ಕೋಡಿಂಬಾಡಿ: ದಾರಂದಕುಕ್ಕು ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ

0

ಪುತ್ತೂರು: ಕೋಡಿಂಬಾಡಿ ಗ್ರಾಮದ ದಾರಂದಕುಕ್ಕು ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ ಕಾರ್ಯಕ್ರಮ ದ.13ರಂದು ನಡೆಯಿತು. ಬಾಲಮೇಳದ ಅಂಗವಾಗಿ ಪುಟಾಣಿಗಳಿಂದ ಮತ್ತು ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸದಸ್ಯರಿಂದ ವಿವಿಧ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಪುಟಾಣಿಗಳು ಉದ್ಘಾಟಿಸಿದರು. ಬಾಲವಿಕಾಸ ಸಮಿತಿ ಅಧ್ಯಕ್ಷೆ ಧನ್ಯ ಅಧ್ಯಕ್ಷತೆ ವಹಿಸಿದ್ದರು. ಸ್ವಚ್ಛತಾ ರಾಯಭಾರಿ ಸೀನ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಲಯ ಮೇಲ್ವಿಚಾರಕಿ ಹರಿಣಾಕ್ಷಿ, ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ರಾಮಚಂದ್ರ ಪೂಜಾರಿ ಶಾಂತಿನಗರ, ಉಪಾಧ್ಯಕ್ಷೆ ಉಷಾ ಲಕ್ಷ್ಮಣ ಪೂಜಾರಿ ಕೋರ್ಯ, ಸದಸ್ಯರಾದ ರಾಮಣ್ಣ ಗೌಡ ಗುಂಡೋಲೆ, ಮಲ್ಲಿಕಾ ಅಶೋಕ್ ಪೂಜಾರಿ ಕಾಂತಳಿಕೆ, ಪುತ್ತೂರು ಮಹಿಳಾ ಠಾಣಾ ಸಿಬ್ಬಂದಿಗಳಾದ ರಾಮಪ್ಪ ಮತ್ತು ದಿನೇಶ್, ಅನಿಲಕೋಡಿ ಎಂಟ‌ರ್‌ಪ್ರೈಸಸ್ ಮಾಲಕ ಬಶೀರ್ ಹಾಜಿ, ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸುಂದರಿ ಸಂಜೀವ ಕುಲಾಲ್, ಅನಿತಾ ಶಿವಪ್ಪ ಪೂಜಾರಿ ಮತ್ತು ಶಶಿಕಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗ್ರಾಮ ಪಂಚಾಯತ್ ಸದಸ್ಯರಾದ ಬಾಲವಿಕಾಸ ಸಮಿತಿಯ ಸದಸ್ಯ ಜಯಪ್ರಕಾಶ್ ಬದಿನಾರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತಾಡಿದರು. ಅಂಗನವಾಡಿ ಕಾರ್ಯಕರ್ತೆ ವೇದಾವತಿ ಎನ್. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸಹಾಯಕಿ ವೀಣಾ ವಂದಿಸಿದರು.

ಕಾರ್ಯಕ್ರಮಕ್ಕೆ ಸಹಕಾರ ನೀಡಿದವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಧನ್ಯ ದಂಪತಿ, ಸಂತೋಷ್ ಕುಮಾರ್, ಹಕಿಂ, ಸುಂದರ, ಗಿರೀಶ್ ಕುಲಾಲ್, ಸೇಡಿಯಾಪು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಚಂದ್ರಶೇಖರ್ ಕುಲಾಲ್, ಕಾರ್ಯದರ್ಶಿ ಸತೀಶ್ ಮಡಿವಾಳ ಮತ್ತು ಸ್ತ್ರೀ ಶಕ್ತಿ ಗೊಂಚಲಿನ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ನಂತರ ಬಾಲಮೇಳಕ್ಕೆ ಸಂಬಂಧಪಟ್ಟಂತೆ ವಿವಿಧ ಆಟೋಟ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ದೊಡ್ಡ ಗಾತ್ರದ ಕೇಕ್ ಕಟ್ ಮಾಡುವ ಮೂಲಕ ಮಕ್ಕಳು ಬಾಲಮೇಳಕ್ಕೆ ಶುಭ ಕೋರಿದರು. ಅಂಗನವಾಡಿಯನ್ನು ತುಳುನಾಡಿನ ಸಂಸ್ಕೃತಿಯ ರೀತಿಯಲ್ಲಿ ಅಲಂಕರಿಸಲಾಗಿತ್ತು.

LEAVE A REPLY

Please enter your comment!
Please enter your name here