ಚಾರ್ವಾಕ ಪ್ರಾ.ಕೃ.ಪ.ಸ.ಸಂಘದ ದೋಳ್ಪಾಡಿ ಶಾಖೆಯಲ್ಲಿ ಯಶಸ್ವಿನಿ ಆರೋಗ್ಯಾ ರಕ್ಷಾ ಯೋಜನೆಯ ನೋಂದಣೆ

0

ಕಾಣಿಯೂರು: ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ದೋಳ್ಪಾಡಿ ಶಾಖಾ ಕಛೇರಿಯಲ್ಲಿ ರಾಜ್ಯ ಸರಕಾರದ ಮಹತ್ವಪೂರ್ಣ ಯೋಜನೆಯಾದ ಯಶಸ್ವಿನಿ ಆರೋಗ್ಯಾ ರಕ್ಷಾ ಯೋಜನೆಯ ನೋಂದಣೆ ಕಾರ್ಯಕ್ರಮವು ದ 21ರಂದು ನಡೆಯಿತು.

ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ಆನಂದ ಗೌಡ ಮೇಲ್ಮನೆ ಉದ್ಘಾಟಿಸಿ ಮಾತನಾಡಿ, ದೋಳ್ಪಾಡಿ ಗ್ರಾಮದ ಸದಸ್ಯರು ಯೋಜನೆಯ ಪ್ರಯೋಜನ ಪಡೆಯುವ ಉದ್ಧೇಶದಿಂದ ಒಂದು ದಿನ ದೋಳ್ಪಾಡಿಯಲ್ಲಿಯೇ ನೋಂದಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಡಿಸೆಂಬರ್ 31 ರೊಳಗೆ ಹೆಚ್ಚಿನ ಸದಸ್ಯರು ಸಂಘದ ಪ್ರಧಾನ ಕಚೇರಿ ಕಾಣಿಯೂರಿನಲ್ಲಿಯೂ ಬಂದು ಯಶಸ್ವಿ ಯೋಜನೆಗೆ ನೋಂದಾಯಿಸಿ ಪ್ರಯೋಜನ ಪಡೆದುಕೊಳ್ಳಬೇಕಾಗಿ ಹೇಳಿದ ಅವರು ಈ ಯೋಜನೆಯನ್ನು ಜಾರಿಗೆ ತಂದ ರಾಜ್ಯ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಈ ಸಂದಭದಲ್ಲಿ ಸಂಘದ ನಿರ್ದೇಶಕ ವಿಶ್ವನಾಥ ಗೌಡ ಮರಕ್ಕಡ, ಮಾಜಿ ನಿರ್ದೇಶಕ ದೇವಿಪ್ರಸಾದ್ ದೋಳ್ಪಾಡಿ, ಹಿರಿಯ ಸದಸ್ಯರಾದ ಮಂಜುನಾಥ ರೈ ಕಾಯರ, ಧರ್ಮಪಾಲ ರೈ ಪಿಜಕ್ಕಳ, ಚೆನ್ನಪ್ಪ ಪರವ ಸಹಿತಿ ಹಲವಾರು ಮಂದಿ ಸದಸ್ಯರು ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ ಸ್ವಾಗತಿಸಿ, ವಂದಿಸಿದರು.

ಯಶಸ್ವಿನಿ ಯೋಜನೆಯಲ್ಲಿ ಗುರುತಿಸಲ್ಪಡುವ ನೆಟ್‌ವರ್ಕ್ ಆಸ್ಪತ್ರೆಯಲ್ಲಿ ಒಂದು ಕುಟುಂಬಕ್ಕೆ ವಾರ್ಷಿಕ ಗರಿಷ್ಠ 5 ಲಕ್ಷದವರೆಗೆ ವೈದಕೀಯ ಚಿಕಿತ್ಸಾ ವೆಚ್ಚ ಪಡೆಯಲು ಅವಕಾಶವಿದ್ದು, ಸದಸ್ಯರು ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು ಸಂಘದಿಂದ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here