ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ರಜತ ಸಂಭ್ರಮ; ಸಾಧಕರಿಗೆ ಸನ್ಮಾನ-ಸ್ಮರಣ ಸಂಚಿಕೆ ಅನಾವರಣ

0

ಪುಣ್ಯದ ಫಲಕ್ಕಾಗಿ ಧರ್ಮ ಕಾರ್ಯ ಮಾಡಬೇಕು-ಎಸ್ ಅಂಗಾರ

  • ಸಂಘಟನೆಗಳಲ್ಲಿ ಭಾಗಿಯಾಗುವುದರಿಂದ ಹೊಸ ಬದುಕನ್ನು ಕಂಡುಕೊಳ್ಳಲು ಸಾಧ್ಯ- ಮನೋಹರ್ ಪ್ರಸಾದ್
  • ಯುವಕ ಮಂಡಲದಿಂದ ಉತ್ತಮ ಕಾರ್ಯಕ್ರಮಗಳು ಮೂಡಿಬಂದಿದೆ- ಜಗನ್ನಾಥ ರೈ ನುಳಿಯಾಲು
  • ಸಾಧನೆ ದೇಶದ ಅಭಿವೃದ್ದಿಗೆ ಪೂರಕ- ಮೋಹನ ಗೌಡ ಇಡ್ಯಡ್ಕ
  • ಕಾಣಿಯೂರಿನಲ್ಲಿ ಸಾಂಸ್ಕೃತಿಕ ಹಬ್ಬದ ವಾತಾವರಣ ಸೃಷ್ಟಿ – ಪ್ರದೀಪ್ ಗೌಡ ಅರುವಗುತ್ತು

ಕಾಣಿಯೂರು: ಕಾರ್ಯಗಳು ಅನುಷ್ಠಾನವಾದಾಗ ವಿಶ್ವಾಸ ವೃದ್ಧಿಯಾಗುತ್ತದೆ. ಪರಸ್ಪರ ನಂಬಿಕೆ ಕಳೆದುಕೊಳ್ಳದೆ ಮುಂದುವರಿದಾಗ ಯಶಸ್ಸು ದೊರೆಯುತ್ತದೆ. ನಮ್ಮ ಪೂರ್ವಜರು ಮಾಡಿದ ಪುಣ್ಯದ ಫಲವನ್ನು ಇವತ್ತು ಅನುಭವಿಸುತ್ತಿದ್ದೇವೆ. ಆದರೆ ನಾವು ಮುಂದಿನ ಪೀಳಿಗೆಗೆ ಪುಣ್ಯವನ್ನು ಸಂಪಾದಿಸಬೇಕು ಅದಕ್ಕಾಗಿ ಧರ್ಮದ ಕಾರ್ಯವನ್ನು ಹೆಚ್ಚು ಹೆಚ್ಚಾಗಿ ಮಾಡಬೇಕು ಎಂದು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ ಹೇಳಿದರು.

ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ 25ನೇ ವರ್ಷಾಚರಣೆಯ ಪ್ರಯುಕ್ತ ದ 12ರಂದು ಕಾಣಿಯೂರಿನ ಜಾತ್ರಾಗದ್ದೆಯಲ್ಲಿ ನಡೆದ ರಜತ ಸಂಭ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆಶಯ ಭಾಷಣ ಮಾಡಿದ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್, ವಸುದೈವ ಕುಟುಂಬ ಎಂಬ ಮಹಾನ್ ಕಲ್ಪನೆಯ ತಳಹದಿಯ ಮೇಲೆ ವಿಕಾಸಗೊಂಡಿರುವ ನಮ್ಮ ಸಮಾಜದಲ್ಲಿ ಅವಿಭಕ್ತ ಕುಟುಂಬ ಪದ್ಧತಿ ಕಾಣೆಯಾಗುತ್ತಿರುವುದು ಬೇಸರದ ಸಂಗತಿ. ಕೌಟುಂಬಿಕ ಚೌಕಟ್ಟನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಸಂತೋಷ ಎನ್ನುವುದು ಒಂದು ಮಾನಸಿಕ ಸ್ಥಿತಿ. ಐಶ್ವರ್ಯ, ಆಸ್ತಿ, ಅಂತಸ್ತುಗಳಿರುವ ಜೀವನದಲ್ಲಿ ಮಾನಸಿಕ ನೆಮ್ಮದಿ ಅಸಾಧ್ಯ. ಸಮಾಜಮುಖಿ ಸಂಘಟನೆಗಳಲ್ಲಿ ಭಾಗಿಯಾಗುವುದರಿಂದ ಹೊಸ ಬದುಕನ್ನು ಕಂಡುಕೊಳ್ಳಲು ಸಾಧ್ಯ ಎಂದರು.

