ಲಿವರಿನ ಬೊಜ್ಜು ಆರೋಗ್ಯಕ್ಕೆ ಮಾರಕ! ಚೇತನಾ ಆಸ್ಪತ್ರೆಯಲ್ಲಿ ಉಚಿತ ಫೈಬ್ರೊಸ್ಕ್ಯಾನ್ ಪರೀಕ್ಷಾ ಶಿಬಿರ

0

ಪುತ್ತೂರು: ಪುತ್ತೂರಿನ ಚೇತನಾ ಆಸ್ಪತ್ರೆಯಲ್ಲಿ ಡಿ. 27ರಂದು ಉಚಿತ ಫೈಬ್ರೊಸ್ಕ್ಯಾನ್ ಪರೀಕ್ಷಾ ಶಿಬಿರ ನಡೆಯಿತು.
ಕಣ್ಣಿಗೆ ಕಾಣದೇ ಇರುವ ಲಿವರಿನಲ್ಲಿ ಸಂಗ್ರಹವಾಗಿರುವ ಕೊಬ್ಬಿನ ಅಂಶವನ್ನು ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸೆಗೆ ಮಾರ್ಗದರ್ಶನ ನೀಡಲಾಯಿತು. ಬೆಳಿಗ್ಗೆ 9ರಿಂದ 2ರವರೆಗೆ ಉಚಿತ ಪರೀಕ್ಷಾ ಶಿಬಿರದಲ್ಲಿ ಹಲವು ಮಂದಿ ಭಾಗವಹಿಸಿ, ಪ್ರಯೋಜನ ಪಡೆದುಕೊಂಡರು.

ಏನಿದು ಲಿವರಿನ ಬೊಜ್ಜು?
ದೇಹವನ್ನು ಅನಾಯಾಸವಾಗಿ ಆಕ್ರಮಿಸುವ ಬೊಜ್ಜು, ಲಿವರಿನ ಬೊಜ್ಜಿಗೂ ಕಾರಣವಾಗುತ್ತದೆ ಎನ್ನುವುದು ನಿಮಗೆ ಗೊತ್ತೇ? ಇಂತಹ ಲಿವರಿನ ಬೊಜ್ಜು ಆರೋಗ್ಯಕ್ಕೆ ಎಷ್ಟು ಮಾರಕ ಎನ್ನುವುದನ್ನು ನೀವು ತಿಳಿದುಕೊಳ್ಳಲೇಬೇಕು.

ದೇಹದಲ್ಲಿ ಸಂಗ್ರಹವಾಗುವ ಬೊಜ್ಜು, ಲಿವರನ್ನು ಸೇರಿಕೊಳ್ಳುತ್ತದೆ. ಹೀಗೆ ಲಿವರಿನಲ್ಲಿ ಸಂಗ್ರಹವಾಗುವ ಬೊಜ್ಜಿನಿಂದಾಗಿ ಲಿವರಿನ ಫೈಬ್ರೋಸಿಸ್ (ಎಲಾಸ್ಟಿಕ್) ಕಡಿಮೆಗೊಳ್ಳಲು ಕಾರಣವಾಗುತ್ತದೆ. ಇದು ನಾಲ್ಕು ಹಂತದಲ್ಲಿ ಕಾಣಿಸಿಕೊಳ್ಳುತ್ತದೆ. ಮೊದಲ ಹಂತದಲ್ಲಿರುವಾಗಲೇ ನಿಮ್ಮ ಗಮನಕ್ಕೆ ಬಂದರೆ, ಸೂಕ್ತ ಚಿಕಿತ್ಸೆ ಮಾಡಬಹುದು. ಒಂದು ವೇಳೆ 3ನೇ ಅಥವಾ ಕೊನೆ ಹಂತಕ್ಕೆ ತಲುಪಿದ್ದೇ ಆದರೆ, ಲಿವರಿನ ಕಸಿ ಮಾಡುವುದು ಮಾತ್ರ ಉಳಿಯುವ ಏಕೈಕ ದಾರಿ.

ಲಿವರಿನ ಬೊಜ್ಜು ಮುಂದೆ ಡಯಾಬಿಟೀಸ್, ಹೃದಯದ ಕಾಯಿಲೆಗೂ ಕಾರಣವಾಗಬಲ್ಲುದು. ಸಸ್ಯಾಹಾರಿಗಳು ಈ ಎಲ್ಲಾ ಕಾಯಿಲೆಗಳಿಂದ ಸೇಫ್ ಎಂದು ಭಾವಿಸುವಂತಿಲ್ಲ. ಕಾರಣ, ಸಸ್ಯಾಹಾರಿಗಳಲ್ಲೇ ಲಿವರಿನ ಬೊಜ್ಜು ಹೆಚ್ಚಾಗಿ ಕಂಡುಬರುತ್ತದೆ. ಯಾಕೆಂದರೆ, ಸಸ್ಯಾಹಾರಿಗಳು ತಾವು ಸೇವಿಸುವ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಶುಗರ್ ಹಾಗೂ ಕಾರ್ಬೋಹೈಡ್ರೈಟ್ ಅನ್ನು ಒಳಗೊಂಡಿದೆ. ಆದ್ದರಿಂದ ಸಸ್ಯಾಹಾರಗಳು ಸೇರಿದಂತೆ ಪ್ರತಿಯೊಬ್ಬರು ಫೈಬ್ರೊಸ್ಕ್ಯಾನ್ ಪರೀಕ್ಷೆಗೆ ಒಳಪಡುವುದು ಉತ್ತಮ ಎನ್ನುವುದು ಚೇತನಾ ಆಸ್ಪತ್ರೆಯ ಡಾ. ಜೆ.ಸಿ. ಅಡಿಗ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here