ಪುತ್ತೂರು: ಸ.ಹಿ.ಪ್ರಾ ಶಾಲೆ ನೆಟ್ಟಣಿಗೆ ಮುಡ್ನೂರು ಕರ್ನೂರು ಇಲ್ಲಿ ಹಿರಿಯ ವಿದ್ಯಾರ್ಥಿಗಳ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟ ಡಿ.11ರಂದು ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ನ ಅಧ್ಯಕ್ಷ ರಮೇಶ್ ರೈ ಸಾಂತ್ಯ ಇವರು ವಹಿಸಿ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶಗಳನ್ನು ಕಲ್ಪಿಸಿಕೊಟ್ಟಾಗ ಅವರು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಾರೆ ಎಂದು ಶುಭ ಹಾರೈಸಿದರು.
ಪಂಚಾಯತ್ ನ ಸದಸ್ಯ ಶ್ರೀರಾಮ ಪಕ್ಕಳ ಇವರು ದೀಪವನ್ನು ಬೆಳಗಿಸಿ ಕರ್ನೂರು ಶಾಲೆಯ ಕ್ರೀಡಾ ಪ್ರತಿಭೆಗಳನ್ನು ಸ್ಮರಿಸಿದರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಹಿರಿಯರಾದ ಮೊಹಮ್ಮದ್ ಬಾಂಟಡ್ಕ ,ಸುಭಾಷ್ ಚಂದ್ರ ರೈ ಮೈರೊಳು ,ವಾಲಿಬಾಲ್ ಪಂದ್ಯಾಟದ ಗೌರವಾಧ್ಯಕ್ಷರಾದ ಬಿ.ಹೆಚ್ ಸೂಪಿ, ವಾಲಿಬಾಲ್ ಸಮಿತಿಯ ಅಧ್ಯಕ್ಷರಾದ ಮೂಸಾ ಅಡ್ಕಂ ,ಪಂಚಾಯತ್ ಸದಸ್ಯರಾದ ಪ್ರದೀಪ್ ರೈ ಇವರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಗುರುಗಳಾದ ರಮೇಶ್ ಶಿರ್ಲಾಲು ಎಲ್ಲರನ್ನು ಸ್ವಾಗತಿಸಿ ಧನ್ಯವಾದಗೈದರು. ಶಾಲೆಯ ಹಿರಿಯ ವಿದ್ಯಾರ್ಥಿ ಸಹದ್ ಕರ್ನೂರು ಕಾರ್ಯಕ್ರಮವನ್ನು ನಿರೂಪಿಸಿದರು .ತಂಡಗಳಲ್ಲಿ ಸುಮಾರು 80ರಷ್ಟು ವಾಲಿಬಾಲ್ ಆಟಗಾರರು ಒಳಗೊಂಡಿದ್ದರು ಊರಿನ ಕ್ರೀಡಾ ಅಭಿಮಾನಿಗಳು ವಿದ್ಯಾಭಿಮಾನಿಗಳು ಹಿರಿಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.