ಸ್ಮರಣಿಕೆ ಸಂಚಿಕೆ ಅನಾವರಣಗೊಳಿಸಿ ಮಾತನಾಡಿದ ನಿವೃತ್ತ ಡಿವೈಎಸ್‌ಪಿ ಜಗನ್ನಾಥ ರೈ ನುಳಿಯಾಲು, ಸಂಘಟನೆ ಕಟ್ಟುವುದು ಮುಖ್ಯವಲ್ಲ ಸಂಘಟನೆಯಿಂದ ಸಮಾಜಕ್ಕೆ ಏನು ಕೆಲಸ ಮಾಡಿದ್ದೇವೆ ಎಂಬುದು ಪ್ರಮುಖ ಪಾತ್ರವಹಿಸುತ್ತದೆ. ಈ ನಿಟ್ಟಿನಲ್ಲಿ ಲಕ್ಷ್ಮೀನರಸಿಂಹ ಯುವಕ ಮಂಡಲದಿಂದ ಉತ್ತಮ ಕಾರ್ಯಕ್ರಮಗಳು ಮೂಡಿಬಂದಿದೆ ಎಂದರು. ಸಾಧಕರನ್ನು ಸನ್ಮಾನಿಸಿ ಮಾತನಾಡಿದ ನ್ಯಾಯವಾದಿ ಮೋಹನ ಗೌಡ ಇಡ್ಯಡ್ಕರವರು, ಸಾಧನೆ ಹಲವು ಮೆಟ್ಟಿಲುಗಳನ್ನು ದಾಟಿ ಬರುವಂತದ್ದು. ಈ ಸಾಧನೆ ದೇಶದ ಅಭಿವೃದ್ದಿಗೆ ಪೂರಕವಾಗುತ್ತದೆ. ತಾಯಿಯ ಮಡಿಲು ಮತ್ತು ತಂದೆ ಹೆಗಲು ಈ ಎರಡನ್ನು ನೆನಪಿಟ್ಟು ಜೀವನ ಮಾಡಿದಾಗ ಮುಂದಿನ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ. ಲಕ್ಷ್ಮೀನರಸಿಂಹ ಯುವಕ ಮಂಡಲ ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಸಮಾಜದಲ್ಲಿ ಗುರುತಿಸಿಕೊಂಡಿದೆ ಎಂದರು.

ಮೈಸೂರು ಗೋಲ್ದನ್ ಸ್ಯಾಕ್ಸ್ ಉಪಾಧ್ಯಕ್ಷ ಪ್ರದೀಪ್. ಆರ್ ಗೌಡ ಅರುವಗುತ್ತು ಮಾತನಾಡಿ, ಯುವಕ ಮಂಡಲದ ರಜತ ಸಂಭ್ರಮದ ಪ್ರಯುಕ್ತ ಪೂರಕವಾಗಿ ಆಧ್ಯಾತ್ಮಿಕ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಒಳಗೊಂಡ ಕಾರ್ಯಕ್ರಮವು ಕಾಣಿಯೂರಿನಲ್ಲಿ ಸಾಂಸ್ಕೃತಿಕ ಹಬ್ಬದ ವಾತವರಣ ಸೃಷ್ಟಿ ಮಾಡಿದೆ ಎಂದರು.

ಕಾಣಿಯೂರು ಗ್ರಾ.ಪಂ. ಅಧ್ಯಕ್ಷೆ ಲಲಿತಾ ದರ್ಬಾಸು, ಎಸ್‌ಕೆಡಿಆರ್‌ಡಿಪಿ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು, ಕಾಣಿಯೂರು ಗ್ರಾ.ಪಂ, ಉಪಾಧ್ಯಕ್ಷ ಗಣೇಶ್ ಉದನಡ್ಕ, ಯುವಜನ ಒಕ್ಕೂಟ ಜಿಲ್ಲಾಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಗೌರವಾಧ್ಯಕ್ಷ ಚಿದಾನಂದ ಉಪಾಧ್ಯಾಯ ಕಲ್ಪಡ, ಕಡಬ ತಾಲೂಕು ಯುವಜನ ಒಕ್ಕೂಟ ಅಧ್ಯಕ್ಷ ಶಿವಪ್ರಸಾದ್ ಮೈಲೇರಿ, ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ರಾಧಾಕೃಷ್ಣ ಪೆರ್ಲೋಡಿ, ಯುವಕ ಮಂಡಲದ ಗೌರವಾಧ್ಯಕ್ಷ ಕೃಷ್ಣಪ್ರಸಾದ್ ಭಟ್ ಕಟ್ಟತ್ತಾರು, ಕಾರ್ಯದರ್ಶಿ ವಿನಯ ಎಳುವೆ, ಕೋಶಾಧಿಕಾರಿ ರಾಜೇಶ್ ಮೀಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವಕ ಮಂಡಲದ ಪದಾಧಿಕಾರಿಗಳಾದ ಪದ್ಮಯ್ಯ ಗೌಡ ಅನಿಲ, ಪುನೀತ್ ಕಲ್ಪಡ, ವಸಂತ ಪೆರ್ಲೋಡಿ, ಕೀರ್ತಿಕುಮಾರ್ ಎಳುವೆ, ಲಕ್ಷ್ಮಣ ಗೌಡ ಮುಗರಂಜ, ಮಮತಾಲೋಕೇಶ್ ಅಗಳಿ, ಜಯಂತ ಅಬೀರ, ಸಂತೋಷ್ ಮುಗರಂಜ, ಜಗದೀಶ್ ಪೆರ್ಲೋಡಿ, ಅನೀಶ್ ಕಾಣಿಯೂರು, ಮೋಹನ್ ಪೆರ್ಲೋಡಿ, ರಾಜೇಶ್ ಮೀಜೆ ಅತಿಥಿಗಳನ್ನು ಗೌರವಿಸಿದರು. ರಾಶಿ ಬರೆಪ್ಪಾಡಿ ಪ್ರಾರ್ಥಿಸಿದರು. ಯುವಕ ಮಂಡಲದ ಅಧ್ಯಕ್ಷ ಸುರೇಶ್ ಓಡಬಾಯಿ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಪರಮೆಶ್ವರ ಅನಿಲ ವಂದಿಸಿದರು. ಗಣೇಶ್ ನಡುವಾಲ್ ಕಾರ್ಯಕ್ರಮ ನಿರೂಪಿಸಿದರು.

