ಪುತ್ತೂರು: ಗಟ್ಟಮನೆ ಜುಮಾ ಮಸೀದಿ ಇದರ ವಾರ್ಷಿಕ ಮಹಾಸಭೆಯು ಗೌರವಾಧ್ಯಕ್ಷರಾದ ಎಸ್ ಎಂ ಬಶೀರ್ ಹಾಜಿ ಶೇಕಮಲೆಯವರ ಅಧ್ಯಕ್ಷತೆಯಲ್ಲಿ ಮಸೀದಿಯಲ್ಲಿ ನಡೆಯಿತು. ಖತೀಬರಾದ ಉಮ್ಮರ್ ದಾರಿಮಿ ದುವಾ ನೆರವೇರಿಸಿದರು.
ಸಭೆಯಲ್ಲಿ ೨೦೨೩-೨೪ ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅರಬಿಕುಂಞಿ ಸಾರೆಪುಣಿ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಅಬ್ದುಲ್ಲ ಹಾಜಿ ಗಟ್ಟಮನೆ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ನೂಜಿ, ಕಾರ್ಯದರ್ಶಿಯಾಗಿ ಅಬ್ದುಲ್ ಬಶೀರ್ ಡಿ ಎ, ಲೆಕ್ಕ ಪರಿಶೋಧಕರಾಗಿ ಇಬ್ರಾಹಿಂ ಬೆದ್ರಗುರಿಯವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ರಿಯಾರ ಗಟ್ಟಮನೆ, ಇಸ್ಮಾಯಿಲ್ ಗಟ್ಟಮನೆ, ಅಯ್ಯೂಬ್ ಗಟ್ಟಮನೆ, ಅಬೂಬಕ್ಕರ್ ಇದ್ಪಾಡಿ, ಅಬೂಬಕ್ಕರ್ ಸಾರೆಪುಣಿ, ಅಬ್ದುಲ್ಲ ಬೆದ್ರುಮಾರ್, ಮೂಸೆಕುಂಞಿ ಕೋಟ್ರಾಸ್ ರವರನ್ನು ನೇಮಿಸಲಾಯಿತು. ಪ್ರ.ಕಾರ್ಯದರ್ಶಿ ಡಿ ಎ ಬಶೀರ್ ಲೆಕ್ಕಪತ್ರ ಮಂಡಿಸಿದರು. ಮುಅಲ್ಲಿಂ ಅಶ್ರಫ್ ಮೌಲವಿ ಉಪಸ್ಥಿತರಿದ್ದರು.