ಪುತ್ತೂರು: ಮಲಯಾಳ ಮಾತೃಭಾಷೆಯಾಗಿದ್ದರೂ ಕನ್ನಡದಲ್ಲಿ ಅಪೂರ್ವ ವಾಗ್ಮಿಯಾಗಿ ಮಿಂಚಿದ ಕುಂಬಳೆ ಸುಂದರ ರಾಯರು ಆಟ ಮತ್ತು ತಾಳಮದ್ದಳೆಯಲ್ಲಿ ತನ್ನದೇ ಶೈಲಿಯ ಕಲಾವಿದನಾಗಿ ಯಕ್ಷಗಾನದ ಇತಿಹಾಸದಲ್ಲಿ ದಾಖಲಾಗಿದ್ದಾರೆಂದು ಮಾಣಿ ಬಾಲವಿಕಾಸ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ರವೀಂದ್ರ ದರ್ಬೆ ತಿಳಿಸಿದರು.
ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಗಾನ ಸಂಘದ ವತಿಯಿಂದ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಜರಗಿದ ಕುಂಬಳೆ ಸುಂದರ ರಾಯರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಿವೃತ್ತ ಶಿಕ್ಷಕ ಕಲಾವಿದ ಗೋಪಾಲ್ ಶೆಟ್ಟಿ ಕಳೆಂಜ ನುಡಿ ನಮನ ಸಲ್ಲಿಸಿದರು. ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಕುಂಬಳೆ ಸುಂದರ ರಾವ್ ಅವರ ಕಾರ್ಯಸಾಧನೆ ಬಗ್ಗೆ ಮಾತನಾಡಿದರು.
ದೇವಳದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಹರಿರಾಮಚಂದ್ರ, ಕಿಶೋರ್ ಮೂಡಾಯಿರು, ಮಹಾಲಿಂಗೇಶ್ವರ ಭಟ್ ಪೆರಿಯಡ್ಕ, ಪಾತಾಳ ಅಂಬಾ ಪ್ರಸಾದ್, ಸತೀಶ ಶಿರ್ಲಾಲು, ಪದ್ಮನಾಭ ಕುಲಾಲ್, ಹರೀಶ್ ಆಚಾರ್ಯ ಬಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಶ್ರೀಪತಿ ಭಟ್ ಉಪ್ಪಿನಂಗಡಿ ಸ್ವಾಗತಿಸಿ ಉಪನ್ಯಾಸಕ ಗುಡ್ಡಪ್ಪ ಬಲ್ಯ ವಂದಿಸಿದರು. ಸಂಜೀವ ಪಾರೆಂಕಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸುಧನ್ವ ಮೋಕ್ಷ ತಾಳಮದ್ದಳೆ ಜರಗಿತು.