ಸುಳ್ಯ ಕೃಷಿ ಮೇಳದ ಉದ್ಘಾಟನೆ : ಕೃಷಿ ಜಾತ್ರೆಗೆ ಅಧಿಕೃತ ಚಾಲನೆ

0

ಕೃಷಿಕರಿಗೆ ಸನ್ಮಾನ : ಹಸಿರು ವನ ಬೆಳೆಸಿದ ಶಾಲೆಗೆ ಗೌರವ

150 ಕ್ಕೂ ಅಧಿಕ ಕೃಷಿ ಸಂಬಂಧಿ ಸ್ಟಾಲ್‌ಗಳು : ವಿಚಾರ ಸಂಕಿರಣ : ಪಾರಂಪರಿಕ ಗ್ರಾಮ : ಪ್ರಾಚ್ಯವಸ್ತು ಸಂಗ್ರಹಾಲಯ : ತಾರಾಲಯ

ಸುಳ್ಯ: ಇಂದು ನಾವು ಆಧುನಿಕತೆಯ ಧಾವಂತಕ್ಕೆ ಸಿಲುಕಿ ಕೃಷಿಯಿಂದ ದೂರ ಉಳಿದಿರುವುದರಿಂದ ನೆಮ್ಮದಿಯ ಬದುಕು ಕಾಣುತ್ತಿಲ್ಲ.ಆದ್ದರಿಂದ ಕೃಷಿಯನ್ನೇ ಬದುಕಾಗಿಸೋಣ ಜತೆಗೆ ಸಾವಯವ ಕೃಷಿಗೆ ಆದ್ಯತೆ ನೀಡೋಣ ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.

ಡಿ.16ರಂದು ಸುಳ್ಯದ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ನಡೆಯುತ್ತಿರುವ ಪಯಸ್ವಿನಿ ಕೃಷಿ ಮೇಳವನ್ನು ದೀಪಪ್ರಜ್ವಲಿಸಿ ಉದ್ಘಾಟಿಸಿದ ಬಳಿಕ ಅವರು ಆಶೀರ್ವಚನಗೈದರು. ಸಮಾರಂಭದ ಅಧ್ಯಕ್ಷತೆಯನ್ನು ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ಮಾಪಕ, ಚಿತ್ರ ನಟ ಶಿವಧ್ವಜ್ ಶೆಟ್ಟಿ ಆಗಮಿಸಿದ್ದರು. ಪಾರಂಪರಿಕ ಗ್ರಾಮವನ್ನು ಮಂಗಳೂರು ವಿವಿ ಉಪಕುಲಪತಿ ಡಾ.ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಉದ್ಘಾಟಿಸಿದರು. ಪುಟ್ಟಣ್ಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್ ಮುಖ್ಯ ಅತಿಥಿಗಳಾಗಿದ್ದರು.

ಕೃಷಿ ಮೇಳದ ಪ್ರಧಾನ ಕಾರ್ಯದರ್ಶಿ ವೀರಪ್ಪ ಗೌಡ ಕಣ್ಕಲ್, ಕೋಶಾಧಿಕಾರಿ ಸಂತೋಷ್ ಜಾಕೆ ವೇದಿಕೆಯಲ್ಲಿ ಇದ್ದರು. ಪಾರಂಪರಿಕ ಗ್ರಾಮದ ಪ್ರಾಯೋಜಕತ್ವ ವಹಿಸಿದ್ದ ವಿವಿ ಉಪ ಕುಲಪತಿ ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯರನ್ನು ಗೌರವಿಸಲಾಯಿತು.

ಆಪ್ ಬಿಡುಗಡೆ :

ಸುಳ್ಯ ರೈತ ಉತ್ಪಾದಕ ಕಂಪೆನಿ ಅಮೆಝೋನ್ ಮೂಲಕ ಜೇನುಕೃಷಿ ಕೃಷಿ ಮಾರಾಟದ ಆಪ್ ಬಿಡುಗಡೆಯು ಇದೇ ಸಂದರ್ಭದಲ್ಲಿ ನಡೆಯಿತು. ರಾಜಶೇಖರಾನಂದ ಸ್ವಾಮೀಜಿಯವರು ಬಿಡುಗಡೆ ಮಾಡಿದರು. ಕೃಷಿ ಮೇಳಕ್ಕೆ ಪಯಸ್ವಿನಿ ಹೆಸರು ಸೂಚಿಸಿದ ಸಂತೋಷ್ ರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.

ಕೃಷಿ ಸಾಧಕರಿಗೆ ಸನ್ಮಾನ : ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಹರಿಯಪ್ಪ ಗೌಡ ಚೀಮುಳ್ಳು, ತಿರುಮಲೇಶ್ವರ ಭಟ್ ಕುರಿಯಾಜೆ, ಶ್ರೀಮತಿ ವಸಂತಿ ಜನಾರ್ದನ ನಡುಮುಟ್ಲುರನ್ನು ಸನ್ಮಾನಿಸಲಾಯಿತು. ಶಿಕ್ಷಕಿ ಶ್ರೀಮತಿ ಚಂದ್ರಮತಿ ಕಾರ್ಯಕ್ರಮ ನಿರ್ವಹಿಸಿದರು.

ಹಸಿರುವನ ಶಾಲೆ ಗೌರವ : ಶಾಲೆಯಲ್ಲಿ ಹಸಿರು ತೋಟ ನಿರ್ಮಿಸಿದ ಸುಳ್ಯದ ಸೈಂಟ್ ಬ್ರಿಜಿಡ್ಸ್ ವಿದ್ಯಾಸಂಸ್ಥೆ ಯನ್ನು ಸಮಾರಂಭದಲ್ಲಿ ರೂ.೫ ಸಾವಿರ ನಗದಿನೊಂದಿಗೆ ಗೌರವಿಸಲಾಯಿತು. ಶಿವಪ್ರಸಾದ್ ಆಲೆಟ್ಟಿ ಮತ್ತು ಬಳಗದವರು ರೈತ ಗೀತೆ ಹಾಡಿದರು. ಸ್ವಾಗತ ಸಮಿತಿ ಕೃಷಿ ಮೇಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಿ.ಆರ್. ಪ್ರಸಾದ್ ಪ್ರಾಸ್ತಾವಿಕ ಮಾತನಾಡಿದರು. ಡಾ.ಎನ್.ಎ.ಜ್ಞಾನೇಶ್ ಸ್ವಾಗತಿಸಿದರು. ಭವಾನಿಶಂಕರ್ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು.

ಪಯಸ್ವಿನಿ ಹಾಡು : ಪಯಸ್ವಿನಿ ಕೃಷಿ ಮೇಳದ ಕುರಿತು ಶ್ರೀಮತಿ ಸೌಮ್ಯ ಗುರು ಕಾರ್ಲೆಯವರು ರಚಿಸಿದ ಗೀತೆಯನ್ನು, ಗೋಪಾಲಕೃಷ್ಣ ಭಟ್ ವೇದಿಕೆಯಲ್ಲಿ ಹಾಡಿದರು.

ಸುಳ್ಯದ ಚೆನ್ನಕೇಶವ ದೇವಸ್ಥಾನ ವಠಾರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಪ್ರಣವ ಸೌಹಾರ್ದ ಸಹಕಾರಿ ಸಂಘ, ಸುಳ್ಯ ರೈತ ಉತ್ಪಾದಕರ ಕಂಪೆನಿ, ಮಂಗಳೂರು ವಿಶ್ವವಿದ್ಯಾನಿಲಯ, ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು, ಸಹಕಾರಿ ಯೂನಿಯನ್ ಸುಳ್ಯ, ಸುದ್ದಿ ಬಿಡುಗಡೆ – ಮಾಧ್ಯಮ ಸಹಯೋಗ ಇದರ ಜಂಟಿ ಆಶ್ರಯದಲ್ಲಿ ಹಾಗೂ ಸ್ಥಳೀಯ ತಾಲೂಕು ಆಡಳಿತ, ನಗರ ಪಂಚಾಯತ್ ಮತ್ತು ಕೃಷಿ ಸಂಬಂಧಿತ ಸರಕಾರಿ ಇಲಾಖೆಗಳ ಸಹಯೋಗದೊಂದಿಗೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಿಂದ ಮೂರು ದಿನಗಳ ಕಾಲ ಆಯೋಜನೆಗೊಂಡಿರುವ ಪಯಸ್ವಿನಿ ಕೃಷಿ ಮೇಳಕ್ಕೆ ಜಾತ್ರೆಯ ಮೆರುಗು ಬಂದಿದೆ.

ಸುಳ್ಯದ ಜೀವನದಿ ಪಯಸ್ವಿನಿಯ ಹೆಸರಿನಲ್ಲಿ ಕೃಷಿ ಮೇಳ ನಡೆಯುತ್ತಿದ್ದು, ಚೆನ್ನಕೇಶವ ದೇವಸ್ಥಾನದ ಮುಂಭಾಗದ ಮೈದಾನದಲ್ಲಿ ಕೃಷಿ ಮೇಳದ ಮುಖ್ಯ ವೇದಿಕೆಯನ್ನು ಮಾಡಲಾಗಿದ್ದು, ವೇದಿಕೆಗೆ ಆಧುನಿಕ ಸುಳ್ಯದ ನಿರ್ಮಾತೃ ಡಾ| ಕುರುಂಜಿ ವೆಂಕಟ್ರಮಣ ಗೌಡರ ಹೆಸರಿಡಲಾಗಿದೆ.
ಮುಖ್ಯ ಸಭಾಂಗಣದ ಪಕ್ಕದ ಮೈದಾನದಲ್ಲಿ ಕೃಷಿ ಸಂಬಂಧಿ ಸ್ಟಾಲ್‌ಗಳನ್ನು ಹಾಕಲಾಗಿದೆ. ಸುಳ್ಯದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಎದುರಿನ ರಸ್ತೆಯ ವರೆಗೂ ಸ್ಟಾಲ್‌ಗಳಿವೆ. ಒಟ್ಟು ೧೫೦ ಕ್ಕೂ ಹೆಚ್ಚು ಕೃಷಿ ಸಂಬಂಧಿ ಸ್ಟಾಲ್‌ಗಳಿದ್ದು ಕೃಷಿಕರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಜನರು ತಂಡೋಪ ತಂಡವಾಗಿ ಬರುತ್ತಿದ್ದು ಕೃಷಿ ಮೇಳಕ್ಕೆ ಜಾತ್ರೆಯ ಮೆರುಗು ಬಂದಿದೆ. ಚೆನ್ನಕೇಶವ ದೇವಸ್ಥಾನದ ಪಕ್ಕದಲ್ಲಿರುವ ಕೆ.ವಿ.ಜಿ. ಕಾನೂನು ಕಾಲೇಜಿನ ಸಮೀಪದ ವಿಸ್ತಾರವಾದ ಪ್ರಭು ಗ್ರೌಂಡ್ ಹಾಗೂ ಪಕ್ಕದ ಜಾಗದಲ್ಲಿ ಪಾರಂಪರಿಕ ಗ್ರಾಮ, ಕುಕ್ಕುಟೋದ್ಯಮ, ಪ್ರಾಚ್ಯವಸ್ತು ಸಂಗ್ರಹಾಲಯ, ತಾರಾಲಯವನ್ನು ಏರ್ಪಡಿಸಲಾಗಿದೆ. ಒಟ್ಟಾರೆಯಾಗಿ ಸುಳ್ಯದ ಕೃಷಿ ಮೇಳ ಜಾತ್ರೆಯಂತೆ ಎದ್ದು ಕಾಣುತ್ತಿದೆ.

ಕೃಷಿ ಮೇಳದಲ್ಲಿದ್ದ ಪ್ರಮುಖ ಸ್ಟಾಲ್‌ಗಳು

ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಔಷಧತಯಾರಿಕಾ ಘಟಕ ಹಾಗೂ ಸಂಶೋಧನಾ ಕೇಂದ್ರ
ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜು

ಮಾಂಡೋವಿ ಮೋಟಾರ್ಸ್
ಯುನೈಟೆಡ್ ಟೊಯೋಟಾ ನೆಕ್ಸಾ ಮಂಗಳೂರು
ಹೋಮ್ ಗ್ರೋನ್ ಬಯೋಟಿಕ್ ಕೇಂದ್ರ
ಜಾಕ್ ಅನಿಲ್‌ರವರ ನಿನ್ನಿಕಲ್ಲು ನರ್ಸರಿ
ಎಲ್ ಎನ್ ಟಿ ಲೇಡರ್ಸ್
ಕೃಷಿ ತರಕಾರಿ ಬೀಜಗಳ ಮಳಿಗೆಗಳು
ಅಮೃತ್ ಆರ್ಗಾನಿಕ್ ಫರ್ಟಿಲೈಸರ್
ಶಿವು ಸನಾತನ ಗೋಶಾಲಾ ಟ್ರಸ್ಟ್
ಮರಿಕೆ ನ್ಯಾಚುರಲ್ ಐಸ್‌ಕ್ರೀಮ್
ಅಕ್ಷ ಕಾಟ್ರೇಜ್ ಇಂಡಸ್ಟ್ರೀಸ್
ಸಸ್ಯ ಕ್ಲಿನಿಕ್
ಇಝಿ ಸ್ಕೇಲ್ ಪುತ್ತೂರು
ಎಸ್ ಆರ್ ಕೆ ಲೇಡರ್ಸ್
ಕೃಷಿ ಪಶು ಮಳಿಗೆ
ನೆಟ್ ಸರ್ಪ್ ಕಮ್ಯುನಿಕೇಶನ್ಸ್ ಪ್ರೈ.ಲಿ
ನೇತ್ರಾವತಿ ನರ್ಸರಿ
ವನಸಿರಿ ಫಾರ್ಮ್
ಮತ್ತು ಕನ್ನಿಕಾ ನರ್ಸರಿ
ಆತ್ಮಭವ ಆರ್ಗಾನಿಕ್ಸ್
ಸಿರಿ ಭೂಮಿ ಮಣ್ಣಿನ ಪಾತ್ರೆಗಳ ಮಳಿಗೆ
ನಿಧಿ ಲ್ಯಾಡರ್ಸ್
ವಾಟರ್ ವಿಂಗ್ ಟೆಕ್ನಾಲಜಿ ಕೃಷಿ ಉಪಕರಣ ಮಳಿಗೆ
ಬಯೋಗ್ಯಾಸ್ ಮಳಿಗೆ
ಮಿಲ್ಕ್ ಮಾಸ್ಟರ್
ಸತ್ವಂ ಸಾವಯವ ಆಹಾರ ಮಳಿಗೆ
ರೈತ,ಶ್ರಮಿಕ ಸಹಕಾರಿ ಸಂಘ
ಸುಳ್ಯ ರೈತ ಉತ್ಪಾದಕರ ಕಂಪೆನಿ
ಆರೋಗ್ಯ ಮಳಿಗೆಗಳು
ಜಿನಿ ಹೆಲ್ತ್ ಮಿಲಿಟ್
ಕರ್ನಾಟಕ ಬ್ಯಾಂಕ್
ಶಿವಶಕ್ತಿ ಹೋಂ ಅಪ್ಲೈಯನ್ಸಸ್ ಸರ್ವಿಸಸ್
ಮೇಲುಕೋಟೆ ಶೈಲಿಯ ಪುಳಿಯೋಗರೆ ಮಿಶ್ರಣ
ಕಾರ್ಬನ್ ಹೈಟೆಕ್ ದೋಟಿ
ನಿಧಿ ಫುಡ್ ಪ್ರಾಡಕ್ಟ್
ದುರ್ಗಾಪರಮೇಶ್ವರಿ ಮಹಿಳಾ ಸಂಘ
ಶಿವ ಸನಾತನ ಗೋಶಾಲ ಟ್ರಸ್ಟ್
ಸಾಯ ಎಂಟರ್ಪ್ರೈಸಸ್ ಪುತ್ತೂರು
ಮಂಗಳೂರಿನ ರುಚಿಕರವಾದ ಹಲಸಿನ ಹಣ್ಣಿನ ಹೋಳಿಗೆ ಮೂಡು ಶೆಡ್ಡೆ
ಕೇನನ್
ರೈತ ಶ್ರಮಿಕರ ಸಹಕಾರ ಸಂಘ ಸುಳ್ಯ
IRCMDಎಜುಕೇಶನಲ್ ಸೆಂಟರ್
ಜ್ಯೂಸ್ ಸೆಂಟರ್ ಗಳು
ಚಾರ್ಟ್ಸ್ ಅಂಗಡಿಗಳು, ಬಟ್ಟೆ ಅಂಗಡಿಗಳು ಇತ್ಯಾದಿ….
ಸುದ್ದಿ ಮಾಹಿತಿ ಸೇವಾ ಕೇಂದ್ರ
ಆರೋಗ್ಯ ಇಲಾಖೆ
ತೋಟಗಾರಿಕೆ ಇಲಾಖೆ
ಕೃಷಿ ಇಲಾಖೆ
ಮಕ್ಕಳ ಮತ್ತು ಮಹಿಳಾ ಇಲಾಖೆ
ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ
ಮೆಸ್ಕಾಂ
ಗ್ರಾಮಾಭಿವೃದ್ಧಿ ಮತ್ತು ಪಂಚಾಯತಿರಾಜ್
ಮೀನುಗಾರಿಕೆ

LEAVE A REPLY

Please enter your comment!
Please enter your name here