ಬೆಟ್ಟಂಪಾಡಿ: ಬೆಟ್ಟಂಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶಾಸಕರ ವಿಶೇಷ ಅನುದಾನ ಯೋಜನೆಯಡಿಯಲ್ಲಿ ಮಂಜೂರಾದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಪಂಚಾಯತ್ ಸಂಜೀವಿನಿ ಒಕ್ಕೂಟ ಕಟ್ಟಡ, ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡದ ಶಂಕುಸ್ಥಾಪನೆಯನ್ನು ಶಾಸಕ ಸಂಜೀವ ಮಠಂದೂರುರವರು ದ. 16 ರಂದು ನೆರವೇರಿಸಲಿದ್ದಾರೆ.
ಬೆಳಿಗ್ಗೆ ಪುಳಿತ್ತಡಿ ರಸ್ತೆ, ಬೆಂದ್ರ್ ತೀರ್ಥ ರಸ್ತೆ , ಕದಿಕೆ ಚಾವಡಿ ಅನ್ನಛತ್ರ, ಗೋಳಿಪದವು ಅಂಬೇಡ್ಕರ್ ಭವನ, ತಲಪ್ಪಾಡಿ ಗುತ್ತು ರಸ್ತೆ, ಬೀಡು ಗೋಳಿಪದವು ರಸ್ತೆ, ಬಿಲ್ವಗಿರಿ – ದೇವಮಣಿ – ಕೋನಡ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನಡೆಯಲಿದೆ. ಮಧ್ಯಾಹ್ನ ಪಂಚಾಯತ್ ಬಳಿ ನಿರ್ಮಿಸಲಾಗುವ ಪಂಚಾಯತ್ ಸಂಜೀವಿನಿ ಒಕ್ಕೂಟದ ನೂತನ ಕಟ್ಟಡ, ರಾಜೀವ್ ಗಾಂಧಿ ಸೇವಾ ಕೇಂದ್ರದ ಕಟ್ಟಡಕ್ಕೆ ಶಂಕು ಸ್ಥಾಪನೆ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಪ.ಜಾತಿ ಮತ್ತು ಪ.ಪಂಗಡದ ಫಲಾನುಭವಿಗಳಿಗೆ ಸಹಾಯಧನ ಹಾಗೂ ವಿಕಲಚೇತನ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಲಿದ್ದಾರೆ.