ಪುತ್ತೂರು: ಮಲ್ಟಿಪ್ಲೆಕ್ಸ್ ಚಿತ್ರಮಂದಿರ ನಿರ್ಮಾಣದ ಮುಂಚೂಣಿಯಲ್ಲಿ ಇರುವ ಭಾರತ್ ಸಿನಿಮಾಸ್ ನ 6ನೇ ಶಾಖೆ ಪುತ್ತೂರಿನ ಪ್ರತಿಷ್ಠಿತ ಜಿ.ಎಲ್ ಮಾಲ್ ನಲ್ಲಿ ಡಿ.21 ರಂದು ಉದ್ಘಾಟನೆಗೊಂಡಿತ್ತು. ಉದ್ಘಾಟನೆ ದಿನವೇ 3 ಪರೆದೆಗಳ ಪೈಕಿ 2 ಪರದೆಗಳಲ್ಲಿ ಪ್ರೀಮಿಯರ್ ಶೋ ಗಳಾಗಿ ಕಾಂತಾರ ಮತ್ತು ದೃಶ್ಯಂ ಪ್ರದರ್ಶನಗೊಂಡವು.
ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನ ಮಾಲಕ ಬಲರಾಮ್ ಆಚಾರ್ಯ ಅವರು ಭಾರತ್ ಸಿನಿಮಾಸ್ ನ 6ನೇ ಶಾಖೆಯನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಜಿ.ಎಲ್ ಆರ್ಚಾರ್ಯ ಜ್ಯುವೆಲ್ಲರ್ಸ್ ಮಾಲಕರ ಪತ್ನಿ ರಾಜಿ ಬಲರಾಮ ಆಚಾರ್ಯ, ಪುತ್ರರಾದ ಸುದನ್ವ ಆಚಾರ್ಯ, ಲಕ್ಷ್ಮೀಕಾಂತ್ ಆಚಾರ್ಯ, ಭಾರತ್ ಸಿನೆಮಾದ ನಿರ್ದೇಶಕರಾದ ಆನಂದ್ ಪೈ, ಸುಧೀರ್ ಪೈ, ಬಾಲಕೃಷ್ಣ ಶೆಟ್ಟಿ, ಸುಧಾ ಬಿ ಶೆಟ್ಟಿ, ಟೆಕ್ನಿಕಲ್ ಅಶ್ವಿನ್ ಪ್ರಭು, ಆ್ಯಡ್ ಲ್ಯಾಬ್ ನ ಪೊನ್ನಪ್ಪ, ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಮೆನೇಜರ್ ಕರುಣಾಕರ್ ಸಹಕರಿಸಿದರು.
ವಿಶೇಷತೆ:
ಸುಸಜ್ಜಿತ 3 ಪರೆದೆಗಳನ್ನು ಉಳ್ಳ ಈ ಚಿತ್ರಮಂದಿರ ಒಟ್ಟು 473 ಆರಾಮದಾಯಕ ಆಸನ , 2K ಡಿಜಿಟಲ್ ಪ್ರೊಜೆಕ್ಷನ್ , ಡಾಲ್ಬಿ ಡಿಜಿಟಲ್ ಸೌಂಡ್ , 3D ಪ್ಲೇಬ್ಯಾಕ್ ನೊಂದಿಗೆ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ,ಅತ್ಯಾಧುನಿಕ ಸೌಲಭ್ಯ ಮತ್ತು ಸುಂದರ ವಾಸ್ತು ವಿನ್ಯಾಸಗಳಿಂದ ನೂತನ ಮಲ್ಟಿಪ್ಲೆಕ್ಸ್ ಕಂಗೊಳಿಸುತ್ತಿದೆ.
ಇಲ್ಲಿ ಆನ್ಲೈನ್ ಟಿಕೇಟಿಂಗ್ , ಕೌಂಟರ್ ಟಿಕೆಟ್ ಹಾಗೂ ಟೆಲಿ ಬುಕಿಂಗ್ ವ್ಯವಸ್ಥೆ ಯನ್ನು ಗ್ರಾಹಕರ ಅನುಕೂಲಕ್ಕಾಗಿ ಪರಿಚಯಿಸಲಾಗಿದೆ . ಇದು ಸಿನೆಮಾ ವೀಕ್ಷಣೆಯ ಉತ್ಕೃಷ್ಟ ಅನುಭವವನ್ನು ನೀಡಲಿದೆ.
ಒಟ್ಟಾರೆ ಪುತ್ತೂರಿನ ಸಿನಿ ಪ್ರಿಯರ ಬಹುಕಾಲದ ನಿರೀಕ್ಷೆ ಸಾಕಾರವಾದಂತಾಗಿದೆ . ಮುಂಗಡ ಟಿಕೆಟ್ ಬುಕ್ಕಿಂಗ್ ಹಾಗೂ ಚಿತ್ರಗಳ ಬಗ್ಗೆ ತಿಳಿಯಲು 8050253030 ಸಂಪರ್ಕಿಸ ಬಹುದೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ .