ಎಳೆ ವಿದ್ಯಾರ್ಥಿಗಳ ಭವಿಷ್ಯ ಕಾಪಾಡಲು ಮನವಿ

0

ಉಪ್ಪಿನಂಗಡಿ: ಎಳೆ ವಯಸ್ಸಿನ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗುವ ನೆಪದಲ್ಲಿ ಉಪ್ಪಿನಂಗಡಿಯ ಆಯ್ದ ಅಡ್ಡೆಗಳಲ್ಲಿ ಧೂಮಪಾನದಂತಹ ಚಟಗಳಿಗೆ ಬಲಿಯಾಗುತ್ತಿದ್ದು, ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಇದರತ್ತ ಗಮನ ಹರಿಸಿ ಮಕ್ಕಳ ರಕ್ಷಣೆಗೆ ಗಮನ ಹರಿಸಬೇಕೆಂದು ಉಪ್ಪಿನಂಗಡಿಯ ವರ್ತಕ ಸಂಘವು ಉಭಯ ಇಲಾಖೆಗಳನ್ನು ಆಗ್ರಹಿಸಿದೆ.

ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರನ್ನು ಉಪ್ಪಿನಂಗಡಿಯಲ್ಲಿ ಭೇಟಿ ಮಾಡಿದ ಛೇಂಬರ್ ಆಫ್ ಕಾಮರ್ಸ್‌ನ ನಿಯೋಗವು ಇಲ್ಲಿನ ವಾಣಿಜ್ಯ ಸಂಕೀರ್ಣವೊಂದರಲ್ಲಿ ಜಮಾಯಿಸುವ ವಿದ್ಯಾರ್ಥಿಗಳು ಅತಿ ಎನಿಸುವಷ್ಟು ಧೂಮಪಾನ ಮಾಡಿ ನಶೆಯಲ್ಲಿರುವುದು ಕಂಡು ಬರುತ್ತಿದೆ. ಯಾವುದೋ ಮಾದಕ ವಸ್ತುಗಳನ್ನು ಸಿಗರೇಟಿನೊಂದಿಗೆ ಬೆರೆಸಿ ಬಳಸುವ ಸಾಧ್ಯತೆ ಇದ್ದು, ಇದು ಮಕ್ಕಳ ಭವಿಷ್ಯವನ್ನು ಹಾಳುಗೆಡವಲಿದೆ. ಈ ಕಾರಣಕ್ಕಾಗಿ ಯಾವ ಮಾರ್ಗೋಪಾಯವನ್ನಾದರೂ ಬಳಸಿ ವಿದ್ಯಾರ್ಥಿಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕೆಂದು ಸಲ್ಲಿಸಲಾದ ಲಿಖಿತ ಮನವಿಯಲ್ಲಿ ಆಗ್ರಹಿಸಿದ್ದಾರೆ.‌

ಇದೇ ವೇಳೆ ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು, ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪೆರ್ನೆಯ ಪದವಿ ಪೂರ್ವ ಕಾಲೇಜಿಗೂ ಮನವಿ ಸಲ್ಲಿಸಲಾಯಿತು. ಮನವಿ ಸಲ್ಲಿಸಿದ ನಿಯೋಗದಲ್ಲಿ ಛೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಪ್ರಶಾಂತ್ ಡಿಕೋಸ್ಟಾ, ಪದಾಧಿಕಾರಿಗಳಾದ ಅಬ್ದುರ್ರಹ್ಮಾನ್ ಯುನಿಕ್, ಶಬೀರ್ ಕೆಂಪಿ, ಕೈಲಾರ್ ರಾಜಗೋಪಾಲ ಭಟ್, ಯು.ಟಿ. ತೌಸೀ- ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here