ಮೋದಿ ಸಹೋದರ ಕುಟುಂಬಕ್ಕೆ ಚಿಕಿತ್ಸೆ ನೀಡುತ್ತಿರುವ ಪುತ್ತೂರಿನ ವೈದ್ಯ

0

ಮೈಸೂರು : ಪ್ರದಾನಿ ಮೋದಿಯವರ ಸಹೋದರ ಪ್ರಹ್ಲಾದ್‌ ಮೋದಿ ಪ್ರಯಾಣಿಸುತ್ತಿದ್ದ ಮರ್ಸಿಡಿಸ್‌ ಬೆಂಜ್‌ ಕಾರ್‌ ಮೈಸೂರು ತಾಲೂಕು  ಕಡಕೊಳ ಎಂಬಲ್ಲಿ ಅಪಘಾತಕ್ಕೀಡಾಗಿದೆ.

 

ಕಾರಿನಲ್ಲಿದ್ದ ಮೋದಿ ಸಹೋದರ ಎಪ್ಪತ್ತು ವರ್ಷ ಪ್ರಾಯದ ಪ್ರಹ್ಲಾದ್‌ ಮೋದಿ, ಅವರ ಪುತ್ರ ಮೆಹುಲ್‌ ಮೋದಿ( 40) ಸೊಸೆ ಜಿಂದಾಲ್‌ ಮೋದಿ (35), ಡ್ರೈವರ್‌ ಸತ್ಯನಾರಾಯಣ ಅವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಎಲ್ಲರು ಅಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿದ್ದ ಆರು ವರ್ಷ ಪ್ರಾಯದ ಮೊಮ್ಮಗ ಮೆಹಂತ ಮೆಹುಲ್‌ ಎಡಗಾಲು ಪ್ರಾಕ್ಚರ್‌ ಆಗಿದ್ದು ಎಲ್ಲರಿಗು ಮೈಸೂರಿನ ಜೆ ಎಸ್‌ ಎಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. 

ಜೆ .ಎಸ್‌ ಎಸ್‌ ಆಸ್ಪತ್ರೆಯ  ಪ್ರೊಫೆಸರ್‌ ಮತ್ತು ಎಚ್‌ ಒಡಿ ಪುತ್ತೂರು ಮೂಲದ ಡಾ. ಬೆಳ್ಳಿಪ್ಪಾಡಿ ಶ್ಯಾಮಪ್ರಸಾದ್‌ ಶೆಟ್ಟಿ ನೇತೃತ್ವದಲ್ಲಿ ಇವರೆಲ್ಲರಿಗೂ ಚಿಕಿತ್ಸೆ ನೀಡಲಾಗುತಿದ್ದು ಆತಂಕ ಪಡುವಂತದ್ದು ಏನು ಇಲ್ಲ ಎಂದು ಡಾ. ಬಿ ಶ್ಯಾಮಪ್ರಸಾದ್‌ ಶೆಟ್ಟಿ ಸುದ್ದಿಗೆ ತಿಳಿಸಿದ್ದಾರೆ.ಮಾತ್ರವಲ್ಲ ನಮ್ಮ ಪ್ರದಾನಿಯವರ ಸಹೋದರ ಪ್ರಹ್ಲಾದ್‌ ಮೋದಿಯವರ ಕುಟುಂಬದ ಯೋಗಕ್ಷೇಮವನ್ನು ನೋಡಿಕೊಳ್ಳುವ ಮತ್ತು ಚಿಕಿತ್ಸೆ ನೀಡುವ ಅವಕಾಶ ನನಗೆ ಸಿಕ್ಕಿದ್ದು ಅನುಗ್ರಹಿತನಾಗಿದ್ದೆನೆ ಎಂದು ಹೇಳಿದರು.

ರಸ್ತೆ ವಿಭಾಜಕಕ್ಕೆ ಕಾರು ಹೊಡದು ಅಪಘಾತ ಸಂಭವಿಸಿದ್ದು ಮರ್ಸಿಡಿಸ್‌ ಬೆಂಜ್‌ ಕಾರ್‌ ಜಖಂಗೊಂಡಿದೆ.

ಮೈಸೂರು ಮಠದ ಸ್ವಾಮೀಜಿ ಸೇರಿದಂತೆ ಹಲವಾರು ಗಣ್ಯರು, ಮಂತ್ರಿ ಮಾಗದರು ಆಸ್ಪತ್ರೆಗೆ ಬೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.

LEAVE A REPLY

Please enter your comment!
Please enter your name here