೇ ನಡೆಸುವುದೆಂದು ಮತ್ತು 2023 ಜನವರಿ ತಿಂಗಳ ಕೊನೆಯ ವಾರದಲ್ಲಿ ಲೋಕಾರ್ಪಣೆ ಮಾಡುವುದೆಂದು ನಿರ್ಣಯಿಸಲಾಯಿತು. ರಂಗಮಂದಿರದ ಬಗ್ಗೆ ಈಗಾಗಲೇ ದೇಣಿಗೆ ಸಂಗ್ರಹಿಸಿದ ಮೊತ್ತವನ್ನು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಹಿರಿಯ ವಿದ್ಯಾರ್ಥಿ ಸಂಘಕ್ಕೆ ಲೆಕ್ಕ ಪತ್ರವನ್ನು ಕೊಡಬೇಕೆಂದು ನಿರ್ಣಯಿಸಲಾಯಿತು.
ನಂತರ ರಂಗ ಮಂದಿರ ಲೋಕಾರ್ಪಣಾ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷರಾಗಿ ಗಂಗಾಧರ ಸುವರ್ಣ, ಕಾರ್ಯಾಧ್ಯಕ್ಷರಾಗಿ ಶರತ್ಚಂದ್ರ ಬೈಪಡಿತ್ತಾಯ ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್ ನಾಯಕ್ ಹಾಗೂ ಕೋಶಾಧಿಕಾರಿಯಾಗಿ ಚಂದ್ರಶೇಖರ ಕುರೆಮಜಲು ಅವರನ್ನು ಆಯ್ಕೆ ̧ಮಾಡಲಾಯಿತು. ಜೊತೆ ಕಾರ್ಯದರ್ಶಿಯಾಗಿ ಪುರುಷೋತ್ತಮ ಬಿ ಕೆ ಹಾಗೂ ಧನಂಜಯ ಕಲ್ಲಮ, ಉಪಾಧ್ಯಕ್ಷರಾಗಿ ನೀಲಪ್ಪ ಪೂಜಾರಿ, ಉಮೇಶ್ ಇಂದಿರಾನಗರ, ಕೂಸಪ್ಪ ಪೂಜಾರಿ, ಅಧ್ಯಕ್ಷ ಸುಂದರ ಬಿ.ಕೆ, ಮೋಹನ್ ನಾಯ್ಕ, ಸುರೇಶ್ ಪ್ರಭು ಶೆಟ್ಟಿಮಜಲು, ಹರೀಶ್ ನಾಯ್ಕ, ಜಯರಾಮ ಗೌಡ, ವಿಶ್ವನಾಥ, ಅಶೋಕ್ ಕುಮಾರ್ ಪುತ್ತಿಲ ಅವರನ್ನು ಆಯ್ಕೆ ಮಾಡಲಾಯಿತು. ಸದಸ್ಯರಾಗಿ ಪ್ರವೀಣ್ ಆಚಾರ್ಯ, ಪುರಂದರ ನಡುಬೈಲು, ಸತೀಶ್ ಬಿ.ಕೆ, ಧನು ಬಜಪ್ಪಳ ಮೊದಲಾದವರನ್ನು ಆಯ್ಕೆ ಮಾಡಲಾಯಿತು.