ಡಿ.17: ಬೆಳ್ಳಿಪ್ಪಾಡಿ ಉರಮಾಲ್ ಮನೆ ದೈವಗಳ ನೇಮೋತ್ಸವ

0

ಪುತ್ತೂರು; ಬೆಳ್ಳಿಪ್ಪಾಡಿ ಉರಮಾಲ್ ಮನೆಯಲ್ಲಿ ದ.17 ರಂದು ರಾತ್ರಿ ದೈವಗಳ ನೇಮೋತ್ಸವ ನಡೆಯಲಿದೆ.


ಬೆಳಿಗ್ಗೆ 8 ರಿಂದ ಬೆಳ್ಳಿಪ್ಪಾಡಿ ಉರಮಾಲ್ ಕುಟುಂಬದ ಮನೆಯಲ್ಲಿ ಮಹಾಗಣಪತಿ ಹೋಮ, ಸತ್ಯನಾರಾಯಣ ಪೂಜೆ, ಧನ್ವಂತರಿ ಹೋಮ, ದೈವಗಳಿಗೆ ಸಾನಿಧ್ಯ ಕಳಸ, ತಂಬಿಲ ಸೇವೆ ನಡೆಯಲಿದೆ. ರಾತ್ರಿ 7ಗಂಟೆಗೆ ದೈವಗಳ ಭಂಡಾರ ತೆಗೆದು ದೈವಗಳ ನೇಮೋತ್ಸವ ಜರಗಲಿದೆ ಎಂದು ಕೆ.ಎನ್.ವಿಠಲ ಶೆಟ್ಟಿ, ಪ್ರಫುಲ್ಲ ಶೆಟ್ಟಿ, ಡಾ. ಸಾಯಿ ರಮೇಶ್ ಶೆಟ್ಟಿ, ಸಲೋನಿ ಶೆಟ್ಟಿ, ಬಿ. ಗುಣರಂಜನ್ ಶೆಟ್ಟಿ, ಸ್ವೀಟಿ ಶೆಟ್ಟಿ(ಅನುಷ್ಕಾ ಶೆಟ್ಟಿ) ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here