ಮಾಣಿಕ್ಯ ಜ್ಯುವೆಲ್ಲರ್ಸ್ ಮಾಲಕ ರವೀಂದ್ರ ಆಚಾರ್ಯ ನಿಧನ

0

ರವೀಂದ್ರ ಆಚಾರ್ಯ

 

ಪುತ್ತೂರು: ಕೋರ್ಟ್ ರಸ್ತೆಯ ಪುತ್ತೂರು ಸೆಂಟರ್‌ನಲ್ಲಿ ಮಾಣಿಕ್ಯ ಜ್ಯುವೆ‌ಲ್ಲರ್ಸ್ ಸಂಸ್ಥೆಯನ್ನು ಹೊಂದಿರುವ ರವೀಂದ್ರ ಆಚಾರ್ಯ(52ವ.)ರವರು ಅಲ್ಪಕಾಲದ ಅಸೌಖ್ಯದಿಂದ ದ.23 ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಮೃತ ರವೀಂದ್ರ ಆಚಾರ್ಯರವರು ಕೋರ್ಟ್ ರಸ್ತೆಯಲ್ಲಿನ ಪುತ್ತೂರು ಸೆಂಟರ್‌ನಲ್ಲಿ ಕಳೆದ 20 ವರ್ಷಗಳಿಂದ ಮಾಣಿಕ್ಯ ಜ್ಯುವೆ‌ಲ್ಲರ್ಸ್ ಎಂಬ ಸ್ವಂತ ಉದ್ದಿಮೆಯನ್ನು ನಡೆಸಿಕೊಂಡು ಬಂದಿದ್ದರು. ಆರ್ಯಾಪು ಗ್ರಾಮದ ದೇವಸ್ಯ ನಿವಾಸಿಯಾಗಿರುವ ರವೀಂದ್ರ ಆಚಾರ್ಯರವರು ಓರ್ವ ಶ್ರಮಜೀವಿಯಾಗಿದ್ದು ದೈವ-ದೇವಸ್ಥಾನಗಳಿಗೆ ಹಾಗೂ ಫಲಾನುಭವಿಗಳಿಗೆ ಅಗತ್ಯ ನೆರವನ್ನು ನೀಡುವ ಮೂಲಕ ಎಲ್ಲರ ಪ್ರೀತಿಯನ್ನು ಸಂಪಾದಿಸಿದ್ದರು ಅಲ್ಲದೆ ವಿಶ್ವಕರ್ಮ ಸಂಘದಲ್ಲಿ ಅವರು ಸಕ್ರಿಯರಾಗಿ ಭಾಗವಹಿಸುತ್ತಿದ್ದರು. ಮೃತ ರವೀಂದ್ರ ಆಚಾರ್ಯರವರು ಪತ್ನಿ ಸೌಮ್ಯ, ಪುತ್ರ ಶ್ರವಣ್, ಪುತ್ರಿ ಸಿಂಚನಾರವರನ್ನು ಅಗಲಿದ್ದಾರೆ.

ಹರತಾಳ..
ಮಾಣಿಕ್ಯ ಜ್ಯುವೆಲ್ಲರ್ಸ್ ರವೀಂದ್ರ ಆಚಾರ್ಯರವರ ನಿಧನದ ಹಿನ್ನೆಲೆಯಲ್ಲಿ ಕೋರ್ಟ್ ರಸ್ತೆಯ ಪುತ್ತೂರು ಸೆಂಟರ್‌ನಲ್ಲಿ ವ್ಯವಹರಿಸುತ್ತಿರುವ ಅಂಗಡಿ ಮಳಿಗೆಗಳು ದ.24 ರಂದು ಬೆಳಿಗ್ಗೆ ಗಂಟೆ 10 ರಿಂದ 11 ಗಂಟೆಯವರೆಗೆ ಮುಚ್ಚುವ ಮೂಲಕ ಅಗಲಿದ ರವೀಂದ್ರ ಆಚಾರ್ಯರವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕೋರಿ ಹರತಾಳ ನಡೆಸಲಿದ್ದಾರೆ.

LEAVE A REPLY

Please enter your comment!
Please enter your name here