ಕೋಡಿಂಬಾಳದ ರಿಕ್ಷಾ ಚಾಲಕ ಅಬೂಬಕ್ಕರ್ ಉಮ್ರಾ ಯಾತ್ರೆಯ ವೇಳೆ ಮೆಕ್ಕಾದಲ್ಲಿ ನಿಧನ

0

ಕಡಬ: ಪವಿತ್ರ ಉಮ್ರಾ ಯಾತ್ರೆಯ ವೇಳೆ ಕಡಬದ ವ್ಯಕ್ತಿಯೋರ್ವರು ಮೆಕ್ಕಾದಲ್ಲಿ ಮೃತಪಟ್ಟ ಘಟನೆ ಡಿ.20ರಂದು ನಡೆದಿದೆ. ಕಡಬ ಕೋಡಿಂಬಾಳದ ನಿವಾಸಿ ಆಟೋ ಚಾಲಕರಾಗಿದ್ದ ಅಬೂಬಕ್ಕರ್ ಮೃತಪಟ್ಟವರು.

ಪತ್ನಿ ಸೇರಿದಂತೆ 40 ಜನರ ತಂಡದ ಜೊತೆಗೆ ಉಮ್ರಾ ಯಾತ್ರೆ ಕೈಗೊಂಡಿದ್ದ ವೇಳೆ ಸೌದಿ ಅರೇಬಿಯಾದಲ್ಲಿರುವ ಮೆಕ್ಕಾದಲ್ಲಿ ಅಬೂಬಕ್ಕರ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಸೇರಿಸುವ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತದೇಹವನ್ನು ಮೆಕ್ಕಾದಲ್ಲೇ ಅಂತ್ಯಕ್ರಿಯೆ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here