ಪುತ್ತೂರು: ರೆಣಿಗೇಡ್ಸ್ ಕೂರ್ನಡ್ಕ ಇವರ ಸಾರಥ್ಯದಲ್ಲಿ ಕೂರ್ನಡ್ಕ ವ್ಯಾಪ್ತಿಯ ಕ್ರಿಕೆಟ್ ಪಟುಗಳನ್ನೊಳಗೊಂಡ ಲೀಗ್ ಮಾದರಿಯ ‘ಕೂರ್ನಡ್ಕ ಪ್ರೀಮಿಯರ್ ಲೀಗ್-ಸೀಸನ್ 3 ಓವರ್ ಆರ್ಮ್ ನಿಗದಿತ ಓವರ್ ಗಳ ಕ್ರಿಕೆಟ್ ಟೂರ್ನಮೆಂಟ್ ಡಿ.10 ಹಾಗೂ 11 ರಂದು ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಐತಿಹಾಸಿಕ ಕ್ರೀಡಾಂಗಣದಲ್ಲಿ ಜರಗಿದ್ದು, ಗ್ಲ್ಯಾಡಿಯೇಟರ್ಸ್ ಸೀಸನ್ 3 ಚಾಂಪಿಯನ್ ಎನಿಸಿಕೊಂಡಿದ್ದು, ವ್ಯಾಂಡಲ್ಸ್ ತಂಡ ರನ್ನರ್ಸ್ ಪ್ರಶಸ್ತಿ ಪಡೆದುಕೊಂಡಿದೆ.
ಫೈನಲ್ ಪಂದ್ಯಾಟದ ಪಂದ್ಯಶ್ರೇಷ್ಟರಾಗಿ ಗ್ಲ್ಯಾಡಿಯೇಟರ್ಸ್ ತಂಡದ ಪ್ರೀತಂ ಮಸ್ಕರೇನ್ಹಸ್ ಸಿಝ್ಲರ್ ಹಾಗೂ ಪಂದ್ಯ ಪುರುಷೋತ್ತಮರಾಗಿ ವ್ಯಾಂಡಲ್ಸ್ ತಂಡದ ರಕ್ಷಿತ್ ಎ.ಎಫ್.ಸಿ ರವರು ವಿಜೇತರಾಗಿದ್ದಾರೆ. ಉತ್ತಮ ಬ್ಯಾಟರ್ ಆಗಿ ವ್ಯಾಂಡಲ್ಸ್ ತಂಡದ ರಕ್ಷಿತ್ ಎ.ಎಫ್.ಸಿ, ಉತ್ತಮ ಬೌಲರ್ ಆಗಿ ಗ್ಲ್ಯಾಡಿಯೇಟರ್ಸ್ ತಂಡದ ರಿತು ಸಿಝ್ಲರ್, ಉತ್ತಮ ಕ್ಷೇತ್ರರಕ್ಷಕರಾಗಿ ಗ್ಲ್ಯಾಡಿಯೇಟರ್ಸ್ ತಂಡದ ಕಾರ್ತೀಕ್ ಎ.ಎಫ್.ಸಿ, ಎಫ್-3 ಕಮಾಲ್ ಕ್ಯಾಚ್ ವಿಜೇತರಾಗಿ ವ್ಯಾಂಡಲ್ಸ್ ತಂಡದ ನೌಶಾದ್ ಕೂರ್ನಡ್ಕರವರು ಹೊರ ಹೊಮ್ಮಿದ್ದಾರೆ.
