ದ.19:ಹಾರಾಡಿ ಸರಕಾರಿ ಮಾ.ಉ.ಹಿ.ಪ್ರಾ ಶಾಲೆಯಲ್ಲಿ ಹಾರಾಡಿ ಪ್ರತಿಭಾ ಲಾಲಿತ್ಯ

0

ಪುತ್ತೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಹಾಗೂ ಹಾರಾಡಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಚಿಗುರು ಪ್ರತಿಭೆಗಳ ಸಂಭ್ರಮದ ದಿನ `ಹಾರಾಡಿ ಪ್ರತಿಭಾ ಲಾಲಿತ್ಯ-2022′ ಸಮಾರಂಭವು ದ.19 ರಂದು ಜರಗಲಿದೆ.

ಉದ್ಘಾಟನೆಯನ್ನು ಮಂಗಳೂರು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಚನಿಲ ತಿಮ್ಮಪ್ಪ ಶೆಟ್ಟಿಯವರು ನೆರವೇರಿಸಲಿದ್ದಾರೆ.

ಶಾಸಕರಾದ ಸಂಜೀವ ಮಠಂದೂರುರವರು ಅಧ್ಯಕ್ಷತೆ ವಹಿಸಲಿದ್ದು, ಗೌರವ ಉಪಸ್ಥಿತಿಯಾಗಿ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ ಶೆಣೈ, ನಗರಸಭೆ ಸದಸ್ಯೆ ಪ್ರೇಮಲತಾ ಜಿ.ನಂದಿಲ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ಕೇಂದ್ರ ಸರಕಾರದ ದಿಶಾ ಸಮಿತಿಯ ನಾಮ ನಿರ್ದೇಶಿತ ಸದಸ್ಯ ರಾಮದಾಸ್ ಹಾರಾಡಿ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಕಾಂಚನ ಸುಂದರ ಭಟ್ ಹಾಗೂ ಮುಖ್ಯ ಭಾಷಣಗಾರರಾಗಿ ನಿವೃತ್ತ ಪ್ರಾಂಶುಪಾಲರಾದ ಪ್ರೊ|ಬಿ.ವಿ ಸೂರ್ಯನಾರಾಯಣರವರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿದೆ.

ಬೆಳಿಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಸುನಿಲ್ ಕುಮಾರ್‌ರವರು ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ. ಬಳಿಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರಗಲಿದ್ದು, ಅಧ್ಯಕ್ಷತೆಯನ್ನು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣ ನಾಯ್ಕರವರು ವಹಿಸಲಿದ್ದಾರೆ.

ಮುಖ್ಯ ಅತಿಥಿಯಾಗಿ ಪುತ್ತೂರು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ನವೀನ್ ವೇಗಸ್, ಹಾರಾಡಿ ಸಮೂಹ ಸಂಪನ್ಮೂಲ ಕೇಂದ್ರದ ಪ್ರಸಾದ್ ಕೆ.ವಿ.ಎಲ್.ಎನ್‌ರವರು ಭಾಗವಹಿಸಲಿದ್ದಾರೆ ಎಂದು ಶಾಲಾ ಮುಖ್ಯಗುರು ಕೆ.ಕೆ ಮಾಸ್ಟರ್, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣ ನಾಯ್ಕ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಧಾಕೃಷ್ಣ ನಂದಿಲ, ಶಾಲಾ ವಿದ್ಯಾಥಿ ನಾಯಕ ರೋಶನ್ ಎಸ್.ಕೆರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ..
*ಭರತನಾಟ್ಯ *ಹುಲಿ ಕುಣಿತ
*ಜಾನಪದ ನೃತ್ಯ(ಕನ್ನಡ ಮತ್ತು ತುಳು)
*ನೃತ್ಯ ರೂಪಕ *ನೃತ್ಯ ವೈವಿಧ್ಯ
*ಇಂಗ್ಲೀಷ್ ಕಿರು ನಾಟಕ
*ಶಾಲಾ ಮಕ್ಕಳಿಂದ ಯಕ್ಷಗಾನ `ಸುದರ್ಶನ ವಿಜಯ’

 

LEAVE A REPLY

Please enter your comment!
Please enter your name here