ನಾಟಕ ಪ್ರದರ್ಶನ ಮೂಲಕ ನಿಧಿ ಸಂಗ್ರಹ

0

ಉಪ್ಪಿನಂಗಡಿ-ನಟ್ಟಿಬೈಲ್‌ನ ಅನಾರೋಗ್ಯ ವ್ಯಕ್ತಿಗೆ ಸಹಕಾರ-ಹಣ ಹಸ್ತಾಂತರ

ಉಪ್ಪಿನಂಗಡಿ: ಕಿಡ್ನಿ ಸಮಸ್ಯೆ ಉಂಟಾಗಿ ಜನ್ಮವಿತ್ತ ತಾಯಿಯೇ ಕಿಡ್ನಿ ದಾನಕ್ಕೆ ಮುಂದಾದರೂ ಚಿಕಿತ್ಸೆಗೆ ಆರ್ಥಿಕ ಸಾಮರ್ಥ್ಯವಿಲ್ಲದೆ ಅಸಹಾಯಕವಾಗಿದ್ದ ಕುಟುಂಬಕ್ಕೆ ಉಪ್ಪಿನಂಗಡಿ ರಾಮನಗರದ ಕಟ್ಟೆ ಪ್ರೆಂಡ್ಸ್ ತಂಡವು ನಾಟಕ ಪ್ರದರ್ಶನ ಮಾಡಿ ಮಾನವೀಯ ನೆಲೆಯಲ್ಲಿ ಆರ್ಥಿಕ ಸಹಕಾರ ನೀಡುವ ಮೂಲಕ ಸಹಾನುಭೂತಿ ತೋರಿದ ಘಟನೆ ಬಗ್ಗೆ ವರದಿಯಾಗಿದೆ.

ಉಪ್ಪಿನಂಗಡಿ ಸಮೀಪದ ನಂದಿನಿ ನಗರ ಮನೆ ನಿವಾಸಿ ದಿನೇಶ್ ಕಿಡ್ನಿ ಸಮಸ್ಯೆಗೆ ಸಿಲುಕಿ ಅನಾರೋಗ್ಯಕ್ಕೀಡಾಗಿದ್ದರು. ಕಿಡ್ನಿ ಕಸಿ ಮಾಡಿದರೆ ಬದುಕಬಹುದೆಂಬ ವೈದ್ಯರ ಸಲಹೆಗೆ ಹೆತ್ತ ತಾಯಿ ತಾನೇ ಕಿಡ್ನಿ ಕೊಡುವೆನೆಂದು ಮುಂದೆ ಬಂದರು. ಆದರೆ ಕಿಡ್ನಿ ಕಸಿ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚು ತಗಲುವ ಸಾಧ್ಯತೆ ಇರುವುದರಿಂದ ಚಿಕಿತ್ಸೆಗೆ ಮುಂದಾಗಲು ಅಸಹಾಯಕತೆ ವ್ಯಕ್ತವಾಗಿತ್ತು.

ಇದನ್ನು ಅರಿತ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯ ಧನಂಜಯ್ ನಟ್ಟಿಬೈಲು ನೇತೃತ್ವದ ಕಟ್ಟೆ ಪ್ರೆಂಡ್ಸ್ ಎಂಬ ಯುವಕರ ತಂಡ ನಾಟಕ ಪ್ರದರ್ಶನ ನೀಡಿ ಅದರಿಂದ ಉಳಿದ ಮೊತ್ತವನ್ನು ಯುವಕನಿಗೆ ನೀಡಲು ಯೋಜನೆ ರೂಪಿಸಿತು. ಅಂತೆಯೇ ಉಳಿಕೆಯಾದ ಮೊತ್ತವನ್ನು ಹಿರಿಯ ಸಾಮಾಜಿಕ ಮುಂದಾಳು ಉಮೇಶ್ ಶೆಣೈ ಉಪಸ್ಥಿತಿಯಲ್ಲಿ ಯುವಕನಿಗೆ ಹಸ್ತಾಂತರಿಸಿ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿದೆ.

ಈ ಸಂಧರ್ಭದಲ್ಲಿ ತಂಡ ಪ್ರಮುಖರಾದ ಸಚಿನ್, ನಿತಿನ್, ಅವಿನಾಶ್, ನಿಶಾಂತ್, ನಿತೀಶ್ ಗಾಣಿಗ, ಅಶೋಕ್, ಅಭಿಲಾಶ್, ದೀಪಕ್ ಪೈ, ಪ್ರಸಾದ್ ಭಂಡಾರಿ, ಯತೀಶ್ ಶೆಟ್ಟಿ ಉಪಸ್ಥಿತರಿದ್ದರು.

ತಂದೆಯಿಲ್ಲದ, ತಾಯಿಯೇ ಏಕೈಕ ಆಸರೆಯಾಗಿರುವ ಈ ಯುವಕನ ಚಿಕಿತ್ಸೆಗೆ 6 ಲಕ್ಷಕ್ಕೂ ಮಿಗಿಲಾದ ವೆಚ್ಚ ತಗಲಲಿದ್ದು, ಸಮಾಜದ ಸಹೃದಯರ ಸಹಕಾರದ ಅಗತ್ಯತೆವಿದೆ ಎಂದೂ, ಈ ನಿಟ್ಟಿನಲ್ಲಿ ಸಹಕರಿಸುವ ಮನಸ್ಸುಗಳು ದಿನೇಶ್‌ರವರ ಮೊಬೈಲ್ ಸಂಖ್ಯೆ  6364499117 ನ್ನು ಸಂಪರ್ಕಿಸಬಹುದೆಂದು ಧನಂಜಯ್ ಕುಮಾರ್ ನಟ್ಟಿಬೈಲ್ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here