ಅತಿಥಿಗಳಾಗಿ ಸಿಝ್ಲರ್ ಸಾಪ್ಟ್ ಡ್ರಿಂಕ್ಸ್ ಮಾಲಕ ಪ್ರಸನ್ನ ಕುಮಾರ್ ಶೆಟ್ಟಿ, ಪ್ರಸಾದ್ ಇಂಡಸ್ಟ್ರೀಸ್ ನ ಶಿವಪ್ರಸಾದ್ ಶೆಟ್ಟ, ಉದ್ಯಮಿ ರೋಶನ್ ರೆಬೆಲ್ಲೋ ಪುತ್ತೂರು, ನಗರಸಭಾ ಸದಸ್ಯರಾದ ಯೂಸುಫ್ ಡ್ರೀಮ್ಸ್ ಹಾಗೂ ಬಾಲಚಂದ್ರ ಕೆ, ಖಲಂದರ್ ಅಝರ್ ಟ್ರಾನ್ಸ್ ಪೋರ್ಟ್ ಪುತ್ತೂರು, ರವಿ ಕೊಠಾರಿ ಪುತ್ತೂರು, ಕೂರ್ನಡ್ಕ ಎಸ್.ಡಿ.ಪಿ.ಐ ಅಧ್ಯಕ್ಷ ಯಾಹ್ಯಾ ಕೆ.ಎಚ್, ಅಶ್ರಫ್ ಯು.ಕೆ ದುಬೈ, ಅಭಿರಾಮ್ ಫ್ರೆಂಡ್ಸ್ ನ ಶರತ್ ಕೇಪುಳು, ಜಬ್ಬಾರ್ ಏಷಿಯನ್ ವುಡ್ಸ್ ಪುತ್ತೂರು, ಕಲರ್ಸ್ ಕನ್ನಡ ಪ್ರಶಸ್ತಿ ವಿಜೇತ ಮಾಧವ ಪ್ರಭು ಕೂರ್ನಡ್ಕ, ಮೊಹಮದ್ ಸಾಬ್ ಕೂರ್ನಡ್ಕ, ಮೊಟ್ಟೆತ್ತಡ್ಕ ಮಸೀದಿಯ ಅಧ್ಯಕ್ಷ ಅಬೂಬಕ್ಕರ್, ನವಜೀವನ್ ಫ್ಲವರ್ಸ್ ನ ಜೋನ್ ಪೀಟರ್ ಡಿ’ಸಿಲ್ವ ಸಹಿತ ಹಲವರು ಗಣ್ಯರು ಉಪಸ್ಥಿತರಿದ್ದು ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ರೆಣಿಗೇಡ್ಸ್ ಕೂರ್ನಡ್ಕ ತಂಡದ ಸಿಯಾಬ್ ಕೂರ್ನಡ್ಕ, ಫಾರೂಕ್ ಕೂರ್ನಡ್ಕ, ಪವನ್ ಕೂರ್ನಡ್ಕ, ಶಾಹಿಲ್ ಕೂರ್ನಡ್ಕ, ಮೊಹಮದ್ ಕೂರ್ನಡ್ಕರವರು ಕ್ರಿಕೆಟ್ ಕೂಟವನ್ನು ಸಂಘಟಿಸಿದ್ದರು.
ಗೌರವಾರ್ಪಣೆ…
ಈ ಸಂದರ್ಭದಲ್ಲಿ ಕಲರ್ಸ್ ಕನ್ನಡ ಪ್ರಶಸ್ತಿ ವಿಜೇತ ಮಾಧವ ಪ್ರಭು ಕೂರ್ನಡ್ಕ, ನಗರಸಭಾ ಸದಸ್ಯರಾದ ಯೂಸುಫ್ ಡ್ರೀಮ್ಸ್, ಬಾಲಚಂದ್ರ ಕೆ, ಲಿಟ್ಲ್ ಫ್ಲವರ್ ಶಾಲೆಯ ನಿವೃತ್ತ ಶಿಕ್ಷಕಿ ಐರಿಷ್ ರೆಬೆಲ್ಲೋ, ಸಿಝ್ಲರ್ ಸಾಪ್ಟ್ ಡ್ರಿಂಕ್ಸ್ ಮಾಲಕ ಪ್ರಸನ್ನ ಕುಮಾರ್ ಶೆಟ್ಟಿರವರುಗಳನ್ನು ಗುರುತಿಸಿ ಅವರುಗಳಿಗೆ ಸ್ಮರಣಿಕೆ ನೀಡುವ ಮೂಲಕ ಗೌರವಾರ್ಪಣೆ ಸಲ್ಲಿಸಲಾಯಿತು.
6 ತಂಡಗಳು…
ರೆಣಿಗೇಡ್ಸ್ ಕೂರ್ನಡ್ಕ
ಮೆರಿಟ್ ಲೈನ್ ಚಾಲೆಂಜರ್ಸ್
ವ್ಯಾಂಡಲ್ಸ್
ಟೀಮ್ ಎಫ್-ತ್ರೀ ಕ್ಲಬ್
ಗ್ಲ್ಯಾಡಿಯೇಟರ್ಸ್
ಟೈಟಾನ್ಸ್