ರಾಷ್ಟ್ರ ಮಟ್ಟದ ಜೀವರಕ್ಷಕ ಕ್ರೀಡೆ ಲೈಫ್ ಸೇವಿಂಗ್ ಗೇಮ್ಸ್-2022‌ :ಅಕ್ವಾಟಿಕ್ ಕ್ಲಬ್ ಈಜುಗಾರರಿದ್ದ ಕರ್ನಾಟಕ ತಂಡಕ್ಕೆ 2ನೇ ರನ್ನರ್ ಅಪ್

0

ಪುತ್ತೂರು: ವಿದೇಶಗಳಲ್ಲಿ ಪ್ರಖ್ಯಾತಿ ಪಡೆದಿರುವ, ಭಾರತದಲ್ಲಿ ಪ್ರಪ್ರಥಮ ಬಾರಿ ಡಿ.8ರಿಂದ 11ರವರೆಗೆ ಭಾರತದ ರಾಷ್ಟ್ರೀಯ ಲೈಫ್ ಸೇವಿಂಗ್ ಸೊಸೈಟಿ ವತಿಯಿಂದ ಪುಣೆಯ ಶಿವ ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಬಾಲೆವಾಡಿಯಲ್ಲಿ ನಡೆದ ‌ ಲೈಫ್ ಸೇವಿಂಗ್ ಗೇಮ್ಸ್- 2022 ಜಾನ್ ಲಾಂಗ್ ರೋಲಿಂಗ್ ಟ್ರೋಫಿಯಲ್ಲಿ ಪುತ್ತೂರು ಅಕ್ವಾಟಿಕ್ ಕ್ಲಬ್‌ನ 6 ಈಜುಗಾರರು ಮತ್ತು ಇಬ್ಬರು ಮಾಜಿ ಈಜುಪಟುಗಳನ್ನು ಒಳಗೊಂಡ ಕರ್ನಾಟಕ ತಂಡ 77 ಅಂಕಗಳೊಂದಿಗೆ 2ನೇ ರನ್ನರ್ಸ್ ಅಪ್ ಗೆದ್ದುಕೊಂಡಿತು.ಮಹಾರಾಷ್ಟ್ರ 136 ಅಂಕಗಳೊಂದಿಗೆ ಚಾಂಪಿಯನ್‌ಶಿಪ್ ಗೆದ್ದುಕೊಂಡಿತು.ಪಶ್ಚಿಮ ಬಂಗಾಳ 131 ಅಂಕಗಳೊಂದಿಗೆ ಮೊದಲ ರನ್ನರ್ಸ್ ಅಪ್ ಗೆದ್ದಿತು.
ಜೀವರಕ್ಷಕ ಆಟಗಳಿಗೆ ಪ್ರತ್ಯೇಕವಾಗಿರುವ ರಾಷ್ಟ್ರಮಟ್ಟದ ಕ್ರೀಡೆ ಇದಾಗಿದ್ದು, ಅಡ್ಯಾರ್‌ನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್‌ ನ ಪ್ರಥಮ ವರ್ಷದ ವಿದ್ಯಾರ್ಥಿ ಅಂಕಿತ್ ಗೌಡ ಎನ್ 4*50 ಮೀಟರ್‌ಗಳ ಒಬ್ಸ್ಟಾಕ್ಲ್ ರೇಸ್‌ನಲ್ಲಿ ಚಿನ್ನದ ಪದಕ ಹಾಗೂ 100 ಮೀಟರ್ಸ್ ಮ್ಯಾನಿಕಿನ್ ಟೋ ಮತ್ತು ಲೈನ್ ಥ್ರೋನಲ್ಲಿ 2 ಬೆಳ್ಳಿ ಪದಕ ಪಡೆದಿದ್ದಾರೆ.ಪುತ್ತೂರಿನ ಸುದಾನ ವಸತಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಅನಿಕೇತ್ ಗೌಡ ಎನ್ 100 ಮೀಟರ್ ಅಬ್ಸ್ಟಾಕ್ಲ್ ಈಜು, 100 ಮೀಟರ್ ಮ್ಯಾನಿಕಿನ್ ಕ್ಯಾರಿ ವಿತ್ ಫಿನ್ಸ್ 100 ಮೀಟರ್ ಮ್ಯಾನಿಕಿನ್ ಟೌ ವಿತ್ ಫಿನ್ಸ್ ನಲ್ಲಿ 3 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
ಮೂಡಬಿದ್ರಿಯ ಆಳ್ವಾಸ್ ಕಾಲೇಜ್ ಆಫ್ ಫಿಸಿಕಲ್ ಎಜುಕೇಶನ್‌ನ ಬಿಪಿಇಡಿ ವಿದ್ಯಾರ್ಥಿ ರಾ‌ಯ್ಸ್ಟನ್ ರೋಡ್ರಿಗಸ್ 4*50 ಮೀಟರ್‌ಗಳ ಅಬ್ಸ್ಟಾಕ್ಲ್ ರಿಲೇಯಲ್ಲಿ ಚಿನ್ನದ ಪದಕ ಮತ್ತು ಲೈನ್ ಥ್ರೋನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಪುತ್ತೂರಿನ ಸೇಂಟ್ ಫಿಲೋಮಿನಾ ಕಾಲೇಜಿನ ಬಿಕಾಂ ವಿದ್ಯಾರ್ಥಿ ತ್ರಿಶೂಲ್ ಗೌಡ ಅವರು ಲೈನ್ ಥ್ರೋ ಮತ್ತು 4*50 ಮೀಟರ್ ಅಬ್‌ಸ್ಟಾಕಲ್ ರಿಲೇಯಲ್ಲಿ 2 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ ಮತ್ತು 50 ಮತ್ತು 100 ಮೀಟರ್ ಮ್ಯಾನಿಕಿನ್ ಕ್ಯಾರಿಯಲ್ಲಿ 2 ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ.ಪುತ್ತೂರಿನ ಸೈಂಟ್ ಫಿಲೋಮಿನಾ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಶಿಶಿಲ್ ಲೈನ್ ಥ್ರೋನಲ್ಲಿ ಚಿನ್ನದ ಪದಕ ಮತ್ತು 50 ಮೀಟರ್ ಮ್ಯಾನಿಕಿನ್ ಕ್ಯಾರಿಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಸ್ವೀಕೃತ್ ಆನಂದ್ 100 ಮೀಟರ್ ಮ್ಯಾನಿಕಿನ್ ಕ್ಯಾರಿ ವಿತ್ ಫಿನ್ಸ್, 100 ಮೀಟರ್ ಮನಿಕಿನ್ ಟೌ ವಿತ್ ಫಿನ್ಸ್ 50 ಮೀಟರ್ ಮ್ಯಾನಿಕಿನ್ ಕ್ಯಾರಿಯಲ್ಲಿ 3 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಪಿಎಸಿ ತರಬೇತುದಾರ ರೋಹಿತ್ ಅವರು ತಂಡದ ತರಬೇತುದಾರರಾಗಿದ್ದರು.ಮಾತ್ರವಲ್ಲದೆ ಅವರು ತಂಡದ ಕರ್ನಾಟಕ ಮತ್ತು ಜೀವರಕ್ಷಕ ಕ್ರೀಡಾಕೂಟ 2022ರ ಸಂಚಾಲಕರೂ ಆಗಿದ್ದರು. ಪುತ್ತೂರು ಅಕ್ವಾಟಿಕ್ ಕ್ಲಬ್‌ನಲ್ಲಿ ಬಾಲವನದ ಡಾ|ಶಿವರಾಮ ಕಾರಂತ ಈಜುಕೊಳದಲ್ಲಿ ಈಜುಗಾರರಿಗೆ ನಿಯಮಿತ ಸ್ಪರ್ಧಾತ್ಮಕ ಈಜು ಜೀವ ರಕ್ಷಕ ಕೌಶಲ್ಯಗಳಿಗೂ ತರಬೇತಿ ನೀಡುತ್ತಾರೆ. ಮಂಗಳೂರಿನ ಸೈಂಟ್ ಅಲೋಶಿಯಸ್ ಈಜುಕೊಳ ಮತ್ತು ತಣ್ಣೀರುಬಾವಿಯ ಕಡಲತೀರದಲ್ಲಿ ತರಬೇತುದಾರರಾದ ಪಾರ್ಥ ವಾರಣಾಶಿ ಮತ್ತು ರೋಹಿತ್ ಅವರ ನೇತೃತ್ವದಲ್ಲಿ ತರಬೇತಿ ನೀಡಲಾಗುತ್ತಿದೆ.

LEAVE A REPLY

Please enter your comment!
Please enter your name here