ಬೆಟ್ಟಂಪಾಡಿ ಕಾಲೇಜಿಗೆ ನ್ಯಾಕ್ `ಬಿ+’ ಮಾನ್ಯತೆ

0

ದ.ಕ. ಜಿಲ್ಲೆಯ ಗರಿಷ್ಠ ಗ್ರೇಡ್ ನ ಸರಕಾರಿ ಕಾಲೇಜು

ಬೆಟ್ಟಂಪಾಡಿ: ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ನಿರ್ಧರಿಸುವ ರಾಷ್ಟçಮಟ್ಟದ ಸ್ವತಂತ್ರ ಮೌಲ್ಯಮಾಪನ ಸಂಸ್ಥೆಯಾದ ನ್ಯಾಕ್ (National Assessment & Accreditation Council) ಇದರಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೆಟ್ಟಂಪಾಡಿಗೆ 2.73 ಅಂಕಗಳೊAದಿಗೆ ಬಿ+ ಮಾನ್ಯತೆ ಅಭಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಕಾಲೇಜುಗಳಲ್ಲಿ ಇದು ಗರಿಷ್ಠ ಗ್ರೇಡ್ ಎಂದು ದಾಖಲಾಗಿದೆ. ಖ್ಯಾತ ಶಿಕ್ಷಣ ತಜ್ಞರನ್ನೊಳಗೊಂಡ ನ್ಯಾಕ್ ತಂಡವು ದಶಂಬರ 7 ಮತ್ತು 8 ರಂದು, ನಾಲ್ಕನೆಯ ಸುತ್ತಿನ ಮೌಲ್ಯಮಾಪನಕ್ಕಾಗಿ ಬೆಟ್ಟಂಪಾಡಿ ಕಾಲೇಜಿಗೆ ಭೇಟಿ ನೀಡಿದ್ದು ಇಲ್ಲಿನ ಶೈಕ್ಷಣಿಕ ಗುಣಮಟ್ಟ ಮತ್ತು ಪೂರಕ ವ್ಯವಸ್ಥೆಗಳನ್ನು ಕೂಲಂಕಷವಾಗಿ ಅಧ್ಯಯನ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿತ್ತು.

ತಿರುವನಂತಪುರದ ಕೇರಳ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳೂ ಖ್ಯಾತ ರಸಾಯನ ಶಾಸ್ತç ತಜ್ಞರೂ ಆಗಿರುವ ಪ್ರೊ. ಪಿ.ಕೆ. ರಾಧಾಕೃಷ್ಣನ್ ಅವರು ತಂಡದ ನೇತೃತ್ವವನ್ನು ವಹಿಸಿದ್ದರು. ಝಾರ್ಖಂಡ್ ನ ವಿಶ್ವವಿದ್ಯಾಲಯವೊಂದರ ಮ್ಯಾನೇಜ್‌ಮೆಂಟ್ ವಿಭಾಗದ ಪ್ರಾಧ್ಯಾಪಕರಾದ ಡಾ. ಸ್ಮೃತಿ ರಂಜನ್ ರತ್ ಮತ್ತು ಬಿಹಾರದ ಭಾಗಲ್ಪುರದ ಪ್ರಾಂಶುಪಾಲರಾದ ಡಾ. ಕೆ. ಡಿ. ಪ್ರಭಾತ್ ಎಂಬವರು ತಂಡದ ಇತರ ಸದಸ್ಯರಾಗಿದ್ದರು. ತಂಡವು ಕಾಲೇಜಿನ ಪ್ರಾಧ್ಯಾಪಕರ ಮತ್ತು ವಿದ್ಯಾರ್ಥಿಗಳ ಕ್ರಿಯಾಶೀಲತೆಯನ್ನೂ ಶೈಕ್ಷಣಿಕ ಗುಣಮಟ್ಟವನ್ನೂ, ಕಾಲೇಜಿನಲ್ಲಿ ಲಭ್ಯವಿರುವ ಸೌಲಭ್ಯಗಳನ್ನೂ ಬಹುವಾಗಿ ಮೆಚ್ಚಿಕೊಂಡಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ ಅವರ ನೇತೃತ್ವದ ಅಧ್ಯಾಪಕರ ತಂಡದಿಂದ ನ್ಯಾಕ್ ಸಮಿತಿಯ ಮುಂದೆ ಅಗತ್ಯದ ದಾಖಲೆಗಳನ್ನು ಪ್ರಸ್ತುತಪಡಿಸಲಾಯಿತು. ಸಮಿತಿಯು ಶಾಸಕರಾದ ಸಂಜೀವ ಮಠಂದೂರು ಅವರ ಅಧ್ಯಕ್ಷತೆಯ ಅಭಿವೃದ್ಧಿ ಸಮಿತಿಯ ಜತೆಗೂ ಪೋಷಕರು ಮತ್ತು ಹಳೆವಿದ್ಯಾರ್ಥಿಗಳ ಜತೆಗೂ ಸಂವಾದವನ್ನು ನಡೆಸಿತ್ತು.

ಕಾಲೇಜಿನ ಈ ಹಿರಿಮೆಗೆ ಶಾಸಕರಾದ ಸಂಜೀವ ಮಠಂದೂರು, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಡಾ. ಜೆನ್ನಿಫರ್ ಲೋಲಿಟಾ ಮತ್ತು ಶಿಕ್ಷಣ ರಂಗದ ಪ್ರಮುಖರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here