ಶಬರಿಮಲ ಮಾಳಿಕಾಪುರಂ ಮೇಲ್‌ಶಾಂತಿ ಬ್ರಹ್ಮಶ್ರೀ ಕೆ. ಶಂಭು ನಂಬೂದಿರಿ, ವಜ್ರದೇಹಿ ಶ್ರೀಗಳ ಆಗಮನ
ಬೆಟ್ಟಂಪಾಡಿ: ಇಲ್ಲಿನ ಶ್ರೀರಾಮನಗರ ರೆಂಜ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಬೆಳ್ಳಿಹಬ್ಬ ಸಂಭ್ರಮವು ನಗರಭಜನಾ ಮಂಗಲೋತ್ಸವ, ಶ್ರೀ ಸತ್ಯನಾರಾಯಣ ಪೂಜೆ ಮತ್ತು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದ. 22 ರಂದು ನಡೆಯಲಿದೆ.
ಕಾರ್ಯಕ್ರಮಕ್ಕೆ ಶಬರಿಮಲ ಮಾಳಿಕಾಪುರಂ ಮೇಲ್‌ಶಾಂತಿ ಬ್ರಹ್ಮಶ್ರೀ ಕೆ. ಶಂಭು ನಂಬೂದಿರಿ ಆಗಮಿಸಿ ಆಶೀರ್ವಚನ ನೀಡಲಿದ್ದಾರೆ.
ಬೆಳಿಗ್ಗೆ ಬೆಳ್ಳಿಹಬ್ಬ ಸಂಭ್ರಮವನ್ನು ಪ್ರಗತಿಪರ ಕೃಷಿಕ ರಘುನಾಥ ರೈ ಕೂವೆಂಜ ಉದ್ಘಾಟಿಸಲಿದ್ದಾರೆ. ಬಳಿಕ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಳೀಲು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ನಳೀಲು, ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಛಾ ದ.ಕ. ಜಿಲ್ಲಾಧ್ಯಕ್ಷ ಆರ್.ಸಿ. ನಾರಾಯಣ ರೆಂಜ, ಮೂಡಬಿದಿರೆ ಕೆನರಾ ಬ್ಯಾಂಕ್ ಮುಖ್ಯಪ್ರಬಂಧಕ ಪ್ರಮೋದ್ ಕುಮಾರ್ ಕೆ. ಚೆಲ್ಯಡ್ಕ ಹಾಗೂ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಶ್ರೀವತ್ಸ ಕಾಜಿಮೂಲೆ ಭಾಗವಹಿಸಲಿದ್ದಾರೆ.
ಮಧ್ಯಾಹ್ನ ಶ್ರೀ ಅಯ್ಯಪ್ಪ ಸ್ವಾಮಿಗೆ ಪುಷ್ಪಾಂಜಲಿ ಪೂಜೆ ನಡೆಯಲಿದೆ. ಬಳಿಕ ಅನ್ನಸಂತರ್ಪಣೆ ಜರಗಲಿದೆ.
ಸಂಜೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದಿಂದ ಶ್ರೀದೇವರ ದಿವ್ಯಜ್ಯೋತಿ ಮೆರವಣಿಗೆಯು ಸಿಂಗಾರಿ ಮೇಳ, ಕುಣಿತ ಭಜನೆಯೊಂದಿಗೆ ನಡೆದು ಬರಲಿದೆ. ರಾತ್ರಿ ನಗರ ಭಜನಾ ಮಂಗಲೋತ್ಸವ ನಡೆದು ಅನ್ನಸಂತರ್ಪಣೆ ಜರಗಲಿದೆ.
ಮಣಿಕಂಠ ಮಹಿಮೆ
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಂಗಳೂರಿನ ವಿಜಯ ಕುಮಾರ್ ಕೊಡಿಯಾಲ್‌ಬೈಲ್ ನೇತೃತ್ವದ ಕಲಾಸಂಗಮ ಕಲಾವಿದರಿಂದ ‘ಮಣಿಕಂಠ ಮಹಿಮೆ’ ಪೌರಾಣಿಕ ನಾಟಕ ನಡೆಯಲಿದೆ.