ಪುತ್ತೂರು: ಕೋಡಿಂಬಾಡಿಯ ಕಜೆ ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ ಕಾರ್ಯಕ್ರಮ ಬಾಲವಿಕಾಸ ಸಮಿತಿ, ಸ್ತ್ರೀ ಶಕ್ತಿ ಸ್ವಸಹಾಯ ಸಂಘ, ಹಿರಿಯ ವಿದ್ಯಾರ್ಥಿಗಳು ಮತ್ತು ಪೋಷಕರ ಸಹಕಾರದೊಂದಿಗೆ ನಡೆಯಿತು. ಅಂಗನವಾಡಿ ಪುಟಾಣಿಗಳು ಪ್ರಾರ್ಥನೆ ಮಾಡಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ನಿಡ್ಯ ವಹಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯರಾದ ಜಯಪ್ರಕಾಶ್ ಬದಿನಾರು, ವಿಶ್ವನಾಥ್ ಕೃಷ್ಣಗಿರಿ, ಬಾಲವಿಕಾಸ ಸಮಿತಿ ಮಾಜಿ ಅಧ್ಯಕ್ಷರಾದ ಸೇಸಪ್ಪ ಪೂಜಾರಿ ನಿಡ್ಯ, ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಅಧ್ಯಕ್ಷೆ ಶಾರದ ಸಿ.ರೈ, ಉಷಾ ಮುಖೇಶ್, ಬೀರಿಗ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಅರುಣಾ ಡಿ, ಹಿರಿಯ ವಿದ್ಯಾರ್ಥಿ ಸಂಘದ ನಾಯಕ ಜಗದೀಶ್ ಕಜೆ ಶುಭ ಹಾರೈಸಿದರು. ಕುಮಾರಿ ತುಳಸಿ ಸ್ವಾಗತಿಸಿ ಜಗದೀಶ್ ವಂದಿಸಿದರು. ಬಳಿಕ ಅಂಗನವಾಡಿ ಪುಟಾಣಿಗಳು, ಹಿರಿಯ ವಿದ್ಯಾರ್ಥಿಗಳು, ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಸದಸ್ಯರು ಮತ್ತು ಪೋಷಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತ್ ಅಧ್ಯಕ್ಷ ರಾಮಚಂದ್ರ ಪೂಜಾರಿ ವಹಿಸಿ ಶುಭ ಹಾರೈಸಿದರು, ಶಿಶು ಅಭಿವೃದ್ಧಿ ಇಲಾಖೆಯ ನಿವೃತ್ತ ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಟಿ. ಹೆಗ್ಡೆ, ಕೋಡಿಂಬಾಡಿ ವೃತ್ತದ ಮೇಲ್ವಿಚಾರಕಿ ಹರೀಣಾಕ್ಷಿ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಲಕ್ಷ್ಮಣ ಗೌಡ ಶುಭ ಹಾರೈಸಿದರು. ದಕ್ಷಿಣ ಕನ್ನಡ ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಸ್ವಚ್ಛತೆಯ ಮಾಹಿತಿ ನೀಡಿ ಸ್ವಚ್ಚ ಗ್ರಾಮ ಮಾಡುವ ಬಗ್ಗೆ ಜನರಿಗೆ ಕರೆ ನೀಡಿದರು. ಅಂಗನವಾಡಿ ಕೇಂದ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಸುಮಾರು ಇಪ್ಪತ್ತು ಜನರಿಗೆ ತೆಂಗಿನ ಸಸಿ ನೀಡುವ ಮೂಲಕ ಗೌರವಿಸಲಾಯಿತು.
ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಸದಸ್ಯರು, ಹಿರಿಯ ವಿದ್ಯಾರ್ಥಿಗಳು, ಪೋಷಕರನ್ನು ಹೂವಿನ ಗಿಡ ನೀಡಿ ಗೌರವಿಸಲಾಯಿತು ಇದರ ಸಂಪೂರ್ಣ ಪ್ರಾಯೋಜಕತ್ವವನ್ನು ಹಿರಿಯ ವಿದ್ಯಾರ್ಥಿ ಸಂಘದ ನಾಯಕ ಜಗದೀಶ ಕಜೆ ವಹಿಸಿದ್ದರು. ವಾರ್ಷಿಕೋತ್ಸವದ ಅಂಗವಾಗಿ ನಡೆಸಿದ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹಿರಿಯ ವಿದ್ಯಾರ್ಥಿ ಕುಮಾರ್ ಬೋಲಾಜೆ ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಕಾರ್ಯಕ್ರಮದಲ್ಲಿ ಗುರುತಿಸಿ ಗೌರವಿಸಲಾಯಿತು. ಕಾರ್ಯಕ್ರಮ ಪ್ರಾಯೋಜಕರುಗಳಾಗಿ ಬಾಲಕೃಷ್ಣ ಗೌಡ ಬಾರ್ತಿಕುಮೇರುಹ, ಕೇಶವ ಭಂಡಾರಿ ಕೈಪ, ಈಶ್ವರ ಪೂಜಾರಿ ನಿಡ್, ಶೇಖರ್ ಪೂಜಾರಿ ಡೆಕ್ಕಾಜೆ, ಭಾಗ್ಯಶ್ರಿ, ಧನಲಕ್ಷ್ಮಿ ಸ್ವಸಹಾಯ ಸಂಘ, ಶ್ರೀಮತಿ ರಾಜೀವ ಮೀನಾಕ್ಷಿ ದರ್ಖಾಸು, ವಿಶ್ವನಾಥ್ ಕೃಷ್ಣಗಿರಿ, ಸೇಸಪ್ಪ ಪೂಜಾರಿ ನಿಡ್ಯ, ಅಂಗನವಾಡಿ ಮಕ್ಕಳ ಪೋಷಕರು, ಸಂಜೀವಿನಿ ಸ್ವಸಹಾಯ ಸಂಘ ವಹಿಸಿದ್ದರು.
ಕೃಷ್ಣ ಮೂಲ್ಯ, ಅಂಗನವಾಡಿ ಕಾರ್ಯಕರ್ತೆಯರಾದ ಅರುಣ ಡಿ, ರೇವತಿ, ಸುಮಲತಾ, ಜಯಂತಿ, ಮಲ್ಲಿಕಾ, ಗೌರಿ, ಶ್ರೀಮತಿ ಬನ್ನೂರುಕಟ್ಟೆ, ಸರೋಜಿನಿ, ಆಶಾ ಕಾರ್ಯಕರ್ತೆ ಪವಿತ್ರಾ, ವಿಕಲಚೇತನರ ಕಾರ್ಯಕರ್ತೆ ಲೀಲಾವತಿ, ಪಂಚಾಯತ್ ಸದಸ್ಯರಾದ ರಾಮಣ್ಣ ಗೌಡ ಗುಂಡೋಲೆ, ಕೋಡಿಂಬಾಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ರೇವತಿ. ವಿ. ಪೂಜಾರಿ, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಬಾಬು ಗೌಡ ಬಂಡಾರದ ಮನೆ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಯಶೋದ ಬಾರ್ತಿಕುಮೇರು, ಮುಖೇಶ್ ಕೆಮ್ಮಿಂಜೆ, ಶೇಖರ್ ಪೂಜಾರಿ ನಿಡ್ಯ ನಿರೂಪಣೆ ಮಾಡಿದರು.