100 ವರ್ಷಗಳ ಬಳಿಕ ಆಲಡ್ಕ ಶ್ರೀ ಸದಾಶಿವ ದೇವರ ಜಾತ್ರೋತ್ಸವ ಸಂಭ್ರಮ- ಪೂರ್ವಭಾವಿ ಸಭೆ

0

ಪುತ್ತೂರು; ಹತ್ತು ಹಲವು ಕಾರಣೀಕತೆಗಳನ್ನು ಒಳಗೊಂಡ ಮುಂಡೂರು ಗ್ರಾಮದ ಆಲಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ಕಳೆದ ವರ್ಷ ಬ್ರಹ್ಮಕಲಶೋತ್ಸವಗೊಂಡು ಇದೀಗ 100 ವರ್ಷಗಳ ಬಳಿಕ ಶ್ರೀ ಸದಾಶಿವ ದೇವರಿಗೆ ಜಾತ್ರೋತ್ಸವ ಸಂಭ್ರಮ ಜರಗಲಿದೆ.

ಈ ಬಗ್ಗೆ ಪೂರ್ವ ಭಾವಿ ಸಭೆಯು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಅರುಣ್‌ ಕುಮಾರ್ ಆಳ್ವ ಬೋಳೋಡಿ ಅಧ್ಯಕ್ಷತೆಯಲ್ಲಿ ಶ್ರೀ ದೇವಳದ ವಠಾರದಲ್ಲಿ  ನಡೆಯಿತು.


ಮುಂಡೂರು ಮತ್ತು ಕೆದಂಬಾಡಿ ಗ್ರಾಮಗಳಿಗೆ ಸಂಬಂಧಪಟ್ಟ ಗ್ರಾಮ ದೇವಸ್ಥಾನ ಇದಾಗಿದ್ದು ಶ್ರೀ ಕ್ಷೇತ್ರವು ಸಂಪೂರ್ಣ ಜೀರ್ಣೋದ್ದಾರಗೊಂಡು 2022 ಜನವರಿ 22 ರಂದು ಬ್ರಹ್ಮಕಲಶೋತ್ಸವ ನಡೆದಿತ್ತು.

ಶ್ರೀ ಕ್ಷೇತ್ರದಲ್ಲಿರುವ ಸದಾಶಿವ ದೇವರು ವಿಶೇಷ ಕಾರಣಿಕತೆಯನ್ನು ಹೊಂದಿದ್ದು ಭಕ್ತಿಯಿಂದ ಕೈ ಮುಗಿದು ಬೇಡಿದರೆ ಭಕ್ತರ ಇಷ್ಠಾರ್ಥಗಳನ್ನು ಈಡೇರಿಸುವ ಶಕ್ತಿಯನ್ನು ಶ್ರೀ ದೇವರು ಹೊಂದಿದ್ದಾರೆ. ಶ್ರೀ ದೇಗುಲದಲ್ಲಿ ಜಾತ್ರೋತ್ಸವ ನಡೆದ ಬಗ್ಗೆ ಪುರಾವೆಗಳಿಲ್ಲದೇ ಇದ್ದರೂ ಸುಮಾರು 100 ವರ್ಷಗಳ ಹಿಂದೆ ವೈಭವದ ಜಾತ್ರೋತ್ಸವ ನಡೆಯುತ್ತಿತ್ತು ಎಂಬುದು ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಿತ್ತು.

ಪ್ರಸ್ತುತ ದೇವಸ್ಥಾನ ಸಂಪೂರ್ಣ ಜೀರ್ಣೋದ್ದಾರಗೊಂಡು ಶ್ರೀದೇವರಿಗೆ ಜಾತ್ರೋತ್ಸವ 2023 ಮಾರ್ಚ್ ತಿಂಗಳಲ್ಲಿ ನಡೆಯಲಿದೆ. 100 ವರ್ಷಗಳ ಬಳಿಕ ನಡೆಯಲಿರುವ ಈ ಜಾತ್ರೋತ್ಸವ ಕಾರ್ಯಕ್ರಮಕ್ಕೆ ಇಡೀ ಗ್ರಾಮವೇ ಸಂಭ್ರಮದಲ್ಲಿದ್ದು ಇದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳು ಭರದಿಂದ ಸಾಗುತ್ತಿದೆ.

ಪೂರ್ವಭಾವಿ ಸಭೆಯಲ್ಲಿ ರಾಘವ ಗೌಡ ಕೆರೆಮೂಲೆ, ಜಯನಂದ ರೈ ಮಿತ್ರಂಪಾಡಿ, ದನಂಜಯಕುಲಾಲ್, ಉಮೇಶ್ ನಾಯ್ಕ ಬಳ್ಳಮಜಲು, ಮಹಾಬಲ ರೈ ಕುಕ್ಕುಂಜೋಡು, ಮೋಹನ್ ರೈ ಕೆದಂಬಾಡಿ ಗುತ್ತು, ಸುರೇಶ್ ಕಣ್ಣಾರಾಯ, ಭಾಸ್ಕರ ಬಲ್ಲಾಲ್ ಕೆದಂಬಾಡಿ ಬೀಡು, ಶೀನಪ್ಪ ರೈ ಕೊಡಂಕಿರಿ, ರತನ್ ರೈ ಕುಂಬ್ರ, ಅರ್ಚಕರಾದ ಸುಬ್ರಹ್ಮಣ್ಯ ಎನ್ ಕೆ, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಭಾಸ್ಕರ್ ರೈ ಗುತ್ತು, ಸದಾಶಿವ ರೈ ಪೊಟ್ಟಮೂಲೆ, ರುಕ್ಮ ನಾಯ್ಕ ಪೊಟ್ಟಮೂಲೆ, ಪದ್ಮಾವತಿ ಶೀನಪ್ಪ ರೈ ಕೊಡೆಂಕಿರಿ, ಜಯಲಕ್ಷ್ಮಿ ಬಾಳಯ, ಮುಂಡಾಲ ಗುತ್ತು ಸುರೇಶ್ ರೈ ಮಾಣಿಪ್ಪಾಡಿ, ರಾಕೇಶ್ ರೈ ಬೋಳೋಡಿ, ಪ್ರಸಾದ್ ರೈ ಕೊಡೆಂಕಿರಿ, ಪದ್ಮನಾಭ ಗೌಡ ಮುಂಡಾಲ, ಉಮೇಶ್ ನಾಯ್ಕ್ ಬೋಳೋಡಿ, ಲೋಕೇಶ್ ನಾಯ್ಕ್ ಬೋಳೋಡಿ, ಮಂಜುನಾಥ ಕೊಡೆಂಕಿರಿ, ಉಮೇಶ್ ರೈ ಮಿತ್ತೋಡಿ, ದೇವು ಕಡ್ಯ ಮತ್ತಿತರರು ಉಪಸ್ತಿತರಿದ್ದರು.

ಸಭೆಯಲ್ಲಿ  ಜಾತ್ರೋತ್ಸವ ಸಮಿತಿಯನ್ನು ರಚಿಸಲಾಯಿತು

LEAVE A REPLY

Please enter your comment!
Please enter your name here