ರೋ. ಚಕ್ರತೀರ್ಥ ವಿರುದ್ಧ ಗೋಬ್ಯಾಕ್‌ ಅಭಿಯಾನ

0

ಸಾಮಾಜಿಕ ಜಾಲತಾಣದಲ್ಲಿ ಪ್ರಗತಿಪರ ಚಿಂತಕರು ರೋಹಿತ್‌ ಚಕ್ರತೀರ್ಥ ವಿರುದ್ಧ ಗೋಬ್ಯಾಕ್‌ ಅಭಿಯಾನ ಆರಂಭಿಸಿದ್ದಾರೆ.  ಡಿ.28ರಂದು ಸೊಪ್ಪುಗುಡ್ಡೆಯ ಗೋಪಾಲಗೌಡ ರಂಗಮಂದಿರದಲ್ಲಿ ತೀರ್ಥಹಳ್ಳಿಯ ಕಡಗೋಲು ವಿಚಾರಮಂಥನ ವೇದಿಕೆ ಕುವೆಂಪು ಸಾಹಿತ್ಯದಲ್ಲಿ ರಾಷ್ಟ್ರೀಯತೆ ವಿಷಯದ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ರೋಹಿತ್‌ ಚಕ್ರತೀರ್ಥ ಅವರನ್ನು ಆಹ್ವಾನಿಸಲಾಗಿತ್ತು. ರಾಷ್ಟ್ರಕವಿ ಕುವೆಂಪುರವರ ಸಾಹಿತ್ಯವನ್ನು ಅವಹೇಳನ ಮಾಡಿದ ಆರೋಪ ಹೊಂದಿರುವ ರೋಹಿತ್‌ ಚಕ್ರತೀರ್ಥ ಅವರು ಕುವೆಂಪು ಹುಟ್ಟೂರು ತೀರ್ಥಹಳ್ಳಿಗೆ ಕಾಲಿಡಬಾರದೆಂದು ಅಭಿಯಾನ ಆರಂಭಗೊಂಡಿದೆ. ವಿರೋಧದ ನಡುವೆಯೂ ಕಾರ್ಯಕ್ರಮಕ್ಕೆ ಆಗಮಿಸಿದಲ್ಲಿ ನಾವು ಹೋರಾಟ ನಡೆಸುತ್ತೇವೆ ಎಂದು ತೀರ್ಥಹಳ್ಳಿಯ ಎಪಿಎಂಸಿ ಮಾಜಿ ಅಧ್ಯಕ್ಷ ಮಹಾಬಲೇಶ್‌ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here