




ಪುತ್ತೂರು: ಮೂಡಬಿದಿರೆಯ ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾಗಿರಿ ಕ್ಯಾಂಪಸ್ ಭಾರತದಲ್ಲಿಯೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಸ್ಕೌಟ್ಸ್ ಆಂಡ್ ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಗೆ ಸಜ್ಜಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮದ ಪ್ರದರ್ಶನಕ್ಕೆ ಸಂಬಂಧಿಸಿ ಪುತ್ತೂರು ಮೂಕಾಂಬಿಕ ಕಲ್ಚರಲ್ ಅಕಾಡೆಮಿಯ ನೃತ್ಯಗುರು ವಿದ್ವಾನ್ ದೀಪಕ್ ಕುಮಾರ್ ಸಂಯೋಜನೆಯಲ್ಲಿನ 2 ಭರತನಾಟ್ಯ ನೃತ್ಯಗಳು ಮುಖ್ಯ ವೇದಿಕೆಯಲ್ಲಿ ಆರಂಭಿಕ ನೃತ್ಯ ಪ್ರಸ್ತುತಿ ನೀಡಲಾಗುತ್ತದೆ.




ಈಗಾಗಲೇ ಭರತನಾಟ್ಯ ತಾಲೀಮು ಕಾರ್ಯಕ್ರಮ ನಡೆಯುತ್ತಿದ್ದು, ಪುತ್ತೂರು, ಕಡಬ, ಪಂಜ, ಬೆಳ್ಳಾರೆ, ಕಾಸರಗೋಡು, ಬದಿಯಡ್ಕ, ಮಂಗಳೂರು, ಸುರತ್ಕಲ್, ಕಿನ್ನಿಗೋಳಿ, ಉಡುಪಿ, ಮೂಡಬಿದ್ರೆ, ಕುಂದಾಪುರ ಮುಂತಾದ ಕರಾವಳಿ ಕರ್ನಾಟಕದ ಹಲವಾರು ಕಲಾವಿದರು ಪ್ರದರ್ಶನ ತಂಡದಲ್ಲಿದ್ದಾರೆ. ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸುಮಾರು 15 ಮಂದಿ ನೃತ್ಯಗಾರರು ಪ್ರದರ್ಶನ ನೀಡುತ್ತಿದ್ದಾರೆ. 100 ಕ್ಕೂ ಹೆಚ್ಚು ನೃತ್ಯಗಾರರ ತಂಡದವರು ವಿದ್ವಾನ್ ದೀಪಕ್ ಕುಮಾರ್ ಅವರು ನೃತ್ಯ ಸಂಯೋಜಿಸಿದ 2 ನೃತ್ಯಗಳಾದ ನವದುರ್ಗೆ ಮತ್ತು ಭೋ ಶಂಭೋವನ್ನು ಮುಖ್ಯ ವೇದಿಕೆಯಲ್ಲಿ ಆರಂಭಿಕ ನೃತ್ಯ ಪ್ರಸ್ತುತಿಯಾಗಿ ಪ್ರಸ್ತುತಪಡಿಸಲಾಗುವುದು ಎಂದು ವಿದ್ವಾನ್ ದೀಪಕ್ ಕುಮಾರ್ ಅವರು ತಿಳಿಸಿದ್ದಾರೆ.

