ಸಾಧಕರಿಗೆ ಸನ್ಮಾನ, ಅಭಿನಂದನೆ: ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದ ಸಾಧಕ ಜಯಸೂರ್ಯ ರೈ ಮಾದೋಡಿ, ಪ್ರಸೂತಿ ತಜ್ಞೆ ಡಾ.ಚಂದ್ರಿಕಾ ಶಶಿಧರ್ ಪೆರುವಾಜೆ, ಯೋಗ ಗುರು ಕರುಣಾಕರ ಉಪಾಧ್ಯಾಯ, ನಾಟಿ ವೈದ್ಯೆ ಪೂವಕ್ಕ ಎಲುವೆ, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಗಿರಿಶಂಕರ ಸುಲಾಯ, ರಕ್ತದಾನಿ ರಾಕೇಶ್ ರೈ ಕೆಡೆಂಜಿ, ಶಿಕ್ಷಕ ವೃತ್ತಿಯಲ್ಲಿ ನಾರಾಯಣ ಭಟ್ ಕಾಣಿಯೂರು, ಯುವಜನ ಸಂಘಟಕ ಸುರೇಶ್ ರೈ ಸೂಡಿಮುಳ್ಳು, ನಾಟಿವೈದ್ಯ ದಿನೇಶ್ ಮಾಳ, ಯುವ ಉದ್ಯಮಿ ಚಂದ್ರಶೇಖರ ಗೌಡ ಕೋಳಿಗದ್ದೆ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದ ಸಾಧಕ ಪ್ರದೀಪ್ ಬೊಬ್ಬೆಕೇರಿ, ಕೃಷಿಕ ಕುಶಾಲಪ್ಪ ಗೌಡ ತೋಟ, ಕ್ರೀಡಾಸಾಧಕ ಸುಬ್ರಹ್ಮಣ್ಯ ಕೆ.ಎಂ., ನಿವೃತ್ತ ಯೋಧರಾದ ಪುರಂದರ ಗಾಳಿಬೆಟ್ಟು, ರಾಮಕೃಷ ಮರಕ್ಕಡ, ಸಾಮಾಜಿಕ ಸೇವೆಗೆ ಯುವತೇಜಸ್ಸು ಟ್ರಸ್ಟ್‌ಗೆ ಸಂಘ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದೈವನರ್ತಕ ಸುಂದರ ಅಜಿರಂಗಳ, ಅಂಚೆ ಪೇದೆ ಉಮೇಶ್ ಬಂಡಾಜೆ, ಯುವ ಯಕ್ಷಗಾನ ಕಲಾವಿದರಾದ ದಿವಾಕರ ಮಾದೋಡಿ, ಚರಣ್ ಕಟ್ಟತ್ತಾರು, ರಾಷ್ಟ್ರೀಯ ಯೋಗಪಟು ಕು.ಪ್ರಣಮ್ಯ ಅಗಳಿ, ಜಾವೆಲಿನ್ ಎಸೆತದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಅಹಿಜಿತ್ ಕಟ್ಟತ್ತಾರು ಹಾಗೂ ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ಅಧ್ಯಕ್ಷರಾಗಿ ಸೇವೆಸಲ್ಲಿಸಿದ ರಾಧಾಕೃಷ್ಣ ಪೆರ್ಲೋಡಿ, ದಯಾನಂದ ಗೌಡ ಕಟ್ಟತ್ತಾರು, ಲಕ್ಷ್ಮಣ ಗೌಡ ಮುಗರಂಜ, ಮಾಧವ ಗೌಡ ಕಟ್ಟತ್ತಾರು, ವಿಶ್ವನಾಥ ಓಡಬಾಯಿ, ತಿಮ್ಮಪ್ಪ ಗೌಡ ಕಲ್ಪಡ, ಪರಮೇಶ್ವರ ಅನಿಲ, ಗಣೇಶ್ ಪೆರ್ಲೋಡಿ, ರಚನ್ ಬರಮೇಲು, ದಿನೇಶ್ ಮುಗರಂಜ,ಪುನೀತ್ ಕಲ್ಪಡ, ಕಾರ್ಯದರ್ಶಿಯಾಗಿ ಸೇವೆಸಲ್ಲಿಸಿದ ಕರುಣಾಕರ ಬಂಡಾಜೆ, ಜಗದೀಶ್ ಪೆರ್ಲೊಡಿ, ಶೇಖರ ಮಿತ್ತಟ್ಟ, ವಸಂತ ಪೆರ್ಲೋಡಿ, ಬಾಬು ಮಾದೋಡಿ, ರಾಘವೇಂದ್ರ ಗುಂಡಿಗದ್ದೆ, ರಕ್ಷಿತ್ ಮುಗರಂಜ, ಕೀರ್ತಿಕುಮಾರ್ ಎಲುವೆ ಹಾಗೂ ಪ್ರಸ್ತುತ ಅಧ್ಯಕ್ಷರಾದ ಸುರೇಶ್ ಓಡಬಾಯಿ, ಕಾರ್ಯದರ್ಶಿ ವಿನಯ ಎಲುವೆ ಹಾಗೂ ಗೌರವಾಧ್ಯಕ್ಷ ಕೃಷ್ಣಪ್ರಸಾದ್ ಭಟ್ ಕಟ್ಟತ್ತಾರು ಅವರನ್ನು ಅಭಿನಂದಿಸಲಾಯಿತು. ಪತ್ರಕರ್ತರಾದ ರಾಮಚಂದ್ರ ಬರೆಪ್ಪಾಡಿ, ಸುಧಾಕರ ಆಚಾರ್ಯ ಕಾಣಿಯೂರು, ಕಾಣಿಯೂರು ಸಾಂಸ್ಕೃತಿಕ ಕಲಾ ಕೇಂದ್ರದ ಸಂಚಾಲಕ ಸದಾನಂದ ಆಚಾರ್ಯ ಕಾಣಿಯೂರು ಅವರನ್ನು ಗುರುತಿಸಲಾಯಿತು.

