ವಿಟ್ಲ: ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.26ರಿಂದ ಡಿ.28ರ ವರೆಗೆ ನಡೆಯಲಿರುವ ವರ್ಷಾವಧಿ ಜಾತ್ರೋತ್ಸವದ ಪ್ರಯುಕ್ತ ಡಿ.20ರಂದು ಗೊನೆಮುಹೂರ್ತ ನಡೆಯಿತು.
ದೇವಾಲಯದ ಪ್ರಧಾನ ಅರ್ಚಕರಾದ ಗೋವಿಂದ ಜೋಯಿಸರು ವಿಧಿ ವಿಧಾನ ನೆರವೇರಿಸಿದರು.ಕ್ಷೇತ್ರದ ಅರ್ಚಕರಾದ ಗೋಪಾಲಕೃಷ್ಣ ಭಟ್ ರವರು ಸಹಕರಿಸಿದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕೆ.ಎಸ್. ಮುಕ್ಕುಡ, ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಗೌರವಾಧ್ಯಕ್ಷರಾದ ಎಂ.ಹೆಚ್. ರಮೇಶ್ ಭಟ್ ಮಿತ್ತೂರು, ಪ್ರಧಾನ ಕಾರ್ಯದರ್ಶಿ ಪ್ರಪುಲ್ಲಚಂದ್ರ ಪಿ.ಜಿ.ಕೋಲ್ಪೆ, ಕೋಶಾಧಿಕಾರಿ ವೆಂಕಟರಮಣ ಭಟ್ ಸೂರ್ಯ, ಕಾರ್ಯದರ್ಶಿ ಜಗದೀಶ್ ದೇವಸ್ಯ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ಈಶ್ವರ ಗೌಡ ನಾಯ್ತೋಟ್ಟು,ಇಡ್ಕಿದು ಗ್ರಾಮ ಪಂಚಾಯತ್ ಅಧ್ಯಕ್ಷ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ಎಂ.ಸುಧೀರ್ ಕುಮಾರ್ ಶೆಟ್ಟಿ, ಸದಸ್ಯರಾದ ಪುರುಷೋತ್ತಮ ಕೋಲ್ಪೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಿಜಯಕುಮಾರ್ ಗೌಡ ಸೂರ್ಯ, ಚಂದ್ರಶೇಖರ ಕಂಬಳಿ ಅರ್ಕೆಚ್ಚಾರು, ದೇಜಪ್ಪ ಕೋಲ್ಪೆ, ವಿ.ಕೆ.ಕುಟ್ಟಿ ಉರಿಮಜಲು, ಉಷಾ ಮುಂಡ್ರಬೈಲು, ಶಶಿಪ್ರಭ ಮಿತ್ತೂರು, ಗ್ರಾಮಸ್ಥರಾದಸುರೇಶ್ ಸೂರ್ಯ, ಮೋನಪ್ಪ ಸಪಲ್ಯ, ಶಶಿಧರ ಬಂಡಾರಿ, ಕೃಷ್ಣಪ್ಪ ಕೆಮನಾಜೆ ಸಹಿತ ಗ್ರಾಮಸ್ಥರು ಉಪಸ್ಥಿತರಿದ್ದರು.
ಕ್ಷೇತ್ರದಲ್ಲಿ ಡಿ.26ರಿಂದ ಆರಂಭಗೊಂಡು ಡಿ.28ರ ವರೆಗೆ ವರ್ಷಾವಧಿ ಜಾತ್ರೋತ್ಸವ ನಡೆಯಲಿದೆ.
ಡಿ.25ರಂದು ಉಗ್ರಾಣ ಮುಹೂರ್ತ, ಡಿ.26. 108 ಕಾಯಿ ಗಣಪತಿ ಹವನ, ಮದ್ಯಾಹ್ನ ಹವನದ ಪೂರ್ಣಾಹುತಿ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ.
ಡಿ.27ರಂದು ಬೆಳಗ್ಗೆ 6ಗಂಟೆಯಿಂದ ಸಾಯಂಕಾಲ 6 ಗಂಟೆಯ ವರೆಗೆ ಅರ್ಧ ಏಕಾಹ ಭಜನೆ ನಡೆಯಲಿದೆ. ಬೆಳಗ್ಗೆ ಆಶ್ಲೇಶ ಬಲಿ ಪ್ರಾರಂಭ, ಮಧ್ಯಾಹ್ನ ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ಪಂಚಮಿ ಬಲಿ ಉತ್ಸವ, ವಸಂತಕಟ್ಟೆ ಪೂಜೆ, ಪ್ರಸಾದ ವಿತರಣೆ ನಡೆದು ಅನ್ನ ಸಂತರ್ಪಣೆ ನಡೆಯಲಿದೆ. ಡಿ.೨೮ರಂದು ಕಿರುಷಷ್ಠಿ ಉತ್ಸವ ನಡೆಯಲಿದೆ. ಬೆಳಗ್ಗೆ ದೇವರ ಬಲಿಹೊರಟು ದರ್ಶಣಬಲಿ, ಬಟ್ಟಲು ಕಾಣಿಕೆ, ನಡೆದು ಪ್ರಸಾದ ವಿತರಣೆ ನಡೆಯಲಿದೆ. ಬಳಿಕ ಪಿಲಿಚಾಮುಂಡಿ ದೈವದ ನೇಮೋತ್ಸವ ನಡೆಯಲಿದೆ.