ಮಂಗಳೂರು : ಕೃಷ್ಣಾಪುರದಲ್ಲಿ ನಡೆದ ಜಲೀಲ್ ಹತ್ಯೆ ಖಂಡಿಸಿ ಡಿ.27ರಂದು ಮಂಗಳೂರಿನಲ್ಲಿ ಹಕ್ಕೊತ್ತಾಯ ಸಭೆ ನಡೆಯಿತು. ಕ್ಲಾಕ್ ಟವರ್ ಬಳಿ ಕರ್ನಾಟಕ ಮುಸ್ಲಿಂ ಜಮಾಹತ್, ಎಸ್ ಎಸ್ ಎಫ್ ಮತ್ತು ಎಸ್ ವೈ ಎಸ್ ಆಯೋಜಿಸಿದ್ದ ಈ ಸಭೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.
ಕತ್ತಿಯೇಟು ಬಿದ್ದಿರುವುದು ಜಲೀಲ್ ಗೆ ಮಾತ್ರವಲ್ಲ ಈ ನಾಡಿನ ಕಾನೂನು ವ್ಯವಸ್ಥೆ, ಪೊಲೀಸರ ತಾಕತ್ತಿನ ಮೇಲೆ ಎಂಬ ಘೋಷಣೆಯೊಂದಿಗೆ ಹಪ್ತಾ ರಾಜಕಾರಣದ ವಿರುದ್ಧ ಸೇರಿದ್ದ ಜನ ಆಕ್ರೋಶ ಹೊರಹಾಕಿದರು.
ಈ ವೇಳೆ ಮಾತನಾಡಿದ ನಾವೂರು ಯಾಕೂಲ್ ಸಹದಿ ಮುಸ್ಲಿಂ ಸಮುದಾಯದ ಮೇಲೆ ಹಲ್ಲೆ ದೌರ್ಜನ್ಯ ನಡೆಯುತ್ತಿದ್ದರೂ ಯಾರೂ ಕೇಳುವವರು ಇಲ್ಲದಂತಾಗಿದೆ ಮುಖ್ಯ ಮಂತ್ರಿಗಳ ಕ್ರೀಯೆಗೆ ತಕ್ ಪ್ರತಿಕ್ರಿಯೆ ಹೇಳಿಕೆಯಿಂದಾಗಿ ಜಿಲ್ಲೆಗೆ ಬೆಂಕಿ ಬಿದ್ದಂತಾಗಿದೆ. ಸರಣಿ ಕೊಲೆಗಳಿಗೆ ಮುಖ್ಯ ಮಂತ್ರಿಗಳ ಈ ಹೇಳಿಕೆಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಲೀಲ್ ಹತ್ಯೆಯಾದ ದಿನ ಮುಖ್ಯಮಂತ್ರಿ ದ.ಕ ಜಿಲ್ಲಾ ಪ್ರವಾಸದಲ್ಲಿದ್ದರೂ ಕನಿಷ್ಠ ಸಾಂತ್ವಾನ ಹೇಲದಿರುವುದು ರಾಜಧರ್ಮಕ್ಕೆ ಮಾಡಿದ ದ್ರೋಹ ಎಂದು ಸಿದ್ದಿಕ್ ಮೊಂಟುಗೋಳಿ ಹೇಳಿದರು.
ಸಭೆಯಲ್ಲಿ ಹಲವು ಪಕ್ಷದ ಮುಸ್ಲಿಂ ಮುಖಂಡರು, ಸಾಮಾನ್ಯ ಕಾರ್ಯಕರ್ತರಂತೆ ಭಾಗವಹಿಸಿದ್ದ್ರರು.