ಸನ್ಮಾನ ಸ್ವೀಕರಿಸಿದ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ, ರಾಕೇಶ್ ರೈ ಕೆಡೆಂಜಿ ಶುಭಹಾರೈಸಿದರು.

ಸಾಂಸ್ಕೃತಿಕ ಕಾರ್ಯಕ್ರಮ: ಕಾಣಿಯೂರು ಪೇಟೆಯಲ್ಲಿ ಚಾರ್ವಾಕ ಶ್ರೀ ಕಪಿಲೇಶ್ವರ ಸಿಂಗಾರಿ ಮೇಳದವರಿಂದ ಆಕರ್ಷಕ ಸಿಂಗಾರಿ ಮೇಳ, ಚೆಂಡೆ ನಾದದೊಂದಿಗೆ ಸದಾನಂದ ಆಚಾರ್ಯ ಕಾಣಿಯೂರು ಸಂಯೋಜಕತ್ವದಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಕುಣಿತ ಭಜನಾ ಮರವಣಿಗೆ ನಡೆಯಿತು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆದು, ಬಳಿಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಗುರುಪ್ರಿಯಾ ನಾಯಕ್ ನಿರ್ದೇಶನದ ಪ್ರಖ್ಯಾತಿ ಯುವತಿ ಮಂಡಲ ಮತ್ತು ಗುರುಕುಲ ಕಲಾಕೇಂದ್ರ ಪುರುಷರಕಟ್ಟೆ ಪುತ್ತೂರು ತಂಡದಿಂದ ಡ್ಯಾನ್ಸ್ ಧಮಾಕ- ಸಾಂಸ್ಕೃತಿಕ ನೃತ್ಯ ವೈವಿಧ್ಯ ನಡೆಯಿತು. ಬಳಿಕ ಖ್ಯಾತ ಯಕ್ಷಗಾನ ಕಲಾವಿದರಿಂದ ಯಕ್ಷಹಾಸ್ಯ ವೈಭವ ರಾತ್ರಿ ದೇವದಾಸ್ ಕಾಪಿಕಾಡ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಅಭಿನಯದಲ್ಲಿ ಚಾಪರ‍್ಕ ಕಲಾವಿದರಿಂದ “ನಾಯಿದ ಬೀಲ” ನಾಟಕ ಪ್ರದರ್ಶನಗೊಂಡಿತು.

LEAVE A REPLY

Please enter your comment!
Please enter